1
00:00:02,000 --> 00:00:07,000
Downloaded from
YTS.BZ

2
00:00:08,000 --> 00:00:13,000
Official YIFY movies site:
YTS.BZ

3
00:00:48,500 --> 00:00:55,457
ದ ಲಾಸ್ಟ್ ಸನ್‌ರೈಸ್

4
00:00:55,458 --> 00:00:57,458
ನನ್ನ ದೇಹ ನನ್ನ ಶತ್ರುವಾಗಿದೆ.

5
00:00:59,916 --> 00:01:02,583
ಆದರೆ ನಾನು ಭೂಮಿಯ ಒಂದು ಕಣವಷ್ಟೇ.

6
00:01:04,375 --> 00:01:08,875
ಅನಾರೋಗ್ಯವೋ ಅಥವಾ ಸಾವುಬದುಕಿನ ಪ್ರಶ್ನೆಯೋ,
ಸಾಗರಕ್ಕೆ ಇದರ ಚಿಂತೆ ಇಲ್ಲ.

7
00:01:09,958 --> 00:01:12,375
ನಮ್ಮ ಹೋರಾಟಗಳು
ಅಥವಾ ನಮ್ಮ ನೋವನ್ನು ಲೆಕ್ಕಿಸಲ್ಲ,

8
00:01:14,583 --> 00:01:17,375
ಅಥವಾ ಇಂತಹ ಒಂದು ಕೊನೆಯ ಬೇಸಿಗೆಗಾಗಿ
ನಾನು ಸರ್ವಸ್ವವನ್ನೂ

9
00:01:18,708 --> 00:01:20,416
ಧಾರೆಯೆರೆಯುತ್ತಿದ್ದೆ ಎಂಬುದನ್ನೂ ಲೆಕ್ಕಿಸಲ್ಲ.

10
00:01:22,458 --> 00:01:23,666
ಒಂದು ಕೊನೆಯ ಸೂರ್ಯೋದಯ…

11
00:01:25,750 --> 00:01:26,583
ಅವನ ಜೊತೆ.

12
00:01:30,875 --> 00:01:34,291
{\an8}3 ತಿಂಗಳ ಹಿಂದೆ
ಹ್ಯೂಸ್ಟನ್, ಟೆಕ್ಸಾಸ್

13
00:02:27,166 --> 00:02:28,833
ರೈ. ರೈ.

14
00:02:34,708 --> 00:02:35,541
ರೈ!

15
00:02:36,541 --> 00:02:39,083
ಆ ಕಡೆ ಹೋಗು!
ನಾನು ನೋಡಿಕೊಳ್ಳುತ್ತೇನೆ. ಪರವಾಗಿಲ್ಲ.

16
00:02:39,666 --> 00:02:42,375
ಪರವಾಗಿಲ್ಲ. ಉಸಿರಾಡು. ಉಸಿರಾಡು, ರೈ.
ನೀನು ಉಸಿರಾಡಲೇಬೇಕು, ಚಿನ್ನ.

17
00:02:46,166 --> 00:02:49,291
ಈ ಹಂತದಲ್ಲಿ, ನೀನು ಶಸ್ತ್ರಚಿಕಿತ್ಸೆ
ಮಾಡಿಸಿಕೊಂಡರೇನೇ ಒಳ್ಳೆಯದು, ಒರಾಯ.

18
00:02:50,000 --> 00:02:52,165
{\an8}ಈಗಲೂ ನಾವು ಗೆಡ್ಡೆಗಳನ್ನು ತೆಗೆದುಹಾಕಬಹುದು,,

19
00:02:52,166 --> 00:02:53,833
{\an8}ಫಿಟ್ಸ್ ನಿಲ್ಲಿಸಬಹುದು.

20
00:02:54,583 --> 00:02:56,875
{\an8}ನಾನು ನನ್ನ ಸ್ಮರಣಶಕ್ತಿಯನ್ನೂ ಕಳೆದುಕೊಳ್ಳಬಹುದು.

21
00:02:58,666 --> 00:03:02,666
{\an8}ಜನರು, ಸ್ಥಳಗಳು, ಹೇಗೆ ನಡೆಯಬೇಕು,
ಹೇಗೆ ನೃತ್ಯ ಮಾಡಬೇಕು, ಹೇಗೆ ಬದುಕಬೇಕು.

22
00:03:03,583 --> 00:03:05,374
ನಾನು ಏನೋ ಅದನ್ನೇ ಮರೆತುಬಿಡಬಹುದು.

23
00:03:05,375 --> 00:03:07,207
ನಾವು ಮಾತಾಡುತ್ತಿರೋದು ನಿನ್ನ ಜೀವನದ ಬಗ್ಗೆ.

24
00:03:07,208 --> 00:03:08,916
ಹೌದು, ಅಮ್ಮ, ಇದು ನನ್ನ ಜೀವನದ ಪ್ರಶ್ನೆ.

25
00:03:10,166 --> 00:03:11,874
{\an8}ಸರಿ, ನಾವು ಔಷಧಿ ಹೆಚ್ಚಿಸಬಹುದು,

26
00:03:11,875 --> 00:03:14,416
{\an8}ಆದರೆ ಇದರಿಂದ
ಅಡ್ಡಪರಿಣಾಮ ಹೆಚ್ಚಾಗೋ ಸಾಧ್ಯತೆಯಿದೆ.

27
00:03:14,958 --> 00:03:18,250
{\an8}ಮಾತ್ರೆ ತಪ್ಪಿಸಿಕೊಳ್ಳದಂತೆ ಅಲಾರಾಂ ಇಡು,
ಇಲ್ಲದಿದ್ದರೆ ಇದು ಸರಿಯಾಗಿ ಕೆಲಸ ಮಾಡಲ್ಲ.

28
00:03:19,333 --> 00:03:20,500
{\an8}ಸರಿಯಾಗಿ ತೆಗೆದುಕೊಳ್ಳುತ್ತೀಯಾ?

29
00:03:23,708 --> 00:03:25,375
ರೈ. ರೈ.

30
00:03:29,541 --> 00:03:31,540
ನಿನಗೆ ಮದ್ದು ತೆಗೆದುಕೊಳ್ಳಲು
ಇಷ್ಟವಿಲ್ಲ ಅಂತ ಗೊತ್ತು.

31
00:03:31,541 --> 00:03:34,416
ಇಷ್ಟವಿಲ್ಲ ಅಲ್ಲ,
ಅದು ನನಗೆ ಭಾವನೆಗಳೇ ಇಲ್ಲದಂತೆ ಮಾಡುತ್ತೆ.

32
00:03:34,916 --> 00:03:36,874
ಸರಿ, ಲೀನಾ, ಇವಳಿಗೆ ಡ್ರೈವರ್ ಬುಕ್ ಮಾಡಿಕೊಡು.

33
00:03:36,875 --> 00:03:38,915
- ಅವಳು ಎಲ್ಲಿ ಬೇಕೋ ಅಲ್ಲಿ ಸುತ್ತಲಿ.
- ಖಂಡಿತ.

34
00:03:38,916 --> 00:03:41,624
ಹೋಟೆಲ್‌ನಿಂದ ಎರಡು ಬೀದಿಯಾಚೆ ಒಂದು ಔಷಧಾಲಯವಿದೆ,

35
00:03:41,625 --> 00:03:43,540
ಇವಳ ಔಷಧಿ ಖಾಲಿಯಾದರೆ ಅಲ್ಲಿ ಸಿಗುತ್ತೆ.

36
00:03:43,541 --> 00:03:46,915
{\an8}ಇದಲ್ಲದೆ, ಇವಳ ಫಿಟ್ಸ್ ಬಗ್ಗೆ
ಸಾಮಾನ್ಯ ವಿಷಯಗಳಿಗೆ ಗಮನ ಕೊಡು,

37
00:03:46,916 --> 00:03:50,957
{\an8}ಮಿನುಗುವ ದೀಪ ಬೇಡ, ಚೆನ್ನಾಗಿ ನಿದ್ರೆ ಮಾಡಬೇಕು,
ಒತ್ತಡವಿರಬಾರದು, ಮದ್ಯ ಕುಡಿಯಬಾರದು.

38
00:03:50,958 --> 00:03:53,541
ಚೆನ್ನಾಗಿದೆ. ನಾನು
ಸನ್ಯಾಸಿಗಳ ಜೊತೆ ಬೇಸಿಗೆ ಕಳೆಯುತ್ತೇನೆ.

39
00:03:54,708 --> 00:03:59,499
ಮೊದಲ ನಾಲ್ಕು ದಿನ ಸ್ಥಳ ವ್ಯವಸ್ಥಾಪಕರು
ಮತ್ತು ವಕೀಲರೊಂದಿಗೆ ಮಾತುಕತೆ ಇರುತ್ತೆ.

40
00:03:59,500 --> 00:04:03,333
{\an8}- ಸ್ವಲ್ಪ ಖಾಲಿ ಸಮಯ ಇಡಲು ಯತ್ನಿಸಿದೆ, ಆದರೆ…
- ಒಟ್ಟಿಗೆ ಸಮಯ ಕಳೆಯೋದು ಏನಾಯಿತು?

41
00:04:05,541 --> 00:04:07,832
ಅಮ್ಮ, ನೀನು ಬೆಳೆದ ಜಾಗ
ತೋರಿಸುತ್ತೇನೆ ಅಂತ ಮಾತು ಕೊಟ್ಟಿದ್ದೆ.

42
00:04:07,833 --> 00:04:10,874
ಇಲ್ಲ ಚಿನ್ನ, ನಾವು ಒಟ್ಟಿಗೆ
ಬಹಳಷ್ಟು ಸಮಯ ಕಳೆಯುತ್ತೇವೆ.

43
00:04:10,875 --> 00:04:12,457
ನಮಗೆ ಪೂರ್ತಿ ಆರು ವಾರ ಸಿಗುತ್ತೆ.

44
00:04:12,458 --> 00:04:14,250
ನಾವು ಮಯೋರ್ಕಾದಲ್ಲಿ ಮಜಾ ಮಾಡೋಣ.

45
00:04:14,750 --> 00:04:16,583
ನೀನು ಭರವಸೆ ಕೊಟ್ಟಂತೆ
ಮಾತ್ರೆ ತೆಗೆದುಕೊಳ್ಳಬೇಕು.

46
00:04:17,500 --> 00:04:19,958
{\an8}ಆನಾ ಟಾಡ್ ಅವರ ಕಾದಂಬರಿಯನ್ನು ಆಧರಿಸಿದೆ

47
00:04:28,958 --> 00:04:29,791
ಥ್ಯಾಂಕ್ಸ್.

48
00:04:30,666 --> 00:04:33,291
ಸರಿ, ಆ ವೇಳಾಪಟ್ಟಿಯನ್ನು
ಮತ್ತೊಮ್ಮೆ ತೋರಿಸು. ಹೂಂ.

49
00:05:14,875 --> 00:05:16,541
- ಹಲೋ.
- ಸ್ವಾಗತ.

50
00:05:18,125 --> 00:05:21,166
- ಪೆರಾ, ನಿಮಗಾಗಿ ಕಾಯುತ್ತಿದ್ದೆವು.
- ಇಸೊಲ್ದೆ ಅಂತ ಕರೆಯಿರಿ.

51
00:05:21,666 --> 00:05:22,500
ಸ್ವಾಗತ.

52
00:05:23,708 --> 00:05:26,500
ಥ್ಯಾಂಕ್ಸ್. ಇವಳು ನನ್ನ ಮಗಳು, ಒರಾಯ. ಚಿನ್ನ?

53
00:05:28,125 --> 00:05:29,874
- ಹಾಯ್.
- ಅವಳಿಗೆ ಜೆಟ್ ಲ್ಯಾಗ್ ಆಗಿದೆ.

54
00:05:29,875 --> 00:05:32,249
- ಹಾಯ್.
- ನಿನ್ನ ಕೋಣೆಗೆ ಹೋಗು, ನಾನು ಅಲ್ಲೇ ಸಿಗುತ್ತೇನೆ.

55
00:05:32,250 --> 00:05:33,874
ನನಗೆ ಕಾನ್ಫರೆನ್ಸ್ ಕರೆ ಇದೆ.

56
00:05:33,875 --> 00:05:36,458
ನಮ್ಮ ಸಹಾಯಕ ತಂಡ
ನಿಮ್ಮನ್ನು ಭೇಟಿಯಾಗಲು ಎದುರು ನೋಡುತ್ತಿದೆ.

57
00:05:40,166 --> 00:05:42,540
ನಮಸ್ಕಾರ, ನಮ್ಮ ಹೋಟೆಲ್‌ಗೆ ಸ್ವಾಗತ.

58
00:05:42,541 --> 00:05:44,250
- ಹಾಯ್.
- ಪ್ರಯಾಣ ಹೇಗಿತ್ತು?

59
00:05:44,750 --> 00:05:45,958
- ಚೆನ್ನಾಗಿತ್ತು.
- ಒಳ್ಳೆಯದು.

60
00:05:46,625 --> 00:05:48,708
ಕ್ಷಮಿಸು, ನಿನ್ನ ಕಣ್ಣಲ್ಲಿ ಏನೋ…

61
00:05:50,375 --> 00:05:52,916
ಟಿಕ್‌ಟಾಕ್‌ನಲ್ಲಿ ನೋಡಿದೆ.
ಇದಕ್ಕೆ ನನಗೆ 20 ನಿಮಿಷ ಹಿಡಿಯಿತು.

62
00:05:53,416 --> 00:05:57,166
ಇನ್ನೊಂದು ಕಣ್ಣಿನ ಮೇಲೆ ಅಷ್ಟು ಸಮಯ ಹೂಡಬಹುದಾ?

63
00:05:58,750 --> 00:06:00,625
ಕಂಪನಿ ಸಮಯದಲ್ಲಿ ಅಂದರೆ ಅಷ್ಟು ಸಮಯ ಹೂಡಬಹುದು.

64
00:06:02,875 --> 00:06:04,332
ನೀನು ಇಷ್ಟವಾದೆ. ನನ್ನನ್ನು ಹಿಂಬಾಲಿಸು.

65
00:06:04,333 --> 00:06:06,290
ನಾನು ನಿನ್ನ ಕೋಣೆ ತೋರಿಸುತ್ತೇನೆ. ಹೀಗೆ ಬಾ.

66
00:06:06,291 --> 00:06:08,041
- ಅಂದಹಾಗೆ, ನಾನು ಅಮಾರ.
- ನಾನು ರೈ.

67
00:06:08,541 --> 00:06:10,000
ಇದು ಲಾಬಿ.

68
00:06:10,500 --> 00:06:12,415
ನಿನಗೆ ಬೇಕಾದಾಗ ಇಲ್ಲಿಗೆ ಬಂದರೆ
ನಾನು ಸಿಗುತ್ತೇನೆ.

69
00:06:12,416 --> 00:06:15,000
ಸ್ಪೇನ್‌ನ ಈ ಸ್ವರ್ಗಕ್ಕೆ ಬಂದ ಕಾರಣ?

70
00:06:15,500 --> 00:06:17,333
ಅಮ್ಮನಿಗೆ ರಿಯಲ್ ಎಸ್ಟೇಟ್ ವ್ಯವಹಾರವಿದೆ.

71
00:06:18,166 --> 00:06:20,375
ಅವಳ ಕಂಪನಿ ಹೊಸ ಹೋಟೆಲ್ ಕಟ್ಟಬೇಕೆಂದಿದೆ.

72
00:06:20,916 --> 00:06:24,208
ಇನ್ನೊಂದು ಹೋಟೆಲ್, ಅದ್ಭುತ.
ಸ್ಥಳೀಯರಿಗೆ ಇಷ್ಟವಾದ ಹಾಗೇ.

73
00:06:24,708 --> 00:06:27,666
- ನಿನಗೆ ದ್ವೀಪದ ಪರಿಚಯವಿದೆಯಾ?
- ಇಲ್ಲ, ಇದೇ ಮೊದಲ ಬಾರಿಗೆ ಬಂದಿದ್ದೇನೆ.

74
00:06:28,500 --> 00:06:30,374
ನಾನು ಟೆಕ್ಸಾಸ್‌ನಿಂದ ಹೆಚ್ಚು ಹೊರಗೆ ಹೋಗಿಲ್ಲ.

75
00:06:30,375 --> 00:06:33,165
ಟೆಕ್ಸಾನ್‌ನವರಾ? ಅದ್ಭುತ.

76
00:06:33,166 --> 00:06:36,125
ರೈ, ನೀನು ಮೋಜಿಗಾಗಿ ಏನು ಮಾಡಲು ಇಷ್ಟಪಡುತ್ತೀಯ?

77
00:06:37,333 --> 00:06:40,125
ಗೊತ್ತಿಲ್ಲ. ಬಹುಶಃ ಬೀಚ್‌ಗೆ ಹೋಗಬಹುದು
ಅಥವಾ ಪೂಲ್ ಬಳಿ ಮಲಗಬಹುದು.

78
00:06:40,666 --> 00:06:43,625
ಅದನ್ನು ಮಾಡಬಹುದು,
ಆದರೆ ಇನ್ನೂ ಹಲವಾರು ಆಯ್ಕೆಗಳಿವೆ.

79
00:06:44,166 --> 00:06:46,290
- ನಿನಗೆ ಗುಹೆ ಇಷ್ಟವಾ?
- ಗುಹೆಯಾ?

80
00:06:46,291 --> 00:06:47,207
ಬಾಯ್‌ಫ್ರೆಂಡ್?

81
00:06:47,208 --> 00:06:49,750
- ಇಲ್ಲ.
- ಇಲ್ಲಿನ ಸ್ಥಳೀಯರು ತುಂಬಾ ಸುಂದರವಾಗಿದ್ದಾರೆ.

82
00:06:50,250 --> 00:06:52,999
ಕಾರ್ತೇಜ್‌ನವರು, ರೋಮನ್ನರು,
ಮಿಶ್ರ ಜನಾಂಗದವರಿದ್ದಾರೆ,

83
00:06:53,000 --> 00:06:55,165
ಫ್ರಾನ್ಸ್ ಮತ್ತು ಸ್ಪೇನ್‌ನಿಂದ ಬಂದ
ಕ್ಯಾಟಲಾನ್ ವಸಾಹತುಗಾರರು.

84
00:06:55,166 --> 00:06:58,665
ಬಫೆ ಥರ, ನಿನಗೆ ಯಾರು ಇಷ್ಟವೋ ಅವರನ್ನು ಆರಿಸಿಕೋ.

85
00:06:58,666 --> 00:07:01,083
ಮರಗಳ ಮೇಲೆ ಆಡುಗಳನ್ನು ನೋಡಿದರೂ ಆಶ್ಚರ್ಯಪಡಬೇಡ.

86
00:07:01,791 --> 00:07:03,708
- ಮರಗಳ ಮೇಲೆ ಆಡುಗಳಾ?
- ಹೌದು, ಮರಗಳ ಮೇಲೆ ಆಡುಗಳು.

87
00:07:04,291 --> 00:07:07,707
ನನ್ನ ಮಾತಿನ ಅರ್ಥ,
ಇದು ನಿನಗೆ ಮರೆಯಲಾರದ ಬೇಸಿಗೆ ಆಗುತ್ತೆ.

88
00:07:07,708 --> 00:07:10,040
ನಿನ್ನ ಅಮ್ಮನ ಕೋಣೆ ಹಾಲ್‌ನ ಆಚೆ ಇದೆ,

89
00:07:10,041 --> 00:07:11,291
ಮತ್ತು ಇದು ನಿನ್ನದು.

90
00:07:18,000 --> 00:07:20,291
ನಿನ್ನ ಅಮ್ಮನ ಕಂಪನಿ
ಅದ್ಭುತವಾದ ಸ್ಥಳವನ್ನು ನಿರ್ಮಿಸಿದೆ.

91
00:07:22,208 --> 00:07:23,041
ಹೌದು.

92
00:07:27,791 --> 00:07:28,874
ಕ್ಷಮಿಸು.

93
00:07:28,875 --> 00:07:30,165
6:00
ಔಷಧಿ ಸಮಯ

94
00:07:30,166 --> 00:07:31,415
ಸರಿ, ನಾನು ಹೋಗುತ್ತೇನೆ.

95
00:07:31,416 --> 00:07:34,040
ನಿನಗೆ ಏನಾದರೂ ಬೇಕಾದರೆ ನನಗೆ ಕರೆ ಮಾಡು.

96
00:07:34,041 --> 00:07:35,291
ಆಫ್ ವೀಡರ್‌ಝೇನ್. ಬೈ-ಬೈ.

97
00:07:36,250 --> 00:07:37,125
ಥ್ಯಾಂಕ್ಸ್, ಅಮಾರ.

98
00:08:02,333 --> 00:08:04,374
ನಾಳೆಯ ವೇಳಾಪಟ್ಟಿಯಲ್ಲಿ ಏನಿದೆ?

99
00:08:04,375 --> 00:08:08,125
ಸತತ ಸಭೆಗಳು ಮತ್ತು ಪಾರ್ಟಿ ಯೋಜನೆ ಇದೆ.

100
00:08:09,416 --> 00:08:10,250
ಯಾವ ಪಾರ್ಟಿ?

101
00:08:11,166 --> 00:08:12,000
ನಿಧಿಸಂಗ್ರಹಣೆಗಾಗಿ.

102
00:08:12,500 --> 00:08:16,124
ಹೋಟೆಲ್ ನಿರ್ಮಿಸಲು ನಮಗೆ
ಅವರು ಅವಕಾಶ ನೀಡಿದ್ದಕ್ಕಾಗಿ,

103
00:08:16,125 --> 00:08:18,832
ನಾವು ಮಯೋರ್ಕಾದ ಮಕ್ಕಳಿಗಾಗಿ
ಒಂದು ಕಲಾ ಕೇಂದ್ರ ನಿರ್ಮಿಸುತ್ತಿದ್ದೇವೆ.

104
00:08:18,833 --> 00:08:20,041
ಒಳ್ಳೆಯ ಕೆಲಸ.

105
00:08:25,000 --> 00:08:26,166
ಏನಾದರೂ ತೊಂದರೆಯಾ?

106
00:08:26,666 --> 00:08:30,166
ಕಂಪನಿಯಿಂದ. ಶರತ್ಕಾಲದ ಸಮಯಕ್ಕೆ
ವಾಪಸ್ ಹೋಗುತ್ತೇನಾ ಅಂತ ತಿಳಿದುಕೊಳ್ಳಲು.

107
00:08:31,541 --> 00:08:33,457
ನೀನು ವಾಪಸ್ ಹೋಗುತ್ತೀಯ, ಅಲ್ವಾ?

108
00:08:33,458 --> 00:08:35,040
ಈ ಬೇಸಿಗೆಗೆ ವಿಶ್ರಾಂತಿ ಪಡೆದು,

109
00:08:35,041 --> 00:08:36,833
ನಂತರ ಕೆಲಸಕ್ಕೆ ವಾಪಸ್ ಹೋಗುತ್ತೀಯ, ಅಲ್ವಾ?

110
00:08:38,708 --> 00:08:39,541
ಹೌದು.

111
00:08:42,041 --> 00:08:44,915
ಋತುವಿನ ಅಂತ್ಯವನ್ನು ಆಚರಿಸಲು
ನಾವೆಲ್ಲರೂ ರಾತ್ರಿ ಹೊರಗೆ ಹೋಗುತ್ತಿದ್ದೇವೆ.

112
00:08:44,916 --> 00:08:46,208
ನೀನಿದ್ದರೆ ಚೆನ್ನಾಗಿರುತ್ತಿತ್ತು.

113
00:08:46,791 --> 00:08:49,125
ಹೇಗಿದ್ದೀಯ? ಹೊಸ ಔಷಧಿ ಸಹಾಯ ಮಾಡುತ್ತಿದೆಯಾ?

114
00:08:49,708 --> 00:08:51,958
ಇನ್ನೂ… ಇದಕ್ಕೆ ಹೊಂದಿಕೊಳ್ಳಬೇಕು.

115
00:08:52,625 --> 00:08:54,666
ನಾವೆಲ್ಲರೂ ನಿನ್ನ ಬಗ್ಗೆ
ತುಂಬಾ ಚಿಂತಿಸುತ್ತಿದ್ದೇವೆ.

116
00:08:55,291 --> 00:08:56,708
ಮೊದಲನೆಯದಾಗಿ, ಹಾಗೆ ಮಾಡಬೇಡಿ.

117
00:08:57,750 --> 00:08:59,250
ಎರಡನೆಯದಾಗಿ, ನಾನು ಚೆನ್ನಾಗಿದ್ದೇನೆ.

118
00:09:00,166 --> 00:09:02,583
ಅಮ್ಮ ನಾಳೆಗೆ ತುಂಬಾ ಪ್ಲಾನ್ ಮಾಡಿದ್ದಾಳೆ,

119
00:09:03,083 --> 00:09:06,790
- ಅವಳು ಬೆಳೆದ ಜಾಗ ತೋರಿಸುತ್ತಾಳೆ.
- ನಿನ್ನ ಅಮ್ಮ ಸೂಪರ್.

120
00:09:06,791 --> 00:09:09,875
ನಾನು ಹೇಳಿದ್ದನ್ನು ಮರೆತುಬಿಡು. ನಾವೂ
ನಿಮ್ಮ ಜೊತೆ ಬಂದಿದ್ದರೆ ಚೆನ್ನಾಗಿರ್ತಿತ್ತು.

121
00:09:10,375 --> 00:09:12,332
ಸ್ಪೇನ್‌ನಲ್ಲಿ ಸುಂದರ ಯುವಕ ಸಿಕ್ಕರೆ ಹೇಳು.

122
00:09:12,333 --> 00:09:13,457
- ಸರಿಯಾ?
- ಆಯ್ತು.

123
00:09:13,458 --> 00:09:15,541
- ಖಂಡಿತ.
- ಲವ್ ಯು, ಚಿನ್ನ. ಕರೆ ಮಾಡುತ್ತಿರು.

124
00:09:16,041 --> 00:09:17,790
ಲವ್ ಯು, ರೈ!

125
00:09:17,791 --> 00:09:19,208
ಲವ್ ಯು. ಬೈ.

126
00:09:23,875 --> 00:09:25,333
11:00
ಔಷಧಿ ಸಮಯ

127
00:10:13,833 --> 00:10:16,832
ಸುಮಾರು 150 ಅತಿಥಿಗಳು ಬರುತ್ತಾರೆ.

128
00:10:16,833 --> 00:10:18,082
ಅದ್ಭುತ.

129
00:10:18,083 --> 00:10:21,833
ಹೇ, ರೈ, ನಿನಗೆ
ಹಾಲು ಬಣ್ಣ ಇಷ್ಟವೋ ಗೋಧಿ ಬಣ್ಣವೋ?

130
00:10:22,750 --> 00:10:25,040
ಅವೆಲ್ಲಕ್ಕೂ ಆಹಾರದ ಹೆಸರನ್ನೇ ಏಕೆ ಇಡಬೇಕು?

131
00:10:25,041 --> 00:10:25,958
ಗೊತ್ತಿಲ್ಲ.

132
00:10:28,083 --> 00:10:30,958
ಚಿನ್ನ, ನೀನು ಹೋಗಿ ಮೋಜು ಮಾಡು,
ನಾವು ನಂತರ ಭೇಟಿಯಾಗೋಣವಾ?

133
00:10:32,500 --> 00:10:34,915
- ನಾನು ಬೀಚ್‌ಗೆ ಹೋಗುತ್ತಿದ್ದೆ.
- ಸರಿ, ಅದು ಒಳ್ಳೆಯ ಐಡಿಯಾ.

134
00:10:34,916 --> 00:10:35,750
ಡ್ರೈವರ್ ಜೊತೆ ಹೋಗು.

135
00:10:36,416 --> 00:10:38,082
ಹೆಚ್ಚುವರಿ ಮಾತ್ರೆ ಇಟ್ಟುಕೊಂಡಿರು.

136
00:10:38,083 --> 00:10:40,291
ನೀರು ಕೂಡ.
ಸ್ವಲ್ಪ ಸನ್‌ಸ್ಕ್ರೀನ್ ಹಚ್ಚಿಕೋ, ಚಿನ್ನ.

137
00:10:40,791 --> 00:10:42,250
- ಮತ್ತು, ರೈ…
- ಎಚ್ಚರಿಕೆಯಿಂದಿರಬೇಕಾ?

138
00:10:43,625 --> 00:10:44,458
ಮಜಾ ಮಾಡು.

139
00:10:47,000 --> 00:10:48,208
ತೆಂಗಿನ ಹಾಲಿನ ಬಣ್ಣ ಇಷ್ಟ.

140
00:10:50,041 --> 00:10:52,208
ನೋಡಿದಿರಾ? ಕಾಳಜಿ ಇಲ್ಲ ಅಂತ ನಟಿಸುತ್ತಾಳೆ,
ಆದರೆ ಕಾಳಜಿ ಇದೆ.

141
00:10:57,708 --> 00:10:59,500
- ಹಾಯ್.
- ಹಾಯ್.

142
00:11:00,500 --> 00:11:01,500
ಬೆಳಿಗ್ಗೆ ಜನ ಇರಲಿಲ್ಲವಾ?

143
00:11:02,708 --> 00:11:04,416
- ಯಾಕೆ?
- ನಿನ್ನ ಕಣ್ಣು.

144
00:11:05,458 --> 00:11:07,249
- ನನಗೆ ಐಲೈನರ್ ಇಷ್ಟವಾಯಿತು.
- ಥ್ಯಾಂಕ್ಸ್.

145
00:11:07,250 --> 00:11:09,082
ಎಲ್ಲಿಗೆ ಪಯಣ?

146
00:11:09,083 --> 00:11:12,416
ಯಾವ ಬೀಚ್‌ಗೆ ಹೋಗಲಿ ಅಂತ
ನಿನ್ನನ್ನು ಕೇಳಬೇಕೆಂದಿದ್ದೆ.

147
00:11:13,291 --> 00:11:15,041
ನನಗೆ ಒಳ್ಳೆಯ ಜಾಗ ಗೊತ್ತು.

148
00:11:15,666 --> 00:11:17,166
ಇದು ನಿಜಕ್ಕೂ ಒಂದು ಗುಪ್ತ ರತ್ನ.

149
00:11:17,791 --> 00:11:19,125
- ಥ್ಯಾಂಕ್ಸ್.
- ಮಜಾ ಮಾಡು.

150
00:11:20,416 --> 00:11:21,250
ಸರಿ.

151
00:11:51,458 --> 00:11:53,333
{\an8}ನಾನು ಹೃದಯ
ಮಯೋರ್ಕಾ

152
00:14:56,208 --> 00:14:57,208
ಏನಾದರೂ ಸಹಾಯ ಬೇಕಾ?

153
00:15:01,125 --> 00:15:02,291
ಇಲ್ಲ, ಇಲ್ಲ.

154
00:15:03,500 --> 00:15:05,250
- ಗುರಾಯಿಸೋದು ಅಸಭ್ಯ, ಮಿಸ್.
- ನಾನು…

155
00:15:06,083 --> 00:15:07,625
ನಾನು ಗುರಾಯಿಸುತ್ತಿರಲಿಲ್ಲ. ಹಾಗೇ…

156
00:15:08,916 --> 00:15:10,166
ನಿನ್ನ ಹಿಂದೆ ನೋಡುತ್ತಿದ್ದೆ.

157
00:15:12,458 --> 00:15:14,166
ವಾಹ್. ಸುಂದರ ನೋಟ.

158
00:15:17,458 --> 00:15:20,082
- ಸರಿ, ನಾನು ಹೋಗುತ್ತೇನೆ.
- ಹೌದು, ನೀನು ಹೋಗಬೇಕು.

159
00:15:20,083 --> 00:15:22,916
- ಏನಂದೆ?
- ನೀನು ಹೋಗಬೇಕು ಅಂದೆ.

160
00:15:23,833 --> 00:15:26,500
- ನಾನು ತಪ್ಪು ಮಾಡಿದೆನಾ? ನಿನಗೆ ಸಮಸ್ಯೆ ಇದೆಯಾ?
- ನನಗೆ ಸಮಸ್ಯೆ ಇದೆ.

161
00:15:27,375 --> 00:15:29,583
ಇದು ಸ್ಥಳೀಯರ ಬೀಚ್.

162
00:15:30,166 --> 00:15:33,207
ನಾವು ಸೂರ್ಯಸ್ನಾನ ಮಾಡುವಾಗ
ಪ್ರವಾಸಿಗರು ಗುರಾಯಿಸೋದು ನಮಗಿಷ್ಟವಿಲ್ಲ.

163
00:15:33,208 --> 00:15:35,874
ಕ್ಷಮಿಸು. ಇದು ಸ್ಥಳೀಯರಿಗೆ ಮಾತ್ರ
ಇರೋ ಬೀಚ್ ಅಂತ ಗೊತ್ತಿರಲಿಲ್ಲ.

164
00:15:35,875 --> 00:15:37,165
ನನಗೆ ಈಜುವ ಆಸೆ ಇತ್ತು.

165
00:15:37,166 --> 00:15:41,500
ಮಾರೆಸ್ & ಮಾರ್ ಹೋಟೆಲ್‌ನಲ್ಲಿನ ಪೂಲ್
ನಿನಗೆ ಇಷ್ಟವಾಗಬಹುದು.

166
00:15:42,000 --> 00:15:43,000
ನಿನಗೆ ಹೇಗೆ…

167
00:15:52,166 --> 00:15:54,583
ಏಕೆ? ನಾನು ನಿನ್ನ ಗಮನ ಸೆಳೆಯುತ್ತಿದ್ದೇನಾ?

168
00:15:56,875 --> 00:15:57,875
ಇಲ್ಲ.

169
00:15:59,500 --> 00:16:00,541
ನಾನು ಹೋಗುತ್ತೇನೆ.

170
00:16:44,625 --> 00:16:47,000
ಹಾಯ್. ಹಲೋ. ನಿಮ್ಮ ಹತ್ತಿರ…

171
00:16:48,041 --> 00:16:48,875
ಸರಿ.

172
00:16:56,541 --> 00:16:57,791
ನಮಸ್ಕಾರ. ಇಲ್ಲಿ ಕೇಳಿ.

173
00:16:58,625 --> 00:16:59,791
ನೀವು ಇಂಗ್ಲೀಶ್ ಮಾತಾಡುತ್ತೀರಾ?

174
00:17:01,250 --> 00:17:03,708
ನನ್ನ ಹತ್ತಿರ ಹಲವು ವರ್ಣಚಿತ್ರಗಳು ಮಾರಾಟಕ್ಕಿವೆ.

175
00:17:04,458 --> 00:17:06,375
ನನಗೆ… ನಿಮ್ಮ ಬಳಿ ಚಾರ್ಜರ್ ಇದೆಯಾ?

176
00:17:08,083 --> 00:17:09,875
ಬಹುಶಃ ಬಲ ಬದಿಯಲ್ಲಿದೆ? ಅಥವಾ ಮೇಲಿದೆ?

177
00:17:10,875 --> 00:17:11,790
ನನಗೆ ನಿಮ್ಮ…

178
00:17:11,791 --> 00:17:12,666
ಕ್ಷಮಿಸಿ.

179
00:17:13,250 --> 00:17:15,750
ಕ್ಷಮಿಸಿ. ನಿಮ್ಮ ದಿನ ಚೆನ್ನಾಗಿರಲಿ. ಥ್ಯಾಂಕ್ಸ್.

180
00:17:19,375 --> 00:17:20,999
- ಓ ದೇವರೇ.
- ಕ್ಯಾಬ್ರಾನ್.

181
00:17:21,000 --> 00:17:21,833
ಕ್ಷಮಿಸು.

182
00:17:23,750 --> 00:17:24,583
ಕ್ಷಮಿಸು.

183
00:17:28,208 --> 00:17:29,208
ಕೇಳು, ಮಿಸ್.

184
00:17:29,916 --> 00:17:32,582
ನೀನು ನೋಡಬಹುದು ಆದರೆ ಮುಟ್ಟಬಾರದು.

185
00:17:32,583 --> 00:17:33,957
ಪೊಲೀಸ್ ಕಂಪ್ಲೇಂಟ್ ಕೊಡಲಾ?

186
00:17:33,958 --> 00:17:36,041
ತಮಾಷೆ ಮಾಡಬೇಡ. ನಾನು ಹೊಟೇಲ್‌ಗೆ ಹೋಗ್ತಿದ್ದೇನೆ.

187
00:17:37,375 --> 00:17:39,041
ದಯವಿಟ್ಟು, ನನಗೆ ದಾರಿ ಬಿಟ್ಟರೆ.

188
00:17:49,333 --> 00:17:50,500
ಆ ದಾರಿ ಅಲ್ಲ.

189
00:17:52,666 --> 00:17:53,833
ಆ ದಾರಿಯೂ ಅಲ್ಲ.

190
00:17:55,625 --> 00:17:57,583
ದಾರಿ ತಪ್ಪಿದೆಯಾ, ಮಿಸ್ ಅಮೇರಿಕಾ?

191
00:17:58,083 --> 00:17:58,916
ಇಲ್ಲ, ದಾರಿ ತಪ್ಪಿಲ್ಲ.

192
00:18:00,208 --> 00:18:02,416
ಈ ಸುಂದರವಾದ
ಅಂಕುಡೊಂಕಾದ ಬೀದಿಗಳಲ್ಲಿ ವಿಹರಿಸುತ್ತಿದ್ದೇನೆ.

193
00:18:03,833 --> 00:18:04,791
ನೀನು ನಿರಾಕರಿಸಬಹುದು,

194
00:18:05,541 --> 00:18:07,958
ಅಥವಾ ದಾರಿ ತಪ್ಪಿದ್ದನ್ನು ಒಪ್ಪಿಕೊಂಡು
ನನ್ನ ಸಹಾಯ ಕೇಳಬಹುದು.

195
00:18:08,708 --> 00:18:09,541
ನಾನು ದಾರಿ ತಪ್ಪಿಲ್ಲ.

196
00:18:10,791 --> 00:18:11,791
ಸಹಾಯ ಬೇಕಿಲ್ಲ, ಥ್ಯಾಂಕ್ಸ್.

197
00:18:12,625 --> 00:18:14,749
ನೀನೇನು ಮಾಡುತ್ತಿದ್ದೀಯ?
ನನ್ನನ್ನು ಹಿಂಬಾಲಿಸುತ್ತಿದ್ದೀಯಾ?

198
00:18:14,750 --> 00:18:18,958
ಹೌದು. ನೀನು ಬೀಚ್‌ನಲ್ಲಿ ನನ್ನನ್ನು
ಕಣ್ತುಂಬಿಕೊಳ್ಳುತ್ತ ನನ್ನ ಮೇಲೆ ಪ್ರಭಾವ ಬೀರಿದೆ,

199
00:18:19,541 --> 00:18:21,290
ನಿನ್ನಿಂದ ದೂರವಿರಲು ಸಾಧ್ಯವಾಗಲಿಲ್ಲ.

200
00:18:21,291 --> 00:18:23,416
- ನೀನು ಯಾವಾಗಲೂ ಇಷ್ಟು ವಿಚಿತ್ರವಾಗಿರ್ತೀಯಾ?
- ವಿಚಿತ್ರವಾ?

201
00:18:24,000 --> 00:18:25,707
ನನಗೆ ನಿನ್ನ ಬಗ್ಗೆ ಚಿಂತೆಯಾಗಿತ್ತು,

202
00:18:25,708 --> 00:18:27,915
ಆದರೆ ನನಗೆ ಮಾಡಲು ತುಂಬಾ ಕೆಲಸಗಳಿವೆ,

203
00:18:27,916 --> 00:18:31,500
ಆದ್ದರಿಂದ ಸಹಾಯ ಬೇಕಿದ್ದರೆ
ಹತ್ತು ಸೆಕೆಂಡಲ್ಲಿ ಹೇಳು.

204
00:18:40,791 --> 00:18:41,625
ಸರಿ.

205
00:18:44,458 --> 00:18:45,375
ಸರಿ.

206
00:18:50,375 --> 00:18:52,625
ಮಾರೆಸ್ & ಮಾರ್ ಹೋಟೆಲ್‌ಗೆ ದಾರಿ.

207
00:18:53,250 --> 00:18:54,083
ನೀನಿದನ್ನು ಹಿಡಿದುಕೋ,

208
00:18:54,666 --> 00:18:57,416
ನಾನು ನಿನ್ನ ಕೊಲೆ ಮಾಡಲ್ಲ
ಅಂತ ನಿನಗೆ ನಂಬಿಕೆ ಬರಲಿ.

209
00:19:04,166 --> 00:19:06,166
- ಆ ಕಡೆ.
- ಆ ಕಡೆಗೇ ಹೋಗುತ್ತಿದ್ದೆ.

210
00:19:11,750 --> 00:19:13,333
ಸುಂದರ ಪುರುಷರು ಮಹಿಳೆಯರನ್ನು ಕೊಲ್ಲುತ್ತಾರೆ.

211
00:19:14,416 --> 00:19:17,500
ಆದರೆ ಅವರು ಆಕರ್ಷಕವಾಗಿಯೂ ಇರುತ್ತಾರೆ,
ಆದ್ದರಿಂದ ನೀನು ಕೊಲೆ ಮಾಡಲ್ಲ.

212
00:19:18,791 --> 00:19:20,375
ಅಂದರೆ ನಾನು ಸುಂದರವಾಗಿದ್ದೇನೆ ಅಂತಿದ್ದೀಯಾ?

213
00:19:25,708 --> 00:19:27,541
ನಾನು ಆಗ ನಿನ್ನನ್ನು ಗುರಾಯಿಸುತ್ತಿರಲಿಲ್ಲ.

214
00:19:28,416 --> 00:19:29,458
ಗಮನಿಸುತ್ತಿದ್ದೆ ಅಷ್ಟೇ.

215
00:19:30,250 --> 00:19:32,208
- ಎಲ್ಲರನ್ನೂ.
- ಹೌದು.

216
00:19:32,916 --> 00:19:35,250
ಬೆತ್ತಲೆ ಪುರುಷರ ಹೊಸ ಪ್ರಭೇದ,

217
00:19:35,791 --> 00:19:38,415
ಮಯೋರ್ಕಾದ ಬಿಳಿ ಮರಳಿನ
ಕಡಲತೀರದಲ್ಲಿ ಗಮನಿಸ್ತಿದ್ದೆ.

218
00:19:38,416 --> 00:19:41,291
- ಟೆಕ್ಸಾಸ್‌ನಲ್ಲಿ ನಗ್ನ ಕಡಲತೀರಗಳಿಲ್ಲ.
- ನಿಜವಾಗಿಯೂ?

219
00:19:42,541 --> 00:19:46,541
ಹಾಗಾದರೆ ನೀನಿವತ್ತು ಮಾನವ ಅಂಗರಚನಾಶಾಸ್ತ್ರದ
ಬಗ್ಗೆ ಹೊಸ ವಿಷಯ ಕಲಿತೆ ಅಂದುಕೊಳ್ಳುತ್ತೇನೆ.

220
00:20:06,416 --> 00:20:07,250
ನಿನಗೂ ಬೇಕಾ?

221
00:20:08,000 --> 00:20:10,833
- ಇಲ್ಲ, ಬೇಡ.
- ನೀನು ಜೊಲ್ಲು ಸುರಿಸುತ್ತಿರೋದನ್ನು ನೋಡಿದೆ.

222
00:20:11,750 --> 00:20:13,041
ಹಠ ಮಾಡಬೇಡ.

223
00:20:13,625 --> 00:20:14,750
ಹಠ ಮಾಡುತ್ತಿಲ್ಲ.

224
00:20:16,666 --> 00:20:17,500
ಪ್ರಯತ್ನಿಸಿ ನೋಡು.

225
00:20:25,291 --> 00:20:27,333
ಇದನ್ನು ಎನ್ಸೈಮಾಡ ಎಂದು ಕರೆಯುತ್ತೇವೆ.

226
00:20:28,083 --> 00:20:30,250
ಕ್ರೋಸೆಂಟ್ ತರಹ ಇದೆ.

227
00:20:30,750 --> 00:20:32,165
- ಆದರೆ ಅದಕ್ಕಿಂತ ಚೆನ್ನಾಗಿದೆ.
- ತುಂಬಾ.

228
00:20:32,166 --> 00:20:34,125
ನನಗೆ ಹಸಿವಾಗಿದೆ
ಅಂತ ಗೊತ್ತಿರಲಿಲ್ಲ. ಥ್ಯಾಂಕ್ಸ್.

229
00:20:35,041 --> 00:20:37,666
ಏನಾದರೂ ತಿನ್ನುತ್ತೀಯ ಅಂದರೆ
ನಾವು ಹೋಗಿ ತಿನ್ನಬಹುದು.

230
00:20:38,791 --> 00:20:39,916
ಜೊತೆ ಬರಲು ಕರೆಯುತ್ತಿದ್ದೀಯಾ?

231
00:20:42,875 --> 00:20:44,124
ಇಲ್ಲ.

232
00:20:44,125 --> 00:20:45,833
ನಿನ್ನ ಹೋಟೆಲ್‌ನಲ್ಲಿ ರೂಮ್ ಸರ್ವಿಸ್ ಇದೆ.

233
00:20:52,083 --> 00:20:54,583
ನಿನ್ನ ಹೋಟೆಲ್‌ನಲ್ಲಿರೋ ಹುಲ್ಲುಹಾಸು
ನಿನಗಿಷ್ಟ, ಅಲ್ವಾ?

234
00:20:55,166 --> 00:20:57,375
ನಿನಗೆ ಹುಲ್ಲಿನ ಬಗ್ಗೆಯೂ ಸಮಸ್ಯೆ ಇದೆಯಾ?

235
00:20:58,333 --> 00:20:59,166
ಹೌದು, ಇದೆ.

236
00:21:00,625 --> 00:21:03,500
ಈ ಹುಲ್ಲನ್ನು ಹಸಿರಾಗಿಡಲು ಬಳಸೋ ರಾಸಾಯನಿಕಗಳು
ನಾವು ಮೀನುಗಾರಿಕೆಗೆ ಉಪಯೋಗಿಸುವ

237
00:21:04,125 --> 00:21:06,583
ನೀರಿಗೆ ಸೋರಿಕೆಯಾಗುತ್ತೆ ಅಂತ ಗೊತ್ತಾ?

238
00:21:07,166 --> 00:21:09,583
ಪ್ರವಾಸಿಗರಿಗೆ ತೊಂದರೆಯಾಗದಿದ್ದರೆ

239
00:21:11,125 --> 00:21:12,125
ಯಾರಿಗೂ ಚಿಂತೆ ಇಲ್ಲ, ಅಲ್ವಾ?

240
00:21:12,708 --> 00:21:15,625
ಈ ದ್ವೀಪ
ಪ್ರವಾಸಿಗರು ಬಂದು ಹಾಳಾಯಿತು ಅನ್ನುತ್ತಿರುವೆ.

241
00:21:16,166 --> 00:21:19,499
"ಐ ಲವ್ ಮಯೋರ್ಕಾ" ಟೀ ಶರ್ಟ್‌ ಅಥವಾ ಕೀಚೈನ್‌
ಅನ್ನು ಯಾರು ಖರೀದಿಸುತ್ತಾರೆ ಅಂದುಕೊಂಡೆ?

242
00:21:19,500 --> 00:21:22,291
ಮಯೋರ್ಕಾದ ಜನರಿಗೆ ಏನು ಒಳ್ಳೆಯದು
ಅಂತ ನಿನಗೆ ಗೊತ್ತಿರೋದು ನನಗೆ ಖುಷಿಯಾಗುತ್ತಿದೆ.

243
00:21:22,958 --> 00:21:24,208
ಇಲ್ಲಿ ಎಷ್ಟು ಸಮಯದಿಂದ ಇದ್ದೀಯ?

244
00:21:28,416 --> 00:21:30,665
ಒಂದು ದಿನದಿಂದ. ಆದರೆ ನನ್ನ ಅಮ್ಮ ಇಲ್ಲಿಯವಳೇ.

245
00:21:30,666 --> 00:21:31,500
ಹೌದಾ?

246
00:21:32,583 --> 00:21:35,416
ನಿನ್ನ ಪರಿಣತಿ ನನಗೆ ಗೊತ್ತಿರಲಿಲ್ಲ, ಕ್ಷಮಿಸು.

247
00:21:44,791 --> 00:21:45,791
ಬೈ.

248
00:22:01,541 --> 00:22:02,416
ಹೇ.

249
00:22:03,416 --> 00:22:04,958
ಅಷ್ಟು ಬೇಗ ಮನಸ್ಸು ಬದಲಾಯಿಸಿದೆಯಾ?

250
00:22:05,666 --> 00:22:07,583
ಎರಡು ನಿಮಿಷ ದೂರವಿರಲು ಆಗಲಿಲ್ಲವಾ?

251
00:22:08,125 --> 00:22:10,416
ಇಲ್ಲ, ನನಗೆ ನನ್ನ ಫೋನ್ ಬೇಕು.

252
00:22:12,666 --> 00:22:13,625
ತಗೋ.

253
00:22:21,833 --> 00:22:23,625
ಕನಿಷ್ಠ ಪಕ್ಷ ಭಾಷೆಯನ್ನು ಕಲಿಯುತ್ತಿದ್ದೀಯ.

254
00:22:26,375 --> 00:22:28,332
ಚಿನ್ನ, ಎಲ್ಲಿಗೆ ಹೋಗಿದ್ದೆ? ಚೆನ್ನಾಗಿದ್ದೀಯಾ?

255
00:22:28,333 --> 00:22:31,207
ಚೆನ್ನಾಗಿದ್ದೇನೆ. ಬೀಚ್‌ಗೆ ಹೋಗಿದ್ದೆ,
ನನ್ನ ಫೋನ್‌ನಲ್ಲಿ ಚಾರ್ಜ್ ಇರಲಿಲ್ಲ.

256
00:22:31,208 --> 00:22:32,165
ಚಾರ್ಜ್ ಇರಲಿಲ್ಲವಾ?

257
00:22:32,166 --> 00:22:34,332
ಚಿನ್ನ, ಫೋನ್‌ನಲ್ಲಿ ಚಾರ್ಜ್‌ ಇಟ್ಟುಕೊಳ್ಳಬೇಕು.

258
00:22:34,333 --> 00:22:35,916
ಮಾತ್ರೆ ತಿಂದಿಲ್ಲವಾ?

259
00:22:37,750 --> 00:22:40,708
ಅಮ್ಮ, ಅಮ್ಮ, ನನ್ನ ಹತ್ತಿರ
ಹೆಚ್ಚುವರಿ ಮಾತ್ರೆ ಇತ್ತು. ಪರವಾಗಿಲ್ಲ.

260
00:22:41,875 --> 00:22:42,833
ಸರಿ, ಆಯ್ತು.

261
00:22:43,333 --> 00:22:44,416
ನನ್ನ ಚಿಂತೆ ನಿನಗೆ ಗೊತ್ತು.

262
00:22:45,250 --> 00:22:47,707
ನೋಡು, ಎಷ್ಟು ಚೆನ್ನಾಗಿ ಕಾಣುತ್ತಿದ್ದೀಯ.
ಮುಖದಲ್ಲಿ ಕಳೆ ಬಂದಿದೆ.

263
00:22:47,708 --> 00:22:49,500
ನಿನ್ನ ಕಣ್ಣುಗಳಲ್ಲಿ ಹೊಳಪಿದೆ.

264
00:22:51,083 --> 00:22:52,583
ಇವತ್ತು ಏನು ಮಾಡಿದೆ ಹೇಳು.

265
00:22:53,958 --> 00:22:54,833
ಮಜಾ ಮಾಡಿದೆ.

266
00:22:55,583 --> 00:22:57,915
ಮಜಾ ಮಾಡಿದೆಯಾ? ಅಷ್ಟೇನಾ? ಇನ್ನೂ ಹೇಳು.

267
00:22:57,916 --> 00:22:59,250
ಮಜಾ ಮಾಡಿದೆ, ಅಮ್ಮ.

268
00:22:59,750 --> 00:23:02,124
ನಿಜ ಹೇಳಬೇಕೆಂದರೆ,
ಮಾತ್ರೆಯಿಂದ ಸುಸ್ತಾಗಿದೆ, ನಾನು ಮಲಗಬೇಕು.

269
00:23:02,125 --> 00:23:03,750
ಈ ಡೋಸೇಜ್ ನನ್ನನ್ನು ಕೊಲ್ಲುತ್ತಿದೆ.

270
00:23:05,333 --> 00:23:07,750
ಸರಿ. ಸರಿ. ನಾಳೆ ಮಾತಾಡೋಣ.

271
00:23:08,500 --> 00:23:09,333
ಆದರೆ, ಹೇ,

272
00:23:10,083 --> 00:23:11,915
ನೀನು ಇಲ್ಲಿ ಇರೋದಕ್ಕೆ ನನಗೆ ಸಂತೋಷವಾಗಿದೆ.

273
00:23:11,916 --> 00:23:13,208
ಇನ್ನೂ ಇಲ್ಲೇ ಇರೋದಕ್ಕಾ?

274
00:23:14,000 --> 00:23:16,624
ತಮಾಷೆಯಲ್ಲ. ಈ ಥರ ತಮಾಷೆ ಎಂದಿಗೂ ಮಾಡಬೇಡ.

275
00:23:16,625 --> 00:23:18,291
ಸರಿ, ಕ್ಷಮಿಸು.

276
00:23:18,875 --> 00:23:21,000
ನಾಳೆ ಮಾತಾಡೋಣ.
ಐ ಲವ್ ಯು. ಸ್ವಲ್ಪ ವಿಶ್ರಾಂತಿ ಪಡೆ.

277
00:23:21,583 --> 00:23:23,666
- ಐ ಲವ್ ಯು. ಶುಭ ರಾತ್ರಿ.
- ಶುಭ ರಾತ್ರಿ.

278
00:23:51,000 --> 00:23:52,915
ರೈ. ಬೀಚ್ ಹೇಗಿತ್ತು?

279
00:23:52,916 --> 00:23:54,499
ನೀನು ನನ್ನಿಂದ ವಿಷಯ ಮುಚ್ಚಿಟ್ಟಿದ್ದೆ.

280
00:23:54,500 --> 00:23:56,957
- ಏನು ಮುಚ್ಚಿಟ್ಟಿದ್ದೆ? ಒಂದು ಕ್ಷಣ.
- ಎಲ್ಲ ಬೆತ್ತಲೆಯಾಗಿದ್ದರು.

281
00:23:56,958 --> 00:23:59,916
ಹೌದು, ಅದೇ ಮುಖ್ಯ ವಿಷಯ.
ನಿನಗೆ ಅದು ಇಷ್ಟವಾಯಿತಾ?

282
00:24:00,500 --> 00:24:03,666
- ಬೀಚ್ ಮತ್ತು ಸಮುದ್ರ ಸುಂದರವಾಗಿದ್ದವು.
- ಮತ್ತೆ ಕಾಡುಪ್ರಾಣಿಗಳು?

283
00:24:05,750 --> 00:24:06,583
ಗೊತ್ತಿಲ್ಲ.

284
00:24:07,750 --> 00:24:09,875
- ಹೂಲಿಯನ್ ಅಂತ ಒಬ್ಬ ವ್ಯಕ್ತಿ ಇದ್ದ.
- ಹೂಂ.

285
00:24:10,583 --> 00:24:12,207
ದೊಡ್ಡ ತುಣ್ಣೆ ನನ್ನ ಮಗ.

286
00:24:12,208 --> 00:24:15,207
- ಕ್ಷಮಿಸು, ಅವನದ್ದು ದೊಡ್ಡ…
- ಇಲ್ಲ, ನಾನು ಕೇಳಿಸಿಕೊಂಡೆ. ಹೌದು. ಅವನು…

287
00:24:15,208 --> 00:24:17,291
ನಾನು ಅವನನ್ನು ನೋಡಲಿಲ್ಲ. ಹಾಗಾಗಿ ಗೊತ್ತಿಲ್ಲ.

288
00:24:17,916 --> 00:24:19,291
- ಖಂಡಿತ.
- ಅಸಭ್ಯವಾಗಿ ವರ್ತಿಸುತ್ತಿದ್ದ.

289
00:24:19,875 --> 00:24:21,166
- ಏಕೆ, ಏನು ಮಾಡಿದ?
- ಅವನು…

290
00:24:21,916 --> 00:24:24,708
ನನ್ನನ್ನು ಹೋಟೆಲ್‌ಗೆ ವಾಪಸ್ ಕರೆತಂದ
ಏಕೆಂದರೆ ನನ್ನ ಫೋನ್ ಡೆಡ್ ಆಗಿತ್ತು, ಅವನು…

291
00:24:26,000 --> 00:24:27,207
ನನಗೆ ಊಟವನ್ನೂ ಕೊಡಿಸಿದ.

292
00:24:27,208 --> 00:24:29,166
ಈ ವ್ಯಕ್ತಿ ನಿಜವಾದ ದುಷ್ಟನೇ ಇರಬೇಕು.

293
00:24:29,750 --> 00:24:32,457
- ನೀನು ಬರಬೇಕಿತ್ತು, ಆಗ ಗೊತ್ತಾಗುತ್ತಿತ್ತು.
- ಕೀಟಲೆ ಮಾಡಿದೆ.

294
00:24:32,458 --> 00:24:35,707
ನನಗೆ ಹೂಲಿಯನ್ ಗೊತ್ತು,
ಅವನ ಮೂಡ್ ಕೆಲವೊಮ್ಮೆ ಸರಿ ಇರಲ್ಲ,

295
00:24:35,708 --> 00:24:38,249
ಆದರೆ ಅವನ ಪರಿಸ್ಥಿತಿ ಈಗ ಸರಿಯಿಲ್ಲ.
ಯಾಕೋ ತಲೆಕೆಡಿಸಿಕೊಂಡಿದ್ದಾನೆ.

296
00:24:38,250 --> 00:24:40,874
- ನಿನಗೆ ಅವನು ಗೊತ್ತಾ?
- ಇದು ಒಂದು ಸಣ್ಣ ದ್ವೀಪ, ಚಿನ್ನ.

297
00:24:40,875 --> 00:24:44,291
ನಿನ್ನ ಮುಖ ನೋಡಿದರೆ
ಅವನಿಗೆ ಎರಡನೇ ಅವಕಾಶ ಕೊಡುತ್ತೀಯ ಅನಿಸುತ್ತೆ.

298
00:24:45,125 --> 00:24:47,290
ಅವನು, ನಮ್ಮ ಗುಂಪು
ರಾತ್ರಿ ಕ್ಲಬ್‌ಗೆ ಹೋಗುತ್ತಿದ್ದೇವೆ.

299
00:24:47,291 --> 00:24:49,415
- ನೀನು ಬರಬೇಕು.
- ಕ್ಲಬ್‌ಗಾ?

300
00:24:49,416 --> 00:24:51,915
ಹೌದು. ದೊಡ್ಡದಾಗಿ, ಜೋರಾಗಿ, ಸಂಗೀತ ಇರುತ್ತೆ.

301
00:24:51,916 --> 00:24:54,583
ಆದರೆ ಜನರು ಬಟ್ಟೆ ಧರಿಸಿರುತ್ತಾರೆ.

302
00:24:56,208 --> 00:25:00,041
- ಅದರ ಬಗ್ಗೆ ನಾನು ಆಮೇಲೆ ಹೇಳಲಾ?
- ತೊಂದರೆ ಇಲ್ಲ. ಆಮೇಲೆ ನನಗೆ ಕರೆ ಮಾಡು.

303
00:25:00,625 --> 00:25:03,541
ಮೋಜಿರುತ್ತೆ. ಆದರೆ ಅತಿಯಾದ ಕಲ್ಪನೆ ಬೇಡ.

304
00:25:06,000 --> 00:25:06,915
ಸರಿ. ಬನ್ನಿ.

305
00:25:06,916 --> 00:25:09,541
- ಹಲೋ.
- ಹಾಯ್. ನಮ್ಮ ಹೋಟೆಲ್‌ಗೆ ಸ್ವಾಗತ.

306
00:25:10,541 --> 00:25:11,916
ದೇವರೇ, ಇದು ಮುಗಿಯೋದೇ ಇಲ್ಲ.

307
00:25:14,083 --> 00:25:15,000
ಇದು ಮಜವಾಗಿದೆ.

308
00:25:15,500 --> 00:25:17,083
ಪರವಾನಗಿಗಾಗಿ ಕಷ್ಟಪಡುತ್ತಿದ್ದೇನೆ.

309
00:25:18,375 --> 00:25:19,458
ಸರಿ, ಹೇಳು.

310
00:25:20,500 --> 00:25:21,708
ಈ ಸ್ಥಳ ನಿನಗೆ ಇಷ್ಟವಾಯಿತಾ?

311
00:25:22,708 --> 00:25:23,541
ಸುಂದರವಾಗಿದೆ.

312
00:25:24,250 --> 00:25:25,457
ನೀನು ಚಿಕ್ಕ ಮಗುವಾಗಿದ್ದಾಗ

313
00:25:25,458 --> 00:25:28,250
ಈ ದ್ವೀಪದ ಸುತ್ತ ಓಡಾಡುತ್ತಿದ್ದೆ
ಅಂತ ಊಹಿಸಿಕೊಳ್ಳಲು ಖುಷಿಯಾಗುತ್ತೆ.

314
00:25:29,416 --> 00:25:31,125
ಇಲ್ಲಿ ಬೆಳೆಯೋದು ಅದ್ಭುತವಾಗಿತ್ತು.

315
00:25:32,250 --> 00:25:33,166
ಈ ಜಾಗ ಯಾಕೆ ಬಿಟ್ಟೆ?

316
00:25:34,125 --> 00:25:37,666
ಅಮ್ಮ ಹೋದ ಮೇಲೆ, ಇದು ನನ್ನ ಮನೆ ಅನಿಸಲಿಲ್ಲ,

317
00:25:38,291 --> 00:25:39,415
ಯಾಕೋ ಗೊತ್ತಿಲ್ಲ.

318
00:25:39,416 --> 00:25:42,125
ನನ್ನ ಕನಸುಗಳು ದೊಡ್ಡದಾಗಿದ್ದವು,
ಮತ್ತು ನಾನು ಒಂದು ಸಣ್ಣ ದ್ವೀಪದಲ್ಲಿದ್ದೆ.

319
00:25:42,791 --> 00:25:46,249
ಇದು ಅವಳ ಮನೆಯಾಗಿತ್ತು, ನಾನು ಹೊರಗೆ ಹೋಗಿ
ನನ್ನ ಮನೆಯನ್ನು ಕಂಡುಕೊಳ್ಳಲು ಬಯಸಿದ್ದೆ.

320
00:25:46,250 --> 00:25:47,625
ಅದಾಗಲು ಎಷ್ಟು ಸಮಯ ಹಿಡಿಯಿತು?

321
00:25:48,375 --> 00:25:51,000
ಸುಮಾರು ಐದು ವರ್ಷ ಒಂಬತ್ತು ತಿಂಗಳು.

322
00:25:52,208 --> 00:25:54,374
ನಿನಗೆ ಬೇಕಿದ್ದ ಖುಷಿ ಸಿಕ್ಕಿತಾ?

323
00:25:54,375 --> 00:25:56,208
ಆಗಲೇ ನೀನು ಹುಟ್ಟಿದ್ದು.

324
00:25:58,500 --> 00:26:00,708
- ನನ್ನದು ತಮಾಷೆ ಪ್ರವೃತ್ತಿ.
- ಹೌದು, ಅಮ್ಮ.

325
00:26:11,125 --> 00:26:12,708
{\an8}ಹೂಲಿಯನ್‌‌ಗಾರ್ಸಿಯಾ,
ಇತರರು ಇಷ್ಟಪಟ್ಟಿದ್ದಾರೆ

326
00:26:24,958 --> 00:26:26,458
1:00
ಔಷಧಿ ಸಮಯ

327
00:26:53,583 --> 00:26:56,583
ಅಲಾರಾಂಗಳು ಬೆಳಿಗ್ಗೆ 8:00
ಮಧ್ಯಾಹ್ನ 1:00 - ಸಂಜೆ 6:00 - ರಾತ್ರಿ 10:00

328
00:27:03,500 --> 00:27:06,207
ಅಮಾರ
ರಾತ್ರಿ ನಿಮ್ಮ ಜೊತೆ ಬರುತ್ತೇನೆ.

329
00:27:06,208 --> 00:27:09,082
ಆದರೆ ನನ್ನ ಹತ್ತಿರ ಬಟ್ಟೆ ಇಲ್ಲ.

330
00:27:09,083 --> 00:27:10,582
ವೂಪ್ ವೂಪ್!!

331
00:27:10,583 --> 00:27:13,416
{\an8}ನಾನು ಮತ್ತು ನನ್ನ ಸ್ನೇಹಿತೆ ಸೊಫಿಯಾ
ನಿನ್ನ ಕೋಣೆಗೆ ಬರುತ್ತಿದ್ದೇವೆ.

332
00:27:23,000 --> 00:27:24,540
ಇರಲೋ ಬೇಡವೋ?

333
00:27:24,541 --> 00:27:25,957
ಆದರೆ ಇದರ ಬೆನ್ನು ಚೆನ್ನಾಗಿದೆ.

334
00:27:25,958 --> 00:27:27,208
- ರೈ.
- ಬೇಡ.

335
00:27:27,875 --> 00:27:28,708
ಬೇಡ.

336
00:27:32,625 --> 00:27:34,249
ಬಹುಶಃ, ನಾನು ಇದನ್ನು ಕಟ್ಟಿಕೊಳ್ಳಬಹುದು.

337
00:27:34,250 --> 00:27:36,040
- ನಾನಂದುಕೊಂಡಂತೆ ಇಲ್ಲ…
- ಸರಿ.

338
00:27:36,041 --> 00:27:37,291
- ಇದು ಹೇಗಿದೆ?
- ಇದು…

339
00:27:38,041 --> 00:27:40,124
- ಇದು ಮುದ್ದಾಗಿದೆ.
- ಬೇಡವೇ ಬೇಡ.

340
00:27:40,125 --> 00:27:41,457
ಇದು ಹೇಗಿದೆ… ಚೆನ್ನಾಗಿಲ್ಲ.

341
00:27:41,458 --> 00:27:42,958
ಬೇಡ, ನನಗದು ಇಷ್ಟವಾಗಲಿಲ್ಲ.

342
00:28:00,458 --> 00:28:01,707
ಚೆನ್ನಾಗಿದೆ, ರೈ!

343
00:28:01,708 --> 00:28:03,499
ಓ ದೇವರೇ!

344
00:28:03,500 --> 00:28:04,750
ಇದು ಅದ್ಭುತವಾಗಿದೆ.

345
00:28:05,333 --> 00:28:06,166
ಸರಿ!

346
00:28:08,833 --> 00:28:10,666
ಅದ್ಭುತ! ಹೀಗೇ ಮಿಂಚು.

347
00:28:13,291 --> 00:28:14,915
ಅಮ್ಮ
ರಾತ್ರಿ ಇಲ್ಲೇ ಇರ್ತೀನಿ.

348
00:28:14,916 --> 00:28:16,375
ಮಾತ್ರೆಯ ಪ್ರಭಾವ ಜಾಸ್ತಿಯಾಗಿದೆ.

349
00:28:25,000 --> 00:28:26,457
ಮೂರು ಆರ್ಡರ್ ಮಾಡಲು ಪ್ರಯತ್ನಿಸಿದೆ.

350
00:28:26,458 --> 00:28:27,707
- ವಾವ್!
- ಅಬ್ಬಾ, ಹುಡುಗಿ!

351
00:28:27,708 --> 00:28:30,250
- ನೀನು ಸ್ಪ್ಯಾನಿಷ್‌ ಕಲಿಯಬೇಕು.
- ನಾವು ಶಾಟ್‌ ಕುಡಿಯೋಣ!

352
00:28:32,416 --> 00:28:34,000
- ಚಿಯರ್ಸ್.
- ಚಿಯರ್ಸ್.

353
00:28:40,333 --> 00:28:41,790
- ದೇವರೇ!
- ಹೂಲಿಯನ್!

354
00:28:41,791 --> 00:28:44,332
ಬಾ, ಶಾಟ್ ಕುಡಿ!
ರೈ ಎಲ್ಲರಿಗೂ ಬೇಕಾದಷ್ಟು ತಂದಿದ್ದಾಳೆ.

355
00:28:44,333 --> 00:28:45,375
ಹುಡುಗಿಯರಿಗೆ ನಮಸ್ಕಾರ.

356
00:28:46,291 --> 00:28:47,833
ಹಲೋ, ಖರ್ಚು ಮಾಡುವ ಹುಡುಗಿಗೆ.

357
00:28:50,000 --> 00:28:51,166
ನನಗೆ ಈ ಹಾಡು ತುಂಬಾ ಇಷ್ಟ.

358
00:28:52,708 --> 00:28:54,083
- ಯಾರು ಡಾನ್ಸ್ ಮಾಡುತ್ತೀರಿ?
- ನಾನು!

359
00:28:54,916 --> 00:28:56,000
ರೈ?

360
00:28:57,000 --> 00:29:00,291
- ಬಾ, ಹುಡುಗಿ.
- ಮಿಸ್ ಅಮೇರಿಕಾ, ತೋರಿಸು ನಿನ್ನ ಜಾದೂ.

361
00:29:02,416 --> 00:29:03,416
ಹೋಗೋಣ, ಚಿನ್ನ.

362
00:29:03,958 --> 00:29:05,415
ನಾನು ನಿನ್ನ ಜೊತೆ ಬರುತ್ತೇನೆ.

363
00:29:05,416 --> 00:29:06,416
ಅವನೆಡೆ ಗಮನ ಕೊಡಬೇಡ!

364
00:30:15,291 --> 00:30:16,291
ನಿಲ್ಲಿಸು!

365
00:30:17,875 --> 00:30:19,041
ನನ್ನನ್ನು ಬಿಡೋ!

366
00:30:47,666 --> 00:30:48,833
ಹೇ.

367
00:30:51,500 --> 00:30:52,500
ನಾನಿದ್ದೇನೆ.

368
00:31:02,250 --> 00:31:03,166
ಚೆನ್ನಾಗಿದ್ದೀಯಾ?

369
00:31:04,041 --> 00:31:04,999
- ಹೌದು.
- ಹೌದಾ?

370
00:31:05,000 --> 00:31:06,291
ಚೆನ್ನಾಗಿದ್ದೇನೆ, ನಾನು…

371
00:31:07,250 --> 00:31:08,707
ನನಗೆ ಟಕಿಲಾ ಕುಡಿದರೆ ಆಗಲ್ಲ.

372
00:31:08,708 --> 00:31:11,458
- ಬಹುಶಃ ನಿನ್ನ ಡ್ರಿಂಕ್ ಅಲ್ಲಿ ಏನೋ ಇತ್ತು.
- ಇಲ್ಲ, ನಾನು ಚೆನ್ನಾಗಿದ್ದೇನೆ.

373
00:31:14,541 --> 00:31:16,166
ಸರಿ, ಒಳ್ಳೆಯದು, ನಾವು ಹೋಗಬೇಕು.

374
00:31:16,958 --> 00:31:18,375
- ಏನು?
- ಇದನ್ನು ಹಾಕಿಕೋ.

375
00:31:19,458 --> 00:31:21,583
- ಜನರನ್ನು ನೋಡಿ ಓಡುತ್ತಿದ್ದೇವಾ?
- ಆಮೇಲೆ ಹೇಳುತ್ತೇನೆ.

376
00:31:22,250 --> 00:31:24,333
- ನಾನು ಎಂದಿಗೂ ಬೈಕ್ ಅಲ್ಲಿ ಕೂತಿಲ್ಲ.
- ಹೌದಾ?

377
00:31:25,125 --> 00:31:26,375
ಚಿಂತಿಸಬೇಡ, ನಿನಗೆ ಇಷ್ಟವಾಗುತ್ತೆ.

378
00:31:59,458 --> 00:32:00,291
ಚೆನ್ನಾಗಿದ್ದೀಯಾ?

379
00:32:01,208 --> 00:32:02,041
ಚೆನ್ನಾಗಿದ್ದೇನೆ.

380
00:32:28,666 --> 00:32:30,041
ನಾನು ನಿನಗೆ ಏನೋ ತೋರಿಸಬೇಕು.

381
00:32:34,583 --> 00:32:35,708
ನೀನು ಮೀನುಗಾರನಾ?

382
00:32:37,208 --> 00:32:38,625
ಇದು ನನ್ನ ಕುಟುಂಬದ ವ್ಯವಹಾರ.

383
00:32:39,666 --> 00:32:42,416
ನಾನು ನೀರಿನ ಮೇಲೆ ಬೆಳೆದಿದ್ದು.
ನನಗೆ ಗೊತ್ತಿರೋದು ಇದೇ.

384
00:32:44,500 --> 00:32:46,583
ಒಂದು ದಿನ, ಅಪ್ಪನಿಂದ
ಮೀನುಗಾರಿಕೆ ವಹಿಸಿಕೊಳ್ಳುತ್ತೇನೆ.

385
00:32:47,875 --> 00:32:48,708
ಸಾಧ್ಯವಾದರೆ.

386
00:32:49,583 --> 00:32:50,707
ಸಾಧ್ಯವಾದರೆ ಅಂದರೆ?

387
00:32:50,708 --> 00:32:54,999
ಪ್ರವಾಸಿಗರಿಂದಾಗಿ ನಮ್ಮ ದ್ವೀಪದಲ್ಲಿನ
ಮೀನುಗಾರಿಕೆ ಸಂಕಷ್ಟದಲ್ಲಿದೆ,

388
00:32:55,000 --> 00:32:58,458
ಮತ್ತು ವಾಣಿಜ್ಯ ಕಂಪನಿಗಳು
ದ್ವೀಪಕ್ಕೆ ಹಾನಿ ಮಾಡುತ್ತಿವೆ.

389
00:32:59,541 --> 00:33:04,291
ಆದರೆ ಮತ್ತೊಂದೆಡೆ,
ಅವರಿಂದಾಗಿಯೇ ಇದು ಉಳಿದುಕೊಂಡಿರೋದು.

390
00:33:05,750 --> 00:33:10,083
"ಐ ಹಾರ್ಟ್ ಮಯೋರ್ಕಾ" ಶರ್ಟ್‌
ನಾನು ಯಾಕೆ ಖರೀದಿಸಲ್ಲ ಅಂತ ಗೊತ್ತಾಯ್ತಾ?

391
00:33:12,208 --> 00:33:13,916
ಹೆಚ್ಚು ಜನ ಅಂದರೆ ಪ್ರಗತಿ ಅಂತ ಅರ್ಥ.

392
00:33:16,500 --> 00:33:20,875
ಕುಟುಂಬ ವ್ಯವಹಾರಗಳನ್ನು ನಾಶಮಾಡೋದು
ಪ್ರಗತಿ ಅನ್ನಿಸಲ್ಲ.

393
00:33:25,291 --> 00:33:26,291
ನಿನ್ನ ಬಗ್ಗೆ ಹೇಳು.

394
00:33:27,291 --> 00:33:30,125
ಟೆಕ್ಸಾಸ್‌ನಲ್ಲಿ ಏನು ಮಾಡುತ್ತೀಯ?

395
00:33:32,875 --> 00:33:33,708
ನಾನು ಡಾನ್ಸರ್.

396
00:33:34,583 --> 00:33:35,416
ಕ್ಲಬ್‌ನಲ್ಲಿಯಾ?

397
00:33:37,875 --> 00:33:40,333
- ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತೇನೆ.
- ಸರಿ. ಸರಿ.

398
00:33:41,291 --> 00:33:42,291
ಆದರೆ…

399
00:33:43,041 --> 00:33:44,875
ಹಿಂತಿರುಗಿ ಹೋಗುತ್ತೇನೋ ಇಲ್ಲವೋ ಗೊತ್ತಿಲ್ಲ.

400
00:33:48,375 --> 00:33:52,708
ನನ್ನ ಜೀವನ ನಿರಂತರವಾದ ಚಕ್ರ ಅನಿಸುತ್ತೆ.

401
00:33:53,916 --> 00:33:56,250
ಡಾನ್ಸ್ ಒಂದೇ ಅದಕ್ಕೆ ಅರ್ಥ ಕೊಡೋದು,

402
00:33:56,875 --> 00:33:58,041
ನನಗೆ ಸ್ವಾತಂತ್ರ್ಯ ಕೊಡೋದು.

403
00:34:00,250 --> 00:34:02,583
- ಮತ್ತೆ ಏಕೆ ನಿಲ್ಲಿಸಬೇಕು?
- ಏಕೆಂದರೆ ಅದು ಈಗ ನನ್ನ ಕೈಯಲ್ಲಿಲ್ಲ.

404
00:34:04,000 --> 00:34:06,457
ನನ್ನ ಸಮಸ್ಯೆಗಳು ಬಹುಶಃ
ತುಂಬಾ ಕ್ಷುಲ್ಲಕ ಅನಿಸಬಹುದು.

405
00:34:06,458 --> 00:34:09,250
ಇಲ್ಲ, ಪರವಾಗಿಲ್ಲ.
ಶ್ರೀಮಂತ ಹುಡುಗಿಯರೂ ದುಃಖಿತರಾಗಿರಬಹುದು.

406
00:34:10,125 --> 00:34:12,666
- ನಾವು ಅದನ್ನು ಟಿ-ಶರ್ಟ್ ಮೇಲೆ ಹಾಕಬೇಕು.
- ಹೌದು, ನಾವು ಹಾಗೆ ಮಾಡಬೇಕು.

407
00:34:13,250 --> 00:34:15,457
ಏನು ಮಾಡುತ್ತಿದ್ದೀಯ?

408
00:34:15,458 --> 00:34:18,125
ನಿನಗೆ ಈಜಲು ಬರದಿದ್ದರೆ ನಾನು ಸಹಾಯ ಮಾಡಬಲ್ಲೆ.

409
00:34:18,708 --> 00:34:20,083
ನನಗೆ ಈಜಲು ಬರುತ್ತೆ.

410
00:34:38,291 --> 00:34:40,333
ನೋಡು, ನನಗೆ ಅದ್ಭುತವಾಗಿ ಈಜುತ್ತೇನೆ.

411
00:34:41,250 --> 00:34:44,333
ಈ ಬಾರಿ ನಿನ್ನ ಬಟ್ಟೆ ಬಿಚ್ಚಿಸಬೇಕು ಅಂತ ಇದ್ದೆ.

412
00:34:49,166 --> 00:34:50,750
ಸರಿ, ನಿಲ್ಲಿಸು. ನಿಲ್ಲಿಸು.

413
00:34:51,333 --> 00:34:52,541
- ಸರಿ.
- ಶಾಂತಿ.

414
00:34:53,083 --> 00:34:54,083
ಶಾಂತಿ.

415
00:34:55,750 --> 00:34:57,000
ಇದು ಚೆನ್ನಾಗಿದೆ.

416
00:34:57,708 --> 00:34:59,833
ಈ ಬೇಸಿಗೆಯಲ್ಲಿ
ನಾನು ಹೊಸತನ್ನು ಮಾಡಲು ಬಯಸಿದ್ದೆ.

417
00:35:00,500 --> 00:35:02,916
ಇದೇ ಕೊನೆಯ ಬೇಸಿಗೆ
ಅನ್ನುವಂತೆ ಬದುಕಬೇಕು ಅಂದುಕೊಂಡಿದ್ದೆ.

418
00:35:03,833 --> 00:35:05,166
ಅದು ಬದುಕಲು ಒಳ್ಳೆಯ ಮಾರ್ಗ.

419
00:35:07,458 --> 00:35:08,916
ಹಾಗಾದರೆ, ನಿನ್ನ ಪಟ್ಟಿಯಲ್ಲಿ ಮುಂದೇನಿದೆ?

420
00:35:10,125 --> 00:35:12,916
ಹಲ್ಲುಜ್ಜದೆ ಮಲಗೋದಾ?

421
00:35:13,666 --> 00:35:14,625
ಎಂದಿಗೂ ಇಲ್ಲ.

422
00:35:15,791 --> 00:35:19,125
ಅಥವಾ ತರಕಾರಿ ತಿನ್ನದೇ ಇರೋದಾ?

423
00:35:19,666 --> 00:35:20,500
ಇರಬಹುದು.

424
00:35:22,125 --> 00:35:23,958
ಅಥವಾ ಆಕರ್ಷಕ ಅಪರಿಚಿತರೊಂದಿಗೆ ಮೋಜು ಮಾಡೋದಾ?

425
00:35:26,083 --> 00:35:27,458
ನೀನು ಆಕರ್ಷಕ ಇದ್ದೀಯ ಅಂತ ನಟಿಸಬಲ್ಲೆ.

426
00:36:29,416 --> 00:36:31,749
ಅಮಾರ
ತಪ್ಪಿದ ಕರೆ

427
00:36:31,750 --> 00:36:35,375
ಅಮಾರ
ಚೆನ್ನಾಗಿದ್ದೇನೆ. ಹೂಲಿಯನ್ ಜೊತೆ ಇದ್ದೇನೆ.

428
00:36:37,125 --> 00:36:39,291
- ಏನಾಯಿತು?
- ಏನೂ ಇಲ್ಲ.

429
00:36:45,375 --> 00:36:46,208
ಅಂದವಾಗಿ ಕಾಣ್ತಿದ್ದೀಯ.

430
00:36:48,250 --> 00:36:49,916
ನಿನ್ನ ಮೂಡ್ ಅಷ್ಟೂ ಕೆಟ್ಟದಾಗಿಲ್ಲ.

431
00:36:51,833 --> 00:36:52,666
ಏನು?

432
00:36:54,208 --> 00:36:55,541
ಅಮಾರ ಹೇಳಿದ ಒಂದು ಮಾತು ಅಷ್ಟೇ.

433
00:37:00,375 --> 00:37:02,791
ಬಾ. ನಾನು ನಿನ್ನನ್ನು
ವಾಪಸ್ ಕರೆದುಕೊಂಡು ಹೋಗಬೇಕು.

434
00:37:06,416 --> 00:37:07,250
ಹೂಂ.

435
00:37:27,625 --> 00:37:28,458
ನನ್ನನ್ನು ಕ್ಷಮಿಸು.

436
00:37:29,875 --> 00:37:30,958
ನಿನಗೆ ಯಾಕೋ ಬೇಜಾರಾಗಿರಬೇಕು.

437
00:37:31,500 --> 00:37:32,666
ಸ್ವಲ್ಪ ಒತ್ತಡ ಇದೆ ಅಷ್ಟೇ.

438
00:37:33,583 --> 00:37:36,541
ಕೆಲಸದ ಬಗ್ಗೆ. ತಲೆಕೆಡಿಸುವ ವಿಷಯಗಳಿವೆ.

439
00:37:37,125 --> 00:37:37,958
ಗೊತ್ತು.

440
00:37:41,000 --> 00:37:42,125
ನನ್ನ ನಂಬರ್ ಕೊಡಲಾ?

441
00:37:44,333 --> 00:37:46,208
ಕೊಟ್ಟರೆ ಖುಷಿ. ಕೊಡದಿದ್ದರೆ,

442
00:37:47,041 --> 00:37:48,500
ನೀನು ನನ್ನ ಬಳಸಿಕೊಂಡೆ ಅನಿಸುತ್ತೆ.

443
00:37:49,583 --> 00:37:50,500
ಈಗಲೇ ಕೊಡುತ್ತೇನೆ.

444
00:37:58,333 --> 00:37:59,208
ತಗೋ.

445
00:38:02,833 --> 00:38:03,666
ಕರೆ ಮಾಡುತ್ತೇನೆ.

446
00:38:05,875 --> 00:38:06,708
ಸರಿ.

447
00:38:11,458 --> 00:38:12,458
ಶುಭ ರಾತ್ರಿ, ಒರಾಯ.

448
00:38:15,333 --> 00:38:16,166
ಶುಭ ರಾತ್ರಿ.

449
00:38:32,583 --> 00:38:34,083
ಅವಳಿಗೆ ಶುಭ ರಾತ್ರಿಯ ಮುತ್ತು ಕೊಡಲಿಲ್ಲ.

450
00:38:43,000 --> 00:38:45,208
ನೋಡು, ನನ್ನ ಹತ್ತಿರ ತೀರಿಸಲು ಹಣವಿಲ್ಲ, ಸರಿಯಾ?

451
00:38:46,000 --> 00:38:46,958
ಹಣ ಪೇರಿಸುತ್ತಿದ್ದೇನೆ.

452
00:38:47,958 --> 00:38:48,833
ವಾಪಸ್ ಕೊಡುತ್ತೇನೆ.

453
00:38:58,750 --> 00:39:00,083
ಖಂಡಿತ ವಾಪಸ್ ಕೊಡುತ್ತೀಯ,

454
00:39:01,166 --> 00:39:02,083
ಕೊಡದಿದ್ದರೆ,

455
00:39:03,333 --> 00:39:05,083
ನಿನ್ನ ಗರ್ಲ್‌ಫ್ರೆಂಡ್ ಇಂದ ಪಡೆಯುತ್ತೇನೆ.

456
00:39:05,958 --> 00:39:08,666
ಇಂತಹ ಸ್ಥಳದಲ್ಲಿದ್ದಾಳೆ ಅಂದರೆ
ಸಾಕಷ್ಟು ಶ್ರೀಮಂತೆ ಇರಬೇಕು.

457
00:39:27,916 --> 00:39:30,165
ಸ್ಥಳೀಯ ಭೂಮಾಲೀಕರೊಂದಿಗೆ
ಒಪ್ಪಂದ ಮಾಡಿಕೊಳ್ಳುತ್ತಿದ್ದೇನೆ,

458
00:39:30,166 --> 00:39:32,041
ಹೋಟೆಲ್ ಕಟ್ಟುತ್ತೇವೆ.

459
00:39:33,166 --> 00:39:36,125
ನಿನ್ನ ಬಗ್ಗೆ ಮಾತಾಡೋಣ.
ಬೆಳಿಗ್ಗೆ ಮಾತ್ರೆ ತೆಗೆದುಕೊಂಡೆಯಾ?

460
00:39:39,875 --> 00:39:42,625
ಹೊಸ ಔಷಧಿಗೆ ಒಗ್ಗಿಕೊಳ್ಳುತ್ತಿದ್ದೇನೆ,
ಹೇಗಿರುತ್ತೆ ಅಂತ ನಿನಗೆ ಗೊತ್ತು.

461
00:39:43,291 --> 00:39:44,333
ಹೌದು, ಗೊತ್ತು.

462
00:39:46,291 --> 00:39:49,333
ಫ್ರಂಟ್ ಡೆಸ್ಕ್‌ನ ಅಮಾರ ಜೊತೆ
ಸಮಯ ಕಳೆಯುತ್ತಿದ್ದೇನೆ.

463
00:39:50,208 --> 00:39:52,083
- ಹೂಂ. ಸರಿ.
- ಮತ್ತು ಅವಳ ಕೆಲವು ಸ್ನೇಹಿತರ ಜೊತೆ.

464
00:39:52,583 --> 00:39:55,458
ಆಕರ್ಷಕ ಸ್ಪೇನ್‌ನವನನ್ನು ಪ್ರೀತಿಸದಿದ್ದರೆ ಸಾಕು.

465
00:39:59,291 --> 00:40:00,540
ಏನು, ಪ್ರೀತಿಸುತ್ತಿದ್ದೀಯಾ?

466
00:40:00,541 --> 00:40:02,165
ಸರಿ, ನಾನು ಕೇಳಲ್ಲ.

467
00:40:02,166 --> 00:40:05,207
ಒಂದೆರಡು ದಿನ ನೀನು
ಸ್ವಲ್ಪ ಪುರಸೊತ್ತು ಮಾಡಿಕೊಂಡರೆ,

468
00:40:05,208 --> 00:40:06,500
ನನಗೆ ನಿನ್ನ ಸಹಾಯ ಬೇಕು.

469
00:40:07,333 --> 00:40:10,249
ನಿನ್ನ ಸಿಬ್ಬಂದಿ ನನ್ನ ಸಿಬ್ಬಂದಿಗೆ ಕರೆ ಮಾಡಲಿ,
ಏನು ಮಾಡಕ್ಕಾಗುತ್ತೋ ನೋಡೋಣ.

470
00:40:10,250 --> 00:40:11,083
ಮಾಡುತ್ತೇನೆ.

471
00:40:27,875 --> 00:40:28,875
ಪ್ರತೀ ಸಲ.

472
00:40:45,083 --> 00:40:46,458
ನನಗೆ ಆರ್ಟಿಕೋಕ್ ತುಂಬಾ ಇಷ್ಟ.

473
00:40:48,500 --> 00:40:49,625
ನನಗೆ ಚಿಂತೆ…

474
00:40:53,416 --> 00:40:54,791
ನನಗೆ ಅದು ಇಷ್ಟವಾಯಿತು.

475
00:41:17,958 --> 00:41:18,916
ಅದ್ಭುತ! ಓ ದೇವರೇ!

476
00:41:20,625 --> 00:41:21,666
ಓ ದೇವರೇ! ನಮ್ಮ ಬಾರಿ.

477
00:41:22,666 --> 00:41:23,625
ಬಂತಾ, ಅಮ್ಮ!

478
00:41:37,375 --> 00:41:38,707
ಅಬ್ಬಾ ದೇವರೇ. ಇಲ್ಲಿದ್ದೀಯ.

479
00:41:38,708 --> 00:41:41,208
ಟಿಂಡರ್ ಡೇಟ್‌ಗಾಗಿ ನನ್ನ ಜೊತೆ
ಒಂದು ಬಾರ್‌ಗೆ ಬರುತ್ತೀಯಾ?

480
00:41:42,583 --> 00:41:45,832
ಇಲ್ಲ. ಇಲ್ಲ,
ನಿನ್ನ ಡೇಟಿಂಗ್‌ಗೆ ನಾನು ಯಾಕೆ ಬರಲಿ?

481
00:41:45,833 --> 00:41:49,040
ಅವಳು ಸರಣಿ ಕೊಲೆಗಾರ್ತಿಯಾಗಿದ್ದರೆ,
ನನ್ನ ಸುರಕ್ಷತೆಗಾಗಿ ಬಾ.

482
00:41:49,041 --> 00:41:52,332
ಶಿವಪೂಜೆಯಲ್ಲಿ ಕರಡಿ ಆಗಿರಲ್ಲ ನೀನು.
ಬಾ, ಪರವಾಗಿಲ್ಲ.

483
00:41:52,333 --> 00:41:55,750
ನಮ್ಮ ಮಧ್ಯೆ ಏನಾದರೂ ನಡೆದರೆ,
ಆಗ ಕರಡಿ ಆಗಬಹುದೇನೋ.

484
00:41:57,000 --> 00:41:59,541
ಹೋಗಿ ಬಟ್ಟೆ ಬದಲಾಯಿಸು. ಆ ರಾತ್ರಿ
ಹೂಲಿಯನ್ ಜೊತೆ ಏನು ಮಾಡಿದೆ ಅಂತ ಹೇಳು.

485
00:42:00,541 --> 00:42:01,375
ಹೋಗು.

486
00:42:02,166 --> 00:42:04,166
- ಈ ಹುಡುಗಿ ಯಾರು?
- ಪ್ರಿಶಾ.

487
00:42:04,666 --> 00:42:07,333
ಅವಳು ಲಂಡನ್‌ನಿಂದ ಬಂದಿರುವ
ವೈದ್ಯಕೀಯ ವಿದ್ಯಾರ್ಥಿನಿ.

488
00:42:07,833 --> 00:42:10,875
- ಅವಳು ಎಷ್ಟು ದಿನ ಇಲ್ಲಿರುತ್ತಾಳೆ?
- ಮೂರು ವಾರಗಳು ಅನಿಸುತ್ತೆ.

489
00:42:11,541 --> 00:42:14,083
ಹೆಚ್ಚು ಸಮಯವಲ್ಲ. ನಿನಗವಳು ಇಷ್ಟವಾದರೆ?

490
00:42:14,750 --> 00:42:16,707
ಒಂದು ವಸ್ತು ಶಾಶ್ವತವಾಗಿ ಉಳಿಯಲ್ಲ ಅಂತ

491
00:42:16,708 --> 00:42:19,082
ಅದು ಅನುಭವಿಸಲು ಯೋಗ್ಯವಲ್ಲ ಅಂತಲ್ಲ.

492
00:42:19,083 --> 00:42:22,082
ಎಷ್ಟೇ ಆದರೂ, ಇದು ಪ್ರವಾಸಿ ದ್ವೀಪ.

493
00:42:22,083 --> 00:42:23,625
ಜನ ಬಂದು ಹೋಗುತ್ತಿರುತ್ತಾರೆ.

494
00:42:25,125 --> 00:42:28,208
ನೀನು ಇಲ್ಲಿ ಜಾಸ್ತಿ ದಿನ ಇರಲ್ಲ,
ಆದರೂ ಜೆ ಜೊತೆ ಇದ್ದೀಯ.

495
00:42:30,625 --> 00:42:33,707
ಗೊತ್ತಿತ್ತು! ದುಷ್ಟನಿಗೆ ಮುತ್ತು ಕೊಟ್ಟೆ ಅಂತ.

496
00:42:33,708 --> 00:42:35,458
ಒಂದು ಮುತ್ತು ಮಾತ್ರ.

497
00:42:36,458 --> 00:42:38,041
ಅಂದಿನಿಂದ ಅವನ ಸುದ್ದಿ ಇಲ್ಲ.

498
00:42:41,083 --> 00:42:42,708
ಅಷ್ಟು ಕೆಟ್ಟದಾಗಿ ಮುತ್ತು ಕೊಟ್ಟೆಯಾ?

499
00:42:43,500 --> 00:42:44,624
ಇಲ್ಲ.

500
00:42:44,625 --> 00:42:46,958
ಏನು ಹೇಳುತ್ತಿದ್ದೀಯ?
ಒಂದು ಮುತ್ತಷ್ಟೇ, ಆಮೇಲೆ ಏನೂ ಇಲ್ವಾ?

501
00:42:47,375 --> 00:42:48,291
ನಾಲಿಗೆನೂ ಇಲ್ವಾ?

502
00:42:49,166 --> 00:42:50,041
ನಾಲಿಗೆ ಜಾಸ್ತಿಯಾಯಿತಾ?

503
00:42:51,333 --> 00:42:52,166
ದೇವರೇ!

504
00:43:02,458 --> 00:43:05,875
ಈಗಾಗಲೇ ಅವನನ್ನು ಬೆತ್ತಲೆಯಾಗಿ ನೋಡಿದ್ದೀಯ,
ಆದ್ದರಿಂದ ಏನು ಸಿಗುತ್ತಿದೆ ಅಂತ ನಿನಗೆ ಗೊತ್ತು.

505
00:43:06,541 --> 00:43:07,625
ಸರಿ.

506
00:43:08,333 --> 00:43:09,250
ಅಲ್ಲಿದ್ದಾಳೆ.

507
00:43:10,500 --> 00:43:13,458
- ನಾನು ನಿಮ್ಮಿಂದ ದೂರ ಇರಲಾ?
- ಬೇಡ, ಅವಳು ಅಪಾಯಕಾರಿ ಇರಬಹುದು.

508
00:43:14,375 --> 00:43:15,208
ಬಾ…

509
00:43:18,833 --> 00:43:21,124
- ಪ್ರಿಶಾ?
- ಅಮಾರ.

510
00:43:21,125 --> 00:43:21,958
- ಹೇ.
- ಹಾಯ್.

511
00:43:22,916 --> 00:43:25,374
ಇವಳು ರೈ, ನನ್ನ ಟೆಕ್ಸಾಸ್‌ನ ಸ್ನೇಹಿತೆ.

512
00:43:25,375 --> 00:43:27,374
- ಹಾಯ್. ಭೇಟಿಯಾಗಿ ಸಂತೋಷವಾಯಿತು.
- ನನಗೂ.

513
00:43:27,375 --> 00:43:30,666
ನಾನು ಅವಳನ್ನು ಕರೆತಂದದ್ದು ವಿಚಿತ್ರವಲ್ಲ
ಅಂದುಕೊಳ್ಳುತ್ತೀನಿ. ಅವಳಿಗಿಲ್ಲಿ ಸ್ನೇಹಿತರಿಲ್ಲ.

514
00:43:31,625 --> 00:43:34,082
- ನಾನು ನಿನ್ನನ್ನು ಅಪಹರಿಸುತ್ತಿದ್ದೆ, ಆದರೆ ಈಗ…
- ನೋಡಿದೆಯಾ?

515
00:43:34,083 --> 00:43:36,165
- ಓಹ್.
- ಅವಳಿಗೆ ಅರ್ಥವಾಯಿತು. ಡ್ರಿಂಕ್ ತಂದು ಕೊಡಲಾ?

516
00:43:36,166 --> 00:43:37,416
ಖಂಡಿತ. ತಂದು ಕೊಡು.

517
00:43:37,916 --> 00:43:40,249
- ರೈ, ನಿನಗೂ ತರಲಾ?
- ಸರಿ. ಥ್ಯಾಂಕ್ಸ್.

518
00:43:40,250 --> 00:43:42,665
- ನಿಮಗೆ ಏನು ಇಷ್ಟ?
- ನನಗೆ ಮಾರ್ಗರಿಟಾ.

519
00:43:42,666 --> 00:43:44,540
- ನನಗೆ ಖಾರ ಇಷ್ಟ.
- ಅದ್ಭುತ.

520
00:43:44,541 --> 00:43:46,999
ಕೇಳಿ. ಹಾಯ್.
ನನಗೆ ಮೂರು ಮಾರ್ಗರಿಟಾ ಕೊಡಿ.

521
00:43:47,000 --> 00:43:47,916
ಖಂಡಿತ.

522
00:43:49,708 --> 00:43:50,999
ನನಗೆ ಈ ಹಾಡು ಇಷ್ಟ!

523
00:43:51,000 --> 00:43:54,333
ಸ್ವರ್ಗದಲ್ಲಿ ಪ್ರೀತಿ ಮೊದಲು ಬರುವುದಂತೆ

524
00:43:55,000 --> 00:43:58,791
ಆ ಸ್ವರ್ಗವನ್ನು ಧರೆಯ ಮೇಲೆ ತರುತ್ತೇವೆ

525
00:43:59,625 --> 00:44:02,415
ಸ್ವರ್ಗವು ಧರೆಯ ಮೇಲೇ ಇದೆ

526
00:44:02,416 --> 00:44:03,540
ನೀವು ಸುಂದರವಾಗಿದ್ದೀರಿ.

527
00:44:03,541 --> 00:44:05,374
- ಇರು, ಈ ರಾತ್ರಿಯ ನೆನಪು ಬೇಕು.
- ಸರಿ!

528
00:44:05,375 --> 00:44:06,291
ಫೋಟೋ ತೆಗೊಳ್ಳೋಣ.

529
00:44:11,125 --> 00:44:12,624
- ಓ ದೇವರೇ.
- ಚೆನ್ನಾಗಿದ್ದೀಯಾ?

530
00:44:12,625 --> 00:44:13,790
- ಮುದ್ದು.
- ಚೆನ್ನಾಗಿದ್ದೇನೆ.

531
00:44:13,791 --> 00:44:14,749
- ಖಂಡಿತ?
- ಹೂಂ.

532
00:44:14,750 --> 00:44:18,208
- ನೀವು ಆಕರ್ಷಕವಾಗಿ ಕಾಣುತ್ತಿದ್ದೀರಿ.
- ದೇವರೇ. ನೀನು ಅದ್ಭುತವಾಗಿ ಕಾಣುತ್ತಿದ್ದೀಯ!

533
00:44:23,541 --> 00:44:26,208
ಮಿನುಗುವ ದೀಪ ಆಗಲ್ಲವಾ ನಿನಗೆ?

534
00:44:27,541 --> 00:44:28,375
ಹೌದು.

535
00:44:29,666 --> 00:44:32,416
ಹೌದು. ನನಗೆ ಫಿಟ್ಸ್ ಇದೆ.

536
00:44:33,541 --> 00:44:34,458
ಹೂಂ.

537
00:44:35,833 --> 00:44:37,458
- ನಿಯಂತ್ರಣದಲ್ಲಿದೆಯಾ?
- ಇಲ್ಲ.

538
00:44:38,375 --> 00:44:41,540
ಇಲ್ಲ, ಭಯಾನಕವಾಗಿದೆ.
ಶಸ್ತ್ರಚಿಕಿತ್ಸೆ ಮಾಡಬೇಕು ಅಂದರು,

539
00:44:41,541 --> 00:44:44,665
ಆದರೆ ಅದು ನನ್ನ ನೆನಪನ್ನು ಅಳಿಸಿಹಾಕಬಹುದು,

540
00:44:44,666 --> 00:44:46,500
ಮಾತ್ರೆ ತಿಂದರೆ ಮೆದುಳು ನಿಷ್ಕ್ರಿಯವಾಗುತ್ತೆ.

541
00:44:47,083 --> 00:44:48,333
ಹಾಗಾಗಿ ನಾನು ಮಾತ್ರೆ ತಗೊಳ್ಳಲ್ಲ.

542
00:44:53,916 --> 00:44:57,291
ಬಹಳಷ್ಟು ರೋಗಿಗಳಿಗೆ ಹೀಗೇ ಅನಿಸುತ್ತೆ.

543
00:45:01,875 --> 00:45:03,874
ನಾನು ಇದನ್ನೆಲ್ಲಾ
ನಿನಗೆ ಏಕೆ ಹೇಳಿದೆನೋ ಗೊತ್ತಿಲ್ಲ.

544
00:45:03,875 --> 00:45:04,875
ನಾನು ಯಾರಿಗೂ ಹೇಳಿಲ್ಲ.

545
00:45:05,625 --> 00:45:07,833
ಕೆಲವೊಮ್ಮೆ ಅಪರಿಚಿತರೊಂದಿಗೆ ಮಾತಾಡೋದು ಸುಲಭ.

546
00:45:09,916 --> 00:45:10,916
ಥ್ಯಾಂಕ್ಸ್.

547
00:45:11,833 --> 00:45:14,416
ನಮ್ಮ ಫೋಟೋಗೆ ಯಾರು ಹಾರ್ಟ್ ಕೊಟ್ಟರು ನೋಡು.

548
00:45:14,958 --> 00:45:18,332
- ಯಾರೋ ಇದನ್ನು ಇಷ್ಟಪಟ್ಟಿದ್ದಾರೆ.
- ಆ ಯಾರೋ ನನಗೆ ಹೇಳದೆ ಮಾಯವಾದರು, ಅಮಾರ.

549
00:45:18,333 --> 00:45:20,040
- ಹಾಗೆ ಮಾಡಿದನಾ ಅವನು?
- ಹೌದು, ಹಾಗೇ ಮಾಡಿದ.

550
00:45:20,041 --> 00:45:21,749
- ಏನು?
- ರೈ, ದಯವಿಟ್ಟು.

551
00:45:21,750 --> 00:45:24,165
ಅವಳಿಗೆ ಪ್ರೀತಿ ಮೂಡಿದೆ
ಅಂತ ಒಪ್ಪಿಕೊಳ್ಳಲು ಇಷ್ಟವಿಲ್ಲ.

552
00:45:24,166 --> 00:45:25,708
ಸರಿ, ನಾನು ಬಾತ್ರೂಮ್‌ಗೆ ಹೋಗಿ ಬರುತ್ತೇನೆ.

553
00:45:27,916 --> 00:45:29,125
ಅವನ ಹೊಟ್ಟೆಯ ಭಾಗ ನೋಡು.

554
00:45:35,000 --> 00:45:36,082
ಅವಳು ಚೆನ್ನಾಗಿದ್ದಾಳೆ.

555
00:45:36,083 --> 00:45:37,625
ನೀವು ನನ್ನ ದೋಣಿಗೆ ಬನ್ನಿ.

556
00:45:44,541 --> 00:45:45,500
ಥ್ಯಾಂಕ್ಸ್.

557
00:45:49,666 --> 00:45:51,791
- ಹೋಗಿ ಮಾಡು.
- ನಾಳೆ.

558
00:45:53,000 --> 00:45:55,290
ಸ್ಕ್ರಬ್ ತಾನು ತುಂಬಾ ಆಕರ್ಷಕ ಅಂದುಕೊಳ್ತಾನೆ

559
00:45:55,291 --> 00:45:57,915
ಅವನು ನಿಷ್ಪ್ರಯೋಜಕ ಕೂಡ

560
00:45:57,916 --> 00:46:03,457
ಸದಾ ತನ್ನ ಬಗ್ಗೆ ಮಾತಾಡುತ್ತಾ
ವ್ಯರ್ಥವಾಗಿ ಕುಳಿತಿರುವವನೇ ಅವನು, ಹಾಗಾಗಿ

561
00:46:03,458 --> 00:46:06,040
ಇಲ್ಲ, ನನಗೆ ನಿನ್ನ ನಂಬರ್ ಬೇಡ

562
00:46:06,041 --> 00:46:08,749
ಇಲ್ಲ, ನಾನು ನನ್ನ ನಂಬರ್ ಕೊಡಲ್ಲ

563
00:46:08,750 --> 00:46:11,165
ಇಲ್ಲ, ನಾನು ನಿನ್ನನ್ನು ಎಲ್ಲಿಯೂ ಭೇಟಿಯಾಗಲ್ಲ

564
00:46:11,166 --> 00:46:13,624
ಇಲ್ಲ, ನನಗೆ ನಿನ್ನ ಸಮಯ ಬೇಡ

565
00:46:13,625 --> 00:46:16,207
ಇಲ್ಲ, ನನಗೆ ಸ್ಕ್ರಬ್ ಬೇಡ.

566
00:46:16,208 --> 00:46:19,124
ಸ್ಕ್ರಬ್, ನಿನಗೆ ನನ್ನ ಪ್ರೀತಿ ಸಿಗಲ್ಲ

567
00:46:19,125 --> 00:46:20,040
ಹೋಗು ಚಿನ್ನ!

568
00:46:20,041 --> 00:46:22,832
ಆತ್ಮೀಯ ಸ್ನೇಹಿತನ ಗಾಡಿಯಲ್ಲಿ ಹಿಂದೆ ಕುಳಿತು

569
00:46:22,833 --> 00:46:24,708
ನನ್ನ ಜೊತೆ ಸರಸವಾಡಲು ಯತ್ನಿಸುತ್ತಾನೆ

570
00:46:27,166 --> 00:46:30,207
- ಮೇಲೆ ಬಾ. ಎರಡನೇ ಪಂಕ್ತಿ ಹಾಡು.
- ಅಮರಾ!

571
00:46:30,208 --> 00:46:34,457
ಅವನು ಆಕರ್ಷಕವಾಗಿಲ್ಲ,
ಅವನಿಗೆ ಜವಾಬ್ದಾರಿಯೂ ಇಲ್ಲ, ಹಾಗಾಗಿ

572
00:46:34,458 --> 00:46:37,665
- ಇಲ್ಲ, ನನಗೆ ನಿನ್ನ ನಂಬರ್ ಬೇಡ
- ಇಲ್ಲ, ನನಗೆ ನಿನ್ನ ನಂಬರ್ ಬೇಡ

573
00:46:37,666 --> 00:46:39,540
ಇಲ್ಲ, ನಾನು ನನ್ನ ನಂಬರ್ ಕೊಡಲ್ಲ

574
00:46:39,541 --> 00:46:42,665
ಇಲ್ಲ, ನಾನು ನಿನ್ನನ್ನು ಎಲ್ಲಿಯೂ ಭೇಟಿಯಾಗಲ್ಲ

575
00:46:42,666 --> 00:46:44,208
ಇಲ್ಲ, ನನಗೆ ನಿನ್ನ ಸಮಯ ಬೇಡ

576
00:46:46,500 --> 00:46:48,666
ರೈ. ರೈ, ಸ್ವಲ್ಪ ನಿಲ್ಲು.

577
00:46:50,791 --> 00:46:52,541
ನಾನು ನಿನಗೆ ಕರೆ ಮಾಡದೇ ಇದ್ದಿದ್ದಕ್ಕೆ ಕ್ಷಮಿಸು.

578
00:46:55,916 --> 00:46:57,000
ಇರು, ಏನು…

579
00:46:58,083 --> 00:46:59,000
ಚೆನ್ನಾಗಿದ್ದೀಯಾ?

580
00:47:00,083 --> 00:47:00,958
ಏನಾಯಿತು?

581
00:47:03,916 --> 00:47:04,832
ಕಾರ್ಲೋಸ್.

582
00:47:04,833 --> 00:47:06,083
ಅದು ಯಾರು?

583
00:47:07,375 --> 00:47:08,333
ಅವನು ಸಾಲ ಕೊಡೋನು.

584
00:47:09,625 --> 00:47:10,750
ನೀನು ಅವನಿಗೆ ಹಣ ತೀರಿಸಬೇಕಾ?

585
00:47:12,333 --> 00:47:13,166
ಹೌದು.

586
00:47:13,666 --> 00:47:16,333
- ನಿನಗೆ ಹಣದ ಅಗತ್ಯವಿದ್ದರೆ--
- ಸಹಾಯ ಮಾಡುತ್ತೇನೆ ಅಂತ ಹೇಳಿ ಅವಮಾನಿಸಬೇಡ.

587
00:47:21,250 --> 00:47:23,915
ನನ್ನ ಸುತ್ತಮುತ್ತ ಇದ್ದರೆ
ನೀನು ಸುರಕ್ಷಿತವಾಗಿರಲ್ಲ ಅಂತ ಕರೆ ಮಾಡಲಿಲ್ಲ.

588
00:47:23,916 --> 00:47:25,833
ಕಾರ್ಲೋಸ್ ಜೊತೆ
ವಿಷಯ ಇತ್ಯರ್ಥವಾಗುವವರೆಗೆ, ನಾನು…

589
00:47:27,708 --> 00:47:30,000
ನೀನು ಹುಷಾರಾಗಿರು, ಆಯ್ತಾ?

590
00:47:35,250 --> 00:47:36,083
ಚಿಂತಿಸಬೇಡ.

591
00:47:38,125 --> 00:47:39,500
ನಾನು ಅಷ್ಟು ಸುಲಭವಾಗಿ ಹೆದರಲ್ಲ.

592
00:47:56,041 --> 00:47:58,416
ನೀನು ನನಗೆ ಇಷ್ಟ, ಒರಾಯ.

593
00:48:05,416 --> 00:48:07,166
ನಾನು ಇಲ್ಲಿ ಸ್ವಲ್ಪ ಸಮಯ ಮಾತ್ರ ಇರೋದು.

594
00:48:10,041 --> 00:48:11,291
ಹಾಗಾದರೆ ಸಮಯ ವ್ಯರ್ಥ ಆಗ್ತಿದೆ.

595
00:48:23,041 --> 00:48:24,125
ತುಂಬಾ ಸುಂದರವಾಗಿದೆ.

596
00:48:24,750 --> 00:48:25,916
ಹೌದು.

597
00:48:26,750 --> 00:48:27,708
ತುಂಬಾ ಸುಂದರವಾಗಿದೆ.

598
00:48:31,250 --> 00:48:32,874
ತುಂಬಾ ಜನ ಇದ್ದಾರೆ.

599
00:48:32,875 --> 00:48:34,416
ನಾವು ಅವರನ್ನು ಗಿರಿಸ್ ಅಂತ ಕರೆಯುತ್ತೇವೆ.

600
00:48:35,708 --> 00:48:37,500
- ಏನು?
- ಪ್ರವಾಸಿಗರು.

601
00:48:39,125 --> 00:48:41,458
- ಹಾಗಾದರೆ ತುಂಬಾ, ತುಂಬಾ ಗಿರಿಗಳು.
- ತುಂಬಾ, ತುಂಬಾ ಗಿರಿಗಳು.

602
00:48:42,208 --> 00:48:43,916
ನಾನು ಗಿರಿನಾ? ನಿನ್ನ ಲೆಕ್ಕದಲ್ಲಿ?

603
00:48:44,625 --> 00:48:45,750
ಹೌದು. ನೀನೂ ಗಿರಿ.

604
00:48:50,583 --> 00:48:53,708
- ಆರಾಮಾಗಿದೆಯಾ?
- ಹೌದು. ನೀನೇನು ಮಾಡುತ್ತಿದ್ದೀಯ?

605
00:49:07,958 --> 00:49:09,000
ಓ ದೇವರೇ.

606
00:49:09,958 --> 00:49:11,333
ಇದು ಆರಂಭ ಅಷ್ಟೇ.

607
00:49:21,125 --> 00:49:22,250
ನಾವು ಅದರಲ್ಲಿ ಹೋಗುತ್ತೇವಾ?

608
00:49:36,791 --> 00:49:37,875
ನಂಬಲಸಾಧ್ಯವಾಗಿದೆ.

609
00:49:40,916 --> 00:49:42,875
ನೀನು ಹಣಕ್ಕಾಗಿ ಕಾರ್ಲೋಸ್ ಹತ್ತಿರ
ಏಕೆ ಹೋಗಬೇಕಾಯಿತು?

610
00:49:44,666 --> 00:49:45,999
ಈ ದಾರಿ ಒಂದು,

611
00:49:46,000 --> 00:49:49,707
ಅಥವಾ ಅಪ್ಪ ಬಹುಶಃ
ಡೆವಲಪರ್ ಜೊತೆ ಒಪ್ಪಂದಕ್ಕೆ ಸಹಿ ಹಾಕುತ್ತಾರೆ.

612
00:49:49,708 --> 00:49:50,541
ಡೆವಲಪರಾ?

613
00:49:52,625 --> 00:49:55,375
- ಅವರಿಗೆ ಏನು ಲಾಭ?
- ಅವರಿಗೆ ನಮ್ಮ ಹಡಗುಕಟ್ಟೆಗಳು ಬೇಕು.

614
00:49:56,166 --> 00:49:58,125
ಅಪ್ಪನ ಮೇಲೆ ತುಂಬಾ ಒತ್ತಡ ಹೇರುತ್ತಿದ್ದಾರೆ.

615
00:49:59,125 --> 00:50:00,750
ನಮ್ಮ ಹತ್ತಿರ ಹೆಚ್ಚಿನ ಆಯ್ಕೆಗಳಿಲ್ಲ.

616
00:50:02,166 --> 00:50:03,583
ತುಂಬಾ ಜವಾಬ್ದಾರಿ ಇದೆ.

617
00:50:05,000 --> 00:50:07,207
ಈ ವ್ಯವಹಾರ 100 ವರ್ಷ ಹಳೆಯದು,

618
00:50:07,208 --> 00:50:08,375
ಜವಾಬ್ದಾರಿ ಅಪ್ಪನ ಹೆಗಲ ಮೇಲಿದೆ.

619
00:50:10,333 --> 00:50:11,250
ನನ್ನ ಹೆಗಲ ಮೇಲೂ ಇದೆ.

620
00:50:18,416 --> 00:50:19,416
ನೋಡಿ ಹೆಜ್ಜೆ ಇಡು.

621
00:50:24,583 --> 00:50:26,250
- ನೀನು ಇರೋದು ಇಲ್ಲಾ?
- ಹೌದು.

622
00:50:26,875 --> 00:50:29,208
ನಾನು ಈ ದೋಣಿಯಲ್ಲಿ
ಬಹಳ ದಿನಗಳಿಂದ ವಾಸಿಸುತ್ತಿದ್ದೇನೆ.

623
00:50:29,916 --> 00:50:32,958
ನನ್ನ ಕೆಳಗೆ ಸಮುದ್ರವಿಲ್ಲದೆ ನಿದ್ರಿಸೋದು ಕಷ್ಟ.

624
00:50:35,125 --> 00:50:36,375
ನಿನ್ನ ಅಮ್ಮನ ಬಗ್ಗೆ ಹೇಳಲೇ ಇಲ್ಲ.

625
00:50:39,083 --> 00:50:41,541
ನಾನು ಎಂಟು ವರ್ಷದವನಿದ್ದಾಗ ತೀರಿಕೊಂಡಳು.

626
00:50:43,791 --> 00:50:44,708
ಅಯ್ಯೋ.

627
00:50:48,083 --> 00:50:49,208
ಇವರೇ ನಮ್ಮಪ್ಪ.

628
00:50:51,750 --> 00:50:52,583
ಬಾ ಇಲ್ಲಿ.

629
00:50:54,416 --> 00:50:55,416
ಒರಾಯಳನ್ನು ಭೇಟಿಯಾಗು.

630
00:50:57,083 --> 00:50:57,916
ಹಲೋ, ಒರಾಯ

631
00:50:58,458 --> 00:51:00,207
ನನ್ನ ಮಗ ನಿನ್ನ ಬಗ್ಗೆ ತುಂಬಾ ಹೇಳಿದ್ದಾನೆ.

632
00:51:00,208 --> 00:51:01,875
- ಇಂಗ್ಲಿಷ್‌ನಲ್ಲಿ, ಅಪ್ಪ.
- ಕ್ಷಮಿಸು.

633
00:51:02,458 --> 00:51:05,208
- ನಾನು ಮತೇಯೊ.
- ರೈ. ನಿನ್ನನ್ನು ಭೇಟಿಯಾಗಿ ಸಂತೋಷವಾಯಿತು.

634
00:51:08,583 --> 00:51:10,333
ನಾವು ಭೇಟಿಯಾಗಿದ್ದೇವಾ? ಪರಿಚಿತೆ ಅನಿಸುತ್ತಿದೆ.

635
00:51:12,208 --> 00:51:14,457
ಇಲ್ಲ, ನಾವು ಭೇಟಿಯಾಗಿಲ್ಲ.
ಮೊದಲ ಬಾರಿಗೆ ಬಂದಿದ್ದೇನೆ.

636
00:51:14,458 --> 00:51:16,916
ವಿಚಿತ್ರವಾಗಿರಬೇಡ.
ನಾವು ದೋಣಿಯಲ್ಲಿ ಹೊರಟಿದ್ದೆವು.

637
00:51:17,833 --> 00:51:20,000
- ಸರಿ. ಮಜಾ ಮಾಡಿ.
- ಥ್ಯಾಂಕ್ಸ್.

638
00:51:23,041 --> 00:51:23,958
ಕೆಲಸ ಮಾಡುತ್ತೀಯಾ?

639
00:51:25,833 --> 00:51:26,666
ಕೆಲಸವಾ?

640
00:51:28,458 --> 00:51:30,791
- ಆಯ್ತು, ಸರ್.
- ಹೋಗೋಣ.

641
00:51:33,541 --> 00:51:35,541
ಕೇಳಿ.

642
00:51:36,041 --> 00:51:37,540
ಇವಳು ಒರಾಯ.

643
00:51:37,541 --> 00:51:39,499
ಇವತ್ತು ನಮಗೆ ಸಹಾಯ ಮಾಡುತ್ತಾಳೆ, ಆಯ್ತಾ?

644
00:51:39,500 --> 00:51:41,541
ನೀವು ಇದುವರೆಗೆ
ಹುಡುಗಿಯನ್ನು ಕೆಲಸಕ್ಕೆ ಕರೆತಂದಿಲ್ಲ.

645
00:51:44,791 --> 00:51:46,707
- ಅವನು ಏನು ಹೇಳಿದ?
- ಏನೂ ಇಲ್ಲ.

646
00:51:46,708 --> 00:51:47,791
ಕೆಲಸ ಶುರು ಮಾಡೋಣ.

647
00:51:50,083 --> 00:51:52,791
- ಚಿಕ್ಕವು ಬೇಡ, ಆಯ್ತಾ?
- ಆಯ್ತು. ಸರಿ.

648
00:51:53,375 --> 00:51:55,458
ನಾವು ತಿನ್ನಲು ಸಾಧ್ಯವಾಗದಿದ್ದ ಮೇಲೆ
ಅವು ಏಕೆ ಸಾಯಬೇಕು?

649
00:51:59,708 --> 00:52:00,583
ಎಷ್ಟು ಬೇಗ ಕಲಿತೆ.

650
00:52:08,333 --> 00:52:09,166
ಚೆನ್ನಾಗಿ ಮಾಡಿದೆ.

651
00:52:11,708 --> 00:52:14,333
ಇಡೀ ಜೀವನದಲ್ಲಿ
ಇಷ್ಟೊಂದು ದುರ್ನಾತ ಬೀರಿಲ್ಲ ನಾನು.

652
00:52:17,666 --> 00:52:18,583
ಹಾಗಾದರೆ ಸ್ವಚ್ಛವಾಗೋಣ.

653
00:52:27,833 --> 00:52:30,041
ಬಾ! ನೀರು ಅದ್ಭುತವಾಗಿದೆ.

654
00:52:30,541 --> 00:52:32,040
ಅಲ್ಲಿ ಶಾರ್ಕ್‌ಗಳಿವೆಯಾ?

655
00:52:32,041 --> 00:52:33,916
ಇದ್ದೇ ಇರುತ್ತೆ. ಇದು ಸಮುದ್ರ.

656
00:52:34,750 --> 00:52:37,375
ಬಾ. ನೀನು ಅಷ್ಟು ಸುಲಭವಾಗಿ
ಹೆದರಲ್ಲ ಅಂದುಕೊಂಡಿದ್ದೆ.

657
00:53:09,958 --> 00:53:12,083
ಇದನ್ನು ನೋಡಿದರೆ
ನಿನ್ನ ತಂದೆಗೆ ಹೆಮ್ಮೆ ಆಗುತ್ತೆ.

658
00:53:21,333 --> 00:53:24,333
ಈಗ ನಾವು ನಮ್ಮ ಶ್ರಮದ ಫಲ ಆನಂದಿಸಬಹುದು.

659
00:53:26,083 --> 00:53:28,583
ನೀನು ಇಷ್ಟು ಒಳ್ಳೆ ಮೀನು ತಿಂದಿರಲ್ಲ.

660
00:53:38,625 --> 00:53:40,582
- ಅಬ್ಬಾ ದೇವರೇ, ಇದು ನಿಜವಾಗಿಯೂ ಚೆನ್ನಾಗಿದೆ.
- ಅಲ್ವಾ?

661
00:53:40,583 --> 00:53:43,833
- ಸಿಹಿಯಾಗಿ ಬೆಣ್ಣೆಯಂತಿದೆ.
- ಮತ್ತು ಒಳ್ಳೆಯದು ಕೂಡ.

662
00:53:52,500 --> 00:53:54,125
ನೀನು ಮಾಡೋ ಕೆಲಸ ನಿನಗೆ ಇಷ್ಟ, ಅಲ್ವಾ?

663
00:53:57,375 --> 00:53:58,375
ಇದರಲ್ಲೇನು ಚೆನ್ನಾಗಿಲ್ಲ?

664
00:54:00,291 --> 00:54:03,041
ಸಮುದ್ರದ ಮೇಲೆ ವಾಸಿಸಲು ಸಿಗುತ್ತೆ,

665
00:54:03,791 --> 00:54:06,958
ನನ್ನ ಕುಟುಂಬದ ಜೊತೆ ಕೆಲಸ ಮಾಡುತ್ತೇನೆ,
ಈಜುತ್ತೇನೆ, ಮೀನು ಹಿಡಿಯುತ್ತೇನೆ.

666
00:54:08,000 --> 00:54:09,666
ನನ್ನ ತಂದೆಯ, ನನ್ನ ಅಜ್ಜನ

667
00:54:10,708 --> 00:54:11,583
ಗೌರವ ಉಳಿಸುತ್ತೇನೆ.

668
00:54:12,583 --> 00:54:14,125
ನನ್ನ ತಂದೆಯನ್ನು ಎಂದಿಗೂ ಭೇಟಿ ಮಾಡಿಲ್ಲ.

669
00:54:16,333 --> 00:54:17,665
- ಹೌದಾ?
- ಹೌದು.

670
00:54:17,666 --> 00:54:20,166
ಟೆಕ್ಸಾಸ್‌ನಲ್ಲಿ ಉದ್ಯಮಿ,
ಆದರೆ ಅವರಿಗೆ ನಾನು ಬೇಡ.

671
00:54:21,291 --> 00:54:23,208
ಆದರೆ ನನ್ನ ಅಮ್ಮ ಅದ್ಭುತ ವ್ಯಕ್ತಿ.

672
00:54:24,208 --> 00:54:27,625
ಅವಳು ಅಮೇರಿಕದ ಕನಸನ್ನು ನನಸಾಗಿಸಲು
ಮಯೋರ್ಕಾವನ್ನು ತೊರೆದಳು.

673
00:54:28,916 --> 00:54:30,916
ಅವಳು ಅಮೆರಿಕಕ್ಕೆ ಬಂದಾಗ
ಅವಳ ಹತ್ತಿರ ಏನೂ ಇರಲಿಲ್ಲ,

674
00:54:31,416 --> 00:54:33,916
ಆದರೆ ಅವಳು ಕತ್ತೆಯಂತೆ ದುಡಿದಳು ಮತ್ತು…

675
00:54:37,500 --> 00:54:39,708
ಅವಳು ಸಾಧಿಸಿದ್ದು ಅದ್ಭುತ.

676
00:54:41,375 --> 00:54:42,958
ಅವಳು ಬಹಳ ಯಶಸ್ಸು ಕಂಡಿದ್ದಾಳೆ.

677
00:54:44,708 --> 00:54:46,375
- ಏನು?
- ಕ್ಷಮಿಸು, ಆದರೆ…

678
00:54:47,791 --> 00:54:51,916
ಅಮೆರಿಕನ್ನರ ಯಶಸ್ಸಿನ ವ್ಯಾಖ್ಯಾನ
ನನಗೆ ಆಶ್ಚರ್ಯ ತರಿಸುತ್ತೆ.

679
00:54:52,750 --> 00:54:53,625
ನಿನ್ನ ಮಾತಿನ ಅರ್ಥವೇನು?

680
00:54:55,291 --> 00:54:58,916
ನಿಮ್ಮ ಜೀವನದಲ್ಲಿ ಬರೀ ಕೆಲಸ ಮಾತ್ರ ಇರೋದು,

681
00:54:59,500 --> 00:55:01,207
ರಜೆಗೆ ಹೋಗಲು ಕೆಲಸ ಮಾಡೋದು,

682
00:55:01,208 --> 00:55:03,541
ಆಮೇಲೆ ಹೆಚ್ಚು ಹೆಚ್ಚು ಖರೀದಿಸೋದು, ಆಮೇಲೆ…

683
00:55:05,208 --> 00:55:06,833
ಗೊತ್ತಿಲ್ಲ. ನಮ್ಮ ಜೀವನ ನೋಡು.

684
00:55:08,083 --> 00:55:12,000
ನಮಗೆ ಸಮಸ್ಯೆಗಳಿವೆ, ಆದರೆ
ನಮ್ಮ ಹತ್ತಿರ ಇರೋದರಲ್ಲಿ ನಮಗೆ ಸಂತೋಷ.

685
00:55:13,250 --> 00:55:17,041
ನಮಗೆ ಇನ್ನೇನು ಬೇಕು?
ಮಿಸ್ ಅಮೇರಿಕಾ ಕೂಡ ನನ್ನ ದೋಣಿಗೆ ಕಾಲಿಟ್ಟಳು.

686
00:55:19,041 --> 00:55:22,250
ಕೆಲವೊಮ್ಮೆ ನಮ್ಮಲ್ಲಿರೋದನ್ನು ನಾವು ಆನಂದಿಸಬೇಕು.

687
00:55:23,416 --> 00:55:24,416
ಅದು ನಮ್ಮ ಬಳಿ ಇರುವಾಗಲೇ.

688
00:55:26,916 --> 00:55:28,291
ನಾನು ಹೇಳಿದ್ದು ಸರಿ ಅನಿಸಿತಾ?

689
00:55:31,583 --> 00:55:32,583
ಸರಿಯಾಗಿ ಹೇಳಿದೆ.

690
00:55:36,250 --> 00:55:37,250
ಇಲ್ಲಿರೋದು…

691
00:55:39,875 --> 00:55:41,541
ಈ ಜಾಗ, ಈ ಬೇಸಿಗೆಯಲ್ಲಿ, ಇದು…

692
00:55:42,916 --> 00:55:45,125
ನನಗೆ ಎಲ್ಲಿ ಇರಲು ಇಷ್ಟ
ಅಂತ ಯೋಚಿಸುವಂತೆ ಮಾಡಿದೆ.

693
00:55:49,375 --> 00:55:50,291
ಹೂಂ,

694
00:55:51,375 --> 00:55:54,625
ನನಗೆ ಭೂಮಿಯಲ್ಲಿ ಇಲ್ಲಿಗಿಂತ
ಬೇರೆ ಯಾವ ಜಾಗವೂ ಇಷ್ಟವಿಲ್ಲ.

695
00:56:08,375 --> 00:56:09,375
ನಿನ್ನ ಕೋಣೆ ನೋಡಬಹುದಾ?

696
00:58:24,291 --> 00:58:26,666
ಹೂಂ. ಅಂದರೆ
ವಾರಾಂತ್ಯದಲ್ಲಿ ಕೆಲಸ ಮಾಡುತ್ತೇನೆ…

697
00:58:27,666 --> 00:58:30,707
ಸರಿ. ಇದನ್ನು ಒಮ್ಮೆ ನೋಡುತ್ತೀರಾ--

698
00:58:30,708 --> 00:58:33,874
- ಹಾಯ್. ಹೇಗಿದ್ದೀಯ?
- ಚೆನ್ನಾಗಿದ್ದೇನೆ.

699
00:58:33,875 --> 00:58:37,125
- ನೀನು ಸಂತೋಷದಿಂದ ಹೊಳೆಯುತ್ತಿದ್ದೀಯ.
- ಹೌದು.

700
00:58:39,875 --> 00:58:43,374
ನೀನು ಏನು ಮಾಡಿದೆ ಅಂತ ಕೇಳಲ್ಲ.
ನೀನು ಸುರಕ್ಷಿತವಾಗಿದ್ದರೆ ಸಾಕು.

701
00:58:43,375 --> 00:58:44,790
ಸ್ಪೇನ್ ಹುಡುಗರು ನಿನಗ್ಗೊತ್ತಿಲ್ಲ.

702
00:58:44,791 --> 00:58:48,165
ನಾನು ಇಲ್ಲೇ ಇದ್ದಿದ್ದರೆ, ನಿನಗೆ ಎಷ್ಟು ಜನ
ಅಕ್ಕ ಅಣ್ಣ ಇರುತ್ತಿದ್ದರೋ ದೇವರಿಗೇ ಗೊತ್ತು.

703
00:58:48,166 --> 00:58:49,708
ಅಮ್ಮ, ಸುಮ್ಮನಿರು.

704
00:58:50,916 --> 00:58:54,040
ಸ್ವಲ್ಪ ಸಮಯವಿದ್ದರೆ, ಡಾನ್ಸ್ ಕಂಪನಿಯ ಬಗ್ಗೆ
ನಿನ್ನ ಹತ್ತಿರ ಮಾತಾಡಬೇಕು.

705
00:58:54,041 --> 00:58:54,875
ಹೂಂ, ಹೂಂ, ಹೇಳು.

706
00:58:55,375 --> 00:58:57,082
ಕ್ಷಮಿಸು, ಇದು… ಇಲ್ಲ, ನನಗೆ ಇಷ್ಟವಿಲ್ಲ…

707
00:58:57,083 --> 00:58:59,082
- ಅದು.
- ಸರಿ, ಬದಲಾಯಿಸುತ್ತೇನೆ.

708
00:58:59,083 --> 00:59:01,041
ಇರು. ನಿನಗೆ ಗಾರ್ಸಿಯಾ ಅವರು ಗೊತ್ತಾ?

709
00:59:01,583 --> 00:59:03,500
ಹೌದು, ಅದು ನಾವು ಖರೀದಿಸುತ್ತಿರೋ ಕಂಪನಿ.

710
00:59:05,333 --> 00:59:06,874
ನಿನಗೆ ಬೇಕಾದಷ್ಟು ಭೂಮಿ ಇದೆಯಲ್ಲಾ?

711
00:59:06,875 --> 00:59:09,832
ಗಾರ್ಸಿಯಾ ಹತ್ತಿರ ದ್ವೀಪದಲ್ಲಿರೋ
ಅತ್ಯಮೂಲ್ಯ ಹಡಗುಕಟ್ಟೆಗಳಿವೆ.

712
00:59:09,833 --> 00:59:11,916
ಅವುಗಳನ್ನು ಖರೀದಿಸದ ಹೊರತು
ಹೋಟೆಲ್ ನಿರ್ಮಿಸಲು ಸಾಧ್ಯವಿಲ್ಲ.

713
00:59:17,416 --> 00:59:19,000
ನೀನು ಅವನನ್ನೇ ಪ್ರೀತಿಸುತ್ತಿರೋದಾ?

714
00:59:19,791 --> 00:59:20,916
ಗಾರ್ಸಿಯಾನನ್ನು?

715
00:59:24,458 --> 00:59:26,125
- ಲೀನಾ, ನನಗೆ ಸ್ವಲ್ಪ ಏಕಾಂತ ಬೇಕು.
- ಖಂಡಿತ.

716
00:59:27,291 --> 00:59:29,874
ನೀವು ನನ್ನ ಹಿಂದೆ ಬನ್ನಿ…

717
00:59:29,875 --> 00:59:31,915
- ಚಿನ್ನ, ನಾನು--
- ಇಲ್ಲ, ಅಮ್ಮ, ದಯವಿಟ್ಟು ಹೀಗೆ ಮಾಡಬೇಡ.

718
00:59:31,916 --> 00:59:34,832
- ನನಗೆ ಪರಿಸ್ಥಿತಿ ಗೊತ್ತು. ಬೇಡ.
- ಚಿನ್ನ, ಇದು ಒಳ್ಳೆಯದಕ್ಕೇ, ಆಯ್ತಾ?

719
00:59:34,833 --> 00:59:37,124
ಅವರ ವ್ಯವಹಾರ… ಮುಗಿದ ಕಥೆ.

720
00:59:37,125 --> 00:59:39,540
ಅವರು ಸಾಲಕ್ಕಾಗಿ ಕಾಯುತ್ತಿದ್ದಾರೆ.
ಅವರಿಗೆ ಹೆಚ್ಚಿನ ಸಮಯ ಬೇಕು.

721
00:59:39,541 --> 00:59:40,958
ಇನ್ನೊಂದು ಸಾಲವಾ?

722
00:59:42,333 --> 00:59:44,416
ಅದು ಅವರನ್ನು ಮತ್ತಷ್ಟು ಸಾಲಕ್ಕೆ ದೂಡುತ್ತೆ.

723
00:59:46,750 --> 00:59:48,665
ನಾನವರಿಗೆ
ಸ್ವಾತಂತ್ರ್ಯ ನೀಡುತ್ತಿದ್ದೇನೆ, ಆಯ್ತಾ?

724
00:59:48,666 --> 00:59:51,832
ವಿಫಲ ವ್ಯವಹಾರದೊಳಗೆ ಸಿಕ್ಕಿಹಾಕಿಕೊಳ್ಳೋದರಿಂದ
ಸ್ವಾತಂತ್ರ್ಯ ಸಿಗುತ್ತೆ ಅವರಿಗೆ.

725
00:59:51,833 --> 00:59:54,082
ಆದರೆ ಅವರು ಸಿಕ್ಕಿಬಿದ್ದಿಲ್ಲ.
ಅವರಿಗೆ ಇಲ್ಲಿ ತುಂಬಾ ಇಷ್ಟ.

726
00:59:54,083 --> 00:59:55,458
ಅವರು ಮಾಡೋದನ್ನು ಇಷ್ಟಪಡುತ್ತಾರೆ.

727
00:59:56,833 --> 00:59:57,750
ಅವರಿಗೆ ಇದು ಬರೀ…

728
00:59:58,708 --> 01:00:00,041
ಇದು ಹಣದ ಬಗ್ಗೆ ಅಲ್ಲ.

729
01:00:00,916 --> 01:00:04,124
ಅದಕ್ಕಿಂತಲೂ ಹೆಚ್ಚಿನದು,
ಇದು ಕುಟುಂಬ ಮತ್ತು ಅವರ ಊರಿನ ವಿಷಯ--

730
01:00:04,125 --> 01:00:06,750
ಇಲ್ಲ, ನನಗೆ ಗೊತ್ತು, ನನಗೆ ಗಾರ್ಸಿಯಾ ಗೊತ್ತು,

731
01:00:07,541 --> 01:00:09,375
ನನಗೆ ಅವರ ಬಗ್ಗೆ ಅನುಕಂಪ ಇದೆ.

732
01:00:10,125 --> 01:00:10,958
ಆಯ್ತಾ? ನನಗೆ ಗೊತ್ತು.

733
01:00:12,291 --> 01:00:15,749
ಆದರೆ ಅದರ ಮೌಲ್ಯಕ್ಕಿಂತ
ಎರಡು ಪಟ್ಟು ಹೆಚ್ಚು ನೀಡಿದ್ದೇನೆ.

734
01:00:15,750 --> 01:00:16,832
ನಾನು ಖಳನಾಯಕಿಯಲ್ಲ.

735
01:00:16,833 --> 01:00:19,332
ಮತೇಯೊ ಗಾರ್ಸಿಯಾ ಜೀವನದಲ್ಲಿ
ಇನ್ನೊಂದು ದಿನ ಕೆಲಸ ಮಾಡಬೇಕಾಗಿಲ್ಲ.

736
01:00:19,333 --> 01:00:20,833
- ಮಗನೂ ಕೆಲಸ ಮಾಡಬೇಕಿಲ್ಲ.
- ಅದು ಹಾಗಲ್ಲ.

737
01:00:21,416 --> 01:00:22,791
ಇದು ಅವರಿಗೆ ಸಂತೋಷ ಕೊಡುತ್ತೆ.

738
01:00:23,583 --> 01:00:24,958
ಅಮ್ಮ, ಇದು ಅವರಿಗೆ ಬದುಕಲು ಕಾರಣದಂತೆ.

739
01:00:29,250 --> 01:00:31,957
ಆದರ್ಶವಾದಿಯಾಗುವುದು ಸುಲಭ, ಆಯ್ತಾ?

740
01:00:31,958 --> 01:00:34,291
ಆದರೆ ವ್ಯವಹಾರ ಅಂದರೆ ವ್ಯವಹಾರವೇ,
ಅದು ವೈಯಕ್ತಿಕವಲ್ಲ.

741
01:00:36,416 --> 01:00:37,250
ದಯವಿಟ್ಟು.

742
01:00:40,166 --> 01:00:41,000
ದಯವಿಟ್ಟು.

743
01:00:43,416 --> 01:00:44,250
ನನಗಾಗಿ.

744
01:00:47,375 --> 01:00:50,541
ನೋಡು, ನಾನು ಏನು ಮಾಡಬಹುದೆಂದು ನೋಡುತ್ತೇನೆ,
ಆದರೆ ಭರವಸೆ ಕೊಡಲ್ಲ, ಆಯ್ತಾ?

745
01:01:03,791 --> 01:01:05,583
ನಾನು ನಿನ್ನ ಜೊತೆ ಏನೋ ಮಾತಾಡಬೇಕು.

746
01:01:14,000 --> 01:01:17,333
ನಾವು ಎಲ್ಲವನ್ನೂ ಮರೆತು ಒಂದು ದಿನ ಕಳೆಯೋಣವಾ?

747
01:01:18,750 --> 01:01:19,583
ದಯವಿಟ್ಟು?

748
01:01:21,958 --> 01:01:22,791
ಹೂಂ.

749
01:01:59,458 --> 01:02:02,499
ರೈ, ಚಿನ್ನ, ನೀನು ಇದ್ದೀಯಾ?

750
01:02:02,500 --> 01:02:03,666
ಹೇ.

751
01:02:04,166 --> 01:02:07,624
ನನಗೆ ಇಡೀ ದಿನ ಸಭೆಗಳಿವೆ,
ಆದರೆ ಹೊರಡುವ ಮೊದಲು ನಿನ್ನನ್ನು ನೋಡಲು ಬಂದೆ.

752
01:02:07,625 --> 01:02:08,958
ಮಾತ್ರೆ ಪುನಃ ಖರೀದಿಸಿದೆಯಾ?

753
01:02:09,500 --> 01:02:13,040
ನಾನು ನಿನಗೆ ಎರಡು ಉಡುಪು ತಂದಿದ್ದೇನೆ,
ಹಸಿರು ಮತ್ತು ಗುಲಾಬಿ,

754
01:02:13,041 --> 01:02:16,124
ನಿಧಿಸಂಗ್ರಹಣೆಗೆ
ಯಾವುದನ್ನು ಧರಿಸುತ್ತೀಯ ಅಂತ ಹೇಳು.

755
01:02:16,125 --> 01:02:18,125
ಗಾರ್ಸಿಯಾ ಆವರಿಗಾಗಿ ಏನಾದರೂ ಯೋಚನೆ ಮಾಡಿದೆಯಾ?

756
01:02:18,791 --> 01:02:21,541
ಇನ್ನೂ ಇಲ್ಲ,
ನಾನು ಅದರ ಮೇಲೆ ಕೆಲಸ ಮಾಡುತ್ತಿದ್ದೇನೆ, ಆಯ್ತಾ?

757
01:02:22,916 --> 01:02:24,457
- ಕ್ಷಮಿಸಿ, ನಮಗೆ ತಡವಾಗುತ್ತಿದೆ.
- ಬಂದೆ.

758
01:02:24,458 --> 01:02:25,457
ಕೇಳು.

759
01:02:25,458 --> 01:02:28,083
ನನಗೆ ಇವತ್ತು ಸಮಯ ಇಲ್ಲ,
ನಾಳೆ ಒಟ್ಟಿಗೆ ತಿಂಡಿ ತಿನ್ನೋಣವಾ?

760
01:02:30,208 --> 01:02:32,208
ಚೆನ್ನಾಗಿದ್ದೀಯಾ?
ಬಿಳಿಚಿಕೊಂಡಂತೆ ಕಾಣುತ್ತಿದ್ದೀಯ.

761
01:02:33,958 --> 01:02:35,125
ನಾನು ಚೆನ್ನಾಗಿದ್ದೇನೆ.

762
01:02:36,291 --> 01:02:37,666
ಸರಿ. ಐ ಲವ್ ಯು.

763
01:02:38,291 --> 01:02:39,166
ಮತ್ತೆ ಸಿಗೋಣ.

764
01:02:48,208 --> 01:02:51,166
ಹೂಲಿಯನ್
ಕತ್ತಲೆಗೆ ಹೆದರುತ್ತೀಯಾ?

765
01:02:55,000 --> 01:02:56,208
ನನ್ನನ್ನು ನಂಬುತ್ತೀಯಾ?

766
01:02:57,583 --> 01:02:58,416
ಹೌದು.

767
01:03:00,750 --> 01:03:01,958
ದೀಪ ಆರಿಸು.

768
01:03:05,833 --> 01:03:06,833
ಸರಿ.

769
01:03:16,041 --> 01:03:19,833
ಇದು ನನ್ನ ನೆಚ್ಚಿನ ಭಾವನೆ.

770
01:03:21,250 --> 01:03:23,708
ಸುತ್ತಮುತ್ತಲಿನ ವಾತಾವರಣದಲ್ಲಿ ಬೆರೆತು ಹೋಗೋದು.

771
01:03:25,583 --> 01:03:28,208
ದೀಪ ಉರಿಯುತ್ತಿರುವಾಗಿನ ಸಮಸ್ಯೆಗಳನ್ನು ಮರೆಯಲು
ಇದು ನನಗೆ ಸಹಾಯ ಮಾಡುತ್ತೆ.

772
01:03:31,916 --> 01:03:34,375
ಒರಾಯ, ನಿನ್ನ ಭಯವನ್ನು ಎದುರಿಸೋದು ಒಳ್ಳೆಯದು.

773
01:03:37,833 --> 01:03:39,333
ಇಲ್ಲದಿದ್ದರೆ ಹೇಗೆ ಮೆಟ್ಟಿ ನಿಲ್ಲೋದು?

774
01:04:00,166 --> 01:04:01,458
ನಾವು ಭೇಟಿಯಾಗಿದ್ದು ಇಲ್ಲೇ.

775
01:04:04,583 --> 01:04:05,583
ಇಲ್ಲೇ ಇರು.

776
01:04:21,291 --> 01:04:23,000
ನಿನಗೆ ಈಜಲು ಬರದಿದ್ದರೆ, ನಾನು ಸಹಾಯ ಮಾಡಬಲ್ಲೆ.

777
01:04:35,250 --> 01:04:36,500
ಕಲೆಗಾಗಿ ಒಂದು ರಾತ್ರಿ

778
01:04:54,833 --> 01:04:55,666
ಹೇ.

779
01:04:56,250 --> 01:04:58,041
ಯಾರ ಜೊತೆಯೋ ಮಲಗಿ ಬಂದಂತೆ ಕಾಣುತ್ತಿದ್ದೀಯ.

780
01:04:59,041 --> 01:05:00,915
ಹೇಳು, ಏನಾಯಿತು?

781
01:05:00,916 --> 01:05:03,624
ನಾನು ಹೇಳಲು ಬಹಳ ವಿಷಯವಿದೆ.

782
01:05:03,625 --> 01:05:06,250
ಆ ದ್ವೀಪದಲ್ಲಿ ಏನಾಗುತ್ತಿದೆ?
ನನಗೆ ಎಲ್ಲವನ್ನೂ ಹೇಳು.

783
01:05:07,041 --> 01:05:08,375
ಪ್ರೀತಿಸುತ್ತಿದ್ದೇನೆ ಅನಿಸುತ್ತಿದೆ.

784
01:05:10,791 --> 01:05:13,625
- ತುಂಬಾ ಆಳವಾದ ಪ್ರೀತಿ.
- ಆಳವಾದ…

785
01:05:14,208 --> 01:05:16,041
ನಿನಗೆ ಇತ್ತೀಚೆಗೆ ಏನಾಗಿದೆ?

786
01:05:16,666 --> 01:05:20,125
ಸರಿ, ಏನು ಮಾಡುತ್ತೀಯ?
ಕೆಲವು ದಿನಗಳಲ್ಲಿ ಮನೆಗೆ ಬರಲ್ಲವಾ?

787
01:05:21,541 --> 01:05:22,541
ಗೊತ್ತಿಲ್ಲ.

788
01:05:23,541 --> 01:05:25,874
ವಾವ್. ಹಾಗಾದರೆ, ಇದು ಗಂಭೀರ ವಿಷಯವಾ?

789
01:05:25,875 --> 01:05:27,458
ರೋಮಿಯೋ ಮತ್ತು ಜೂಲಿಯೆಟ್‌‌ನಷ್ಟು ಗಂಭೀರ.

790
01:05:27,916 --> 01:05:29,541
ಅವರಲ್ಲಿ ಒಬ್ಬರು ಸಾಯಲಿಲ್ಲವಾ?

791
01:05:30,125 --> 01:05:32,374
- ಹೇ, ನಾನು ಲೀನಾ.
- ನಾನು ಹೋಗಬೇಕು.

792
01:05:32,375 --> 01:05:34,541
- ಸರಿ, ಬೇಗ ಮಾತಾಡೋಣ. ನನಗೆ ಕರೆ ಮಾಡು.
- ಬನ್ನಿ?

793
01:05:36,750 --> 01:05:39,165
ಹಾಯ್, ರೈ. ನಿನ್ನ ಅಮ್ಮ ಇಂದು ಬೆಳಿಗ್ಗೆ ಬರಲ್ಲ.

794
01:05:39,166 --> 01:05:41,583
ರಾತ್ರಿ ಕಾರ್ಯಕ್ರಮವಿದೆಯಲ್ಲ, ತುಂಬಾ ಕೆಲಸವಿದೆ.

795
01:05:42,833 --> 01:05:44,958
ನೋಡು, ಇದು ನಾನು ಹೇಳಬೇಕಾದ್ದಲ್ಲ,

796
01:05:46,666 --> 01:05:47,500
ಆದರೆ…

797
01:05:48,416 --> 01:05:49,916
ಗಾರ್ಸಿಯಾ ಮಾರಾಟ ಮಾಡಲು ಒಪ್ಪಿದ್ದಾರೆ.

798
01:05:51,666 --> 01:05:53,458
ರೆಡ್‌ವಿನ್ ತಂಡ ಈಗ
ಒಪ್ಪಂದಕ್ಕೆ ಸಹಿ ಹಾಕುತ್ತಿದೆ.

799
01:05:54,958 --> 01:05:56,874
- ಏನು?
- ಕ್ಷಮಿಸು, ರೈ--

800
01:05:56,875 --> 01:05:57,708
ನಾನು ಹೋಗಬೇಕು.

801
01:06:19,541 --> 01:06:21,916
ಇಲ್ಲ. ಇಲ್ಲ.

802
01:06:32,583 --> 01:06:33,625
ಹೂಲಿಯನ್!

803
01:06:34,875 --> 01:06:36,083
ಹೂಲಿಯನ್, ಏನಾಯಿತು?

804
01:06:37,916 --> 01:06:38,750
ಇದನ್ನು ಯಾರು ಮಾಡಿದರು?

805
01:06:40,291 --> 01:06:42,791
ನಿನ್ನೆ ರಾತ್ರಿ ಕಾರ್ಲೋಸ್ ಮಾಡಿದ್ದು.

806
01:06:45,041 --> 01:06:45,916
ನನ್ನ ಅಪ್ಪನಿಗೆ…

807
01:06:49,125 --> 01:06:50,291
ಇನ್ನು ಸಹಿಸಲಾಗಲಿಲ್ಲ.

808
01:06:52,125 --> 01:06:53,333
ರೆಡ್‌ವಿನ್ ಜೊತೆ ಸಹಿ ಹಾಕಿದರು.

809
01:07:00,541 --> 01:07:01,541
ಇದೆಲ್ಲ ನನ್ನ ತಪ್ಪು.

810
01:07:05,125 --> 01:07:06,000
ಇಲ್ಲ.

811
01:07:08,666 --> 01:07:09,500
ಇಲ್ಲ, ಹಾಗಲ್ಲ.

812
01:07:14,666 --> 01:07:16,291
ಹೂಲಿಯನ್, ಅಮ್ಮ ರೆಡ್‌ವಿನ್‌ಗೆ ಕೆಲಸ ಮಾಡ್ತಾಳೆ.

813
01:07:22,833 --> 01:07:25,416
- ಕ್ಷಮಿಸು. ನನಗೆ ಈಗಷ್ಟೇ ಗೊತ್ತಾಯಿತು--
- ರೈ, ನೀನು ಹೊರಡಬೇಕು.

814
01:07:26,500 --> 01:07:27,583
- ಏನು? ಆದರೆ ನಾನು--
- ಹೋಗು!

815
01:07:28,875 --> 01:07:29,708
ಹೋಗು.

816
01:07:39,583 --> 01:07:40,416
ಅಮ್ಮ?

817
01:07:41,666 --> 01:07:42,625
ಅಮ್ಮ, ಏನಾಯಿತು?

818
01:07:43,375 --> 01:07:45,041
ನನಗೆ ಸ್ವಲ್ಪ ಸಮಯ ಕೊಡುತ್ತೀಯಾ? ಥ್ಯಾಂಕ್ಸ್.

819
01:07:45,541 --> 01:07:47,208
ಅವರಿಗೆ ಸಹಾಯ ಮಾಡುವುದಾಗಿ ಭರವಸೆ ಕೊಟ್ಟಿದ್ದೆ.

820
01:07:47,833 --> 01:07:51,166
ಚಿನ್ನ, ನಾನು ಸಹಾಯ ಮಾಡಿದೆ. ಅವರ ವ್ಯವಹಾರ
ಮುಳುಗುತ್ತಿತ್ತು, ನಾನವರಿಗೆ ಬೆಂಬಲವಾಗಿ ನಿಂತೆ.

821
01:07:52,000 --> 01:07:55,250
ಈಗ ಅವರ ಹತ್ತಿರ ಹಣ ಮತ್ತು ವಸ್ತುಗಳಿವೆ
ಮತ್ತು ನಿನ್ನಂತೆಯೇ ಹೆಮ್ಮೆ, ಮೂಲ ಎರಡೂ ಇಲ್ಲ.

822
01:07:56,125 --> 01:07:59,165
- ಅದರ ಅರ್ಥ ಏನು?
- ನೀನು ಎಲ್ಲವನ್ನೂ ಹಣದಿಂದ ಅಳೆಯುತ್ತೀಯ ಅಂತ.

823
01:07:59,166 --> 01:08:02,040
ಸೂಟು ಬೂಟು ಧರಿಸಿ
ಅಧಿಕಾರ ತೋರಿಸೋದನ್ನು ಪ್ರೀತಿಸುವವಳು ನೀನು.

824
01:08:02,041 --> 01:08:05,958
ನನ್ನನ್ನು ನಿನ್ನ ಊರಿಗೆ ಕರೆತಂದೆ, ಆದರೆ ನೀನು
ಇಲ್ಲಿಯವರೆಗೆ ಹೋಟೆಲ್ ಬಿಟ್ಟು ಆಚೆ ಹೋಗಿಲ್ಲ.

825
01:08:08,916 --> 01:08:10,333
ಇಷ್ಟು ದುಡಿದು ಪ್ರಯೋಜನವೇನು?

826
01:08:11,958 --> 01:08:12,791
ಪ್ರಯೋಜನವಾ?

827
01:08:13,750 --> 01:08:16,291
ನಾನು ಏಕೆ ಇಷ್ಟು ದುಡಿಯುತ್ತೇನಾ?
ನಿನಗಾಗಿ ದುಡಿಯುತ್ತೇನೆ.

828
01:08:17,541 --> 01:08:19,125
ನಿನಗೆ ಇದು ಏಕೆ ಕಾಣಿಸುತ್ತಿಲ್ಲ?

829
01:08:20,208 --> 01:08:22,250
ನಾನು ಸುಮ್ಮನೆ
ಬ್ಯುಸಿ ಇರುತ್ತೇನೆ ಅಂದುಕೊಂಡಿದ್ದೀಯಾ?

830
01:08:23,166 --> 01:08:25,041
ಖಂಡಿತ ನನಗೆ ನಿನ್ನ ಜೊತೆ ಸಮಯ ಕಳೆಯಬೇಕು.

831
01:08:25,750 --> 01:08:27,707
ಆದರೆ ನಾನು ಪ್ರತಿದಿನ ದೇವರಿಗೆ
ಧನ್ಯವಾದ ಹೇಳುತ್ತೇನೆ

832
01:08:27,708 --> 01:08:30,041
ನಾನು ಪರಿಣಿತಿ ಹೊಂದಿರೋದರಲ್ಲಿ
ನನಗೆ ಕೆಲಸ ಇದೆ ಅಂತ,

833
01:08:30,791 --> 01:08:34,958
ಏಕೆಂದರೆ ಇದರರ್ಥ ನಾನು ನಿನ್ನನ್ನು
ನೋಡಿಕೊಳ್ಳಬಲ್ಲೆ, ನಿನಗೆ ಬೇಕಾದ್ದು ಕೊಡಿಸಬಲ್ಲೆ.

834
01:08:38,833 --> 01:08:40,125
ನೀನೇ ನನ್ನ ಜೀವನದ ಉದ್ದೇಶ.

835
01:08:41,375 --> 01:08:42,375
ಆಯ್ತಾ? ಹಾಗಾಗಿ…

836
01:08:44,125 --> 01:08:46,958
ಗಾರ್ಸಿಯಾ ಅವರಿಗೆ ಬೇರೆ ರೀತಿಯಲ್ಲಿ
ಸಹಾಯ ಮಾಡಬಹುದಾಗಿದ್ದರೆ ಮಾಡುತ್ತಿದ್ದೆ.

837
01:08:49,208 --> 01:08:50,333
ನನ್ನನ್ನು ನಂಬು.

838
01:08:55,583 --> 01:08:57,916
ಈಗ ಇದನ್ನು ಮರೆತು,

839
01:09:00,041 --> 01:09:01,250
ಪಾರ್ಟಿಗೆ ಸಿದ್ಧರಾಗೋಣ.

840
01:09:02,666 --> 01:09:04,500
ಇದು ತುಂಬಾ ಮಹತ್ವದ ರಾತ್ರಿ.

841
01:09:05,250 --> 01:09:08,208
ನಾವು ಇಲ್ಲಿ ಕೆಲವೇ ದಿನ ಇರೋದು,
ನನಗೆ ನಿನ್ನ ಅವಶ್ಯಕತೆ ಇದೆ.

842
01:10:26,416 --> 01:10:27,415
ಕನ್ನಡಿಯ ಮುಂದೆ ನಿಂತು,

843
01:10:27,416 --> 01:10:31,166
ಗಂಭೀರವಾಗಿ ನಿನ್ನ ಅಂದ
ನೋಡಿಕೊಳ್ಳುತ್ತಿದ್ದೀಯ ಅಂತ ಗೊತ್ತು,

844
01:10:31,875 --> 01:10:32,833
ಆದರೆ ಕೇಳು,

845
01:10:33,625 --> 01:10:34,583
ಸೆಕ್ಸಿ ಕಾಣ್ತಿದ್ದೀಯ.

846
01:10:36,458 --> 01:10:38,625
ಇದರಲ್ಲಿ ನಿನ್ನ ತಪ್ಪೇನೂ ಇಲ್ಲ.

847
01:10:39,708 --> 01:10:41,666
ಈ ಪ್ರಪಂಚ ಇರೋದೇ ಹೀಗೆ.

848
01:10:43,125 --> 01:10:45,958
ನೀವಲ್ಲದಿದ್ದರೆ, ಬೇರೆ ಯಾರಾದರೂ
ಇದನ್ನು ಮಾಡುತ್ತಿದ್ದರು. ಆಗ ಬಹುಶಃ ಪರಿಸ್ಥಿತಿ

849
01:10:47,250 --> 01:10:48,208
ಇನ್ನೂ ಕೆಟ್ಟದಿರ್ತಿತ್ತು.

850
01:10:50,541 --> 01:10:51,791
ಹೂಲಿಯನ್ ವಾಪಸ್ ಬರುತ್ತಾನೆ.

851
01:10:53,083 --> 01:10:53,916
ನಿಜವಾಗಿಯೂ.

852
01:11:35,500 --> 01:11:36,458
ಅಯ್ಯೋ.

853
01:11:38,000 --> 01:11:39,083
ಹಾಳಾದ ರಾಸಾಯನಿಕಗಳು.

854
01:11:53,333 --> 01:11:54,208
ನಿನಗೆ ಏನು ಬೇಕು?

855
01:11:55,708 --> 01:11:56,541
ನಿನಗೆ ಗೊತ್ತಾ,

856
01:11:57,833 --> 01:12:00,500
ನಿನ್ನ ಬಾಯ್‌ಫ್ರೆಂಡ್, ನನ್ನ ಹಣ ತೀರಿಸಬೇಕು.

857
01:12:02,666 --> 01:12:04,874
ನೀನು ಅವನ ಸುಂದರ ಮುಖವನ್ನು
ತುಂಬಾ ಇಷ್ಟಪಡುತ್ತೀಯಲ್ಲಾ,

858
01:12:04,875 --> 01:12:07,541
ನಾನು ಅದನ್ನು ಹಾಳು ಮಾಡೋದು
ನಿನಗಿಷ್ಟವಿಲ್ಲ ಅಂದುಕೊಂಡೆ.

859
01:12:09,166 --> 01:12:11,875
- ನಿನಗೆ ನಿನ್ನ ಹಣ ಸಿಗುತ್ತೆ.
- ಸಮಾಧಾನ, ರಾಣಿ.

860
01:12:12,791 --> 01:12:15,208
ಎಲ್ಲವೂ ಹಣದ ಸುತ್ತ ಸುತ್ತಲ್ಲ.

861
01:12:15,791 --> 01:12:18,249
ಕೆಲವು ವಿಷಯಗಳು ಹಣಕ್ಕಿಂತ ಹೆಚ್ಚಾಗಿರುತ್ತವೆ,

862
01:12:18,250 --> 01:12:20,791
- ಹೆಣ್ಣು, ಮದ್ಯ ಇತ್ಯಾದಿ.
- ನನ್ನಿಂದ ದೂರ ಸರಿ.

863
01:12:24,625 --> 01:12:26,915
ಅವಳನ್ನು ಮತ್ತೊಮ್ಮೆ ಮುಟ್ಟಿದರೆ,
ನಿನ್ನನ್ನು ಕೊಲ್ಲುತ್ತೇನೆ.

864
01:12:26,916 --> 01:12:27,791
ಅರ್ಥವಾಯಿತಾ?

865
01:12:32,333 --> 01:12:33,541
ನಿನ್ನ ಹಣ ತಗೋ.

866
01:12:38,916 --> 01:12:41,416
ಛೇ. ಅವಳು ಸಿಕ್ಕಿದ್ದರೆ ಮಜಾ ಬರುತ್ತಿತ್ತು.

867
01:12:44,666 --> 01:12:46,249
ಇಲ್ಲಿಂದ ತೊಲಗು.

868
01:12:46,250 --> 01:12:48,790
ಇನ್ನು ಮುಂದೆ ನಮ್ಮ ಹತ್ತಿರ ಬರೋ ಧೈರ್ಯ ಮಾಡಬೇಡ.

869
01:12:48,791 --> 01:12:51,208
ಸರಿ. ಮತ್ತೆ ಭೇಟಿಯಾಗೋಣ.

870
01:12:55,625 --> 01:12:57,624
- ಚೆನ್ನಾಗಿದ್ದೀಯಾ?
- ಚೆನ್ನಾಗಿದ್ದೇನೆ.

871
01:12:57,625 --> 01:12:59,083
- ನಿಜ ಹೇಳುತ್ತಿದ್ದೀಯಾ?
- ಹೌದು.

872
01:13:00,375 --> 01:13:01,208
ನನಗೇನೂ ಆಗಿಲ್ಲ.

873
01:13:04,291 --> 01:13:05,333
ಕಪಾಳ ಮೋಕ್ಷ ಚೆನ್ನಾಗಿತ್ತು.

874
01:13:08,291 --> 01:13:09,708
ನಿನಗೆ ಕೋಪ ಬರಿಸಬಾರದು ಅಂತ ಗೊತ್ತಾಯ್ತು.

875
01:13:16,166 --> 01:13:18,750
ಅಮ್ಮನ ಬಗ್ಗೆ ನಿನಗೆ ಹೇಳದಿದ್ದಕ್ಕೆ
ನನ್ನನ್ನು ಕ್ಷಮಿಸು.

876
01:13:20,083 --> 01:13:22,208
- ನಾನು ಸರಿಪಡಿಸಬಹುದು ಅಂದುಕೊಂಡಿದ್ದೆ.
- ಪರವಾಗಿಲ್ಲ.

877
01:13:23,583 --> 01:13:24,583
ಅದು ನಿನ್ನ ತಪ್ಪಲ್ಲ.

878
01:13:41,958 --> 01:13:44,750
ನಿನ್ನ ಬಟ್ಟೆ ಹಾಳಾಗಿದೆ.

879
01:13:47,291 --> 01:13:50,000
ನಿನ್ನ ಪರಿಸರ ಸಂಬಂಧಿತ
ದೂರಿನ ಬಗ್ಗೆ ಹೇಳುತ್ತಿದ್ದೆ.

880
01:13:51,083 --> 01:13:53,582
ಹುಲ್ಲು ಮತ್ತು ರಾಸಾಯನಿಕದ ವಿಷಯ--

881
01:13:53,583 --> 01:13:54,625
ಅದ್ಭುತ.

882
01:14:03,625 --> 01:14:04,625
ನನಗೆ ಈಗಲೇ ನೀನು ಬೇಕು.

883
01:15:11,958 --> 01:15:12,791
ಚಿಯರ್ಸ್.

884
01:15:18,250 --> 01:15:22,291
ರೈ
ನನ್ನ ಸೂಟ್‌ನಲ್ಲಿದ್ದೇವೆ. ಬಾ ಇಲ್ಲಿಗೆ!

885
01:15:23,916 --> 01:15:24,999
ಹಾಂ.

886
01:15:25,000 --> 01:15:28,582
ಶ್ರೀಮಂತರು ಎಂತಹ ವಸ್ತುಗಳನ್ನು
ಬಿಟ್ಟು ಹೋಗುತ್ತಾರೆ ನೋಡು.

887
01:15:28,583 --> 01:15:30,416
ಲಾಸ್ಟ್ ಅಂಡ್ ಫೌಂಡ್ ಒಂದು ಖಜಾನೆ ಥರ.

888
01:15:31,458 --> 01:15:32,625
ಹೇಗೆ ಕಾಣುತ್ತಿದ್ದೇನೆ?

889
01:15:33,916 --> 01:15:34,750
ಸುಂದರವಾಗಿದ್ದೀಯ.

890
01:15:37,916 --> 01:15:39,500
ಆದ ಮೇಲೆ ಕೆಳಗೆ ಬನ್ನಿ.

891
01:15:55,916 --> 01:15:57,790
ಏನಾದರೂ ದಾರಿ ಇದೆಯಾ ಅಂತ ಯೋಚಿಸುತ್ತಿದ್ದೇನೆ.

892
01:15:57,791 --> 01:15:59,665
ಹೌದು, ಆದರೆ ತುಂಬಾ ತಡವಾಗಿದೆ ಅನಿಸುತ್ತೆ.

893
01:15:59,666 --> 01:16:00,500
ರೆಡಿಯಾ?

894
01:16:02,375 --> 01:16:03,291
ಮಾಡಿಯೇ ಬಿಡೋಣ.

895
01:16:04,500 --> 01:16:05,333
ಅಮ್ಮ?

896
01:16:06,958 --> 01:16:09,166
ಇವನು ಹೂಲಿಯನ್ ಗಾರ್ಸಿಯಾ.

897
01:16:10,083 --> 01:16:12,208
ಪೆರಾ ಅವರೇ, ನಿಮ್ಮನ್ನು ಭೇಟಿಯಾಗಿ ಸಂತೋಷವಾಯಿತು.

898
01:16:13,041 --> 01:16:14,458
ನಿನ್ನ ಬಗ್ಗೆ ಬಹಳಷ್ಟು ಕೇಳಿದ್ದೇನೆ.

899
01:16:16,500 --> 01:16:17,750
ನಿಮ್ಮಿಬ್ಬರಿಗೂ ಡ್ರಿಂಕ್ ತರ್ತೇನೆ.

900
01:16:24,875 --> 01:16:28,250
ನಾನು ಯಾರು ಅಂತ, ರೆಡ್‌ವಿನ್ ಜೊತೆಗಿನ ನನ್ನ
ಒಡನಾಟದ ಬಗ್ಗೆ ಅವನಿಗೆ ಹೇಳಿದೆಯಾ?

901
01:16:29,250 --> 01:16:30,125
ಹೌದು.

902
01:16:31,791 --> 01:16:33,416
ನಿನ್ನ ಫಿಟ್ಸ್ ಬಗ್ಗೆ?

903
01:16:46,583 --> 01:16:48,874
ಬ್ಯೂನಸ್ ನೋಶೆಸ್, ಶುಭ ಸಂಜೆ.

904
01:16:48,875 --> 01:16:51,790
ಇಲ್ಲಿಗೆ ಆಗಮಿಸಿದ ಎಲ್ಲರಿಗೂ ಧನ್ಯವಾದಗಳು.

905
01:16:51,791 --> 01:16:55,041
ಇಂದು ಮಯೋರ್ಕಾದ ರೋಮಾಂಚಕಾರಿ
ಹೊಸ ಅಧ್ಯಾಯವನ್ನು ಆಚರಿಸುತ್ತಿದ್ದೇವೆ.

906
01:16:55,708 --> 01:16:58,957
ಕಲಾ ಕೇಂದ್ರವನ್ನು ಪರಿಚಯಿಸಲು
ನಾವು ಉತ್ಸುಕರಾಗಿದ್ದೇವೆ.

907
01:16:58,958 --> 01:17:03,208
ಇದು ಈ ಸುಂದರ ದ್ವೀಪದ
ಸಂಸ್ಕೃತಿಯನ್ನು ಸಂರಕ್ಷಿಸುತ್ತದೆ.

908
01:17:03,791 --> 01:17:07,249
ನಿಮ್ಮಲ್ಲಿ ಕೆಲವರಿಗೆ ಗೊತ್ತು,
ನಾನು ಬೆಳೆದಿದ್ದು ಇಲ್ಲೇ,

909
01:17:07,250 --> 01:17:10,666
ಆದ್ದರಿಂದ ಇಲ್ಲಿಗೆ ಬಂದು ಒಳ್ಳೆಯ ಕೆಲಸ ಮಾಡಲು
ನನಗೆ ಅವಕಾಶ ಸಿಕ್ಕಿದ್ದು ಸಂತೋಷದ ಸಂಗತಿ,

910
01:17:11,333 --> 01:17:14,957
ಈ ಅದ್ಭುತ ಕಲಾ ಕೇಂದ್ರ ಮಾತ್ರವಲ್ಲದೆ,

911
01:17:14,958 --> 01:17:18,583
ಮಯೋರ್ಕಾಗೆ ವಿಶ್ವ ದರ್ಜೆಯ
ರೆಸಾರ್ಟ್ ತರುವ ಅವಕಾಶ ನನಗೆ ಸಿಕ್ಕಿದೆ.

912
01:17:19,083 --> 01:17:21,625
ಆದ್ದರಿಂದ, ಎಲ್ಲರೂ ಬನ್ನಿ,

913
01:17:22,958 --> 01:17:23,833
ಆಚರಿಸೋಣ…

914
01:17:27,750 --> 01:17:31,875
ಮಯೋರ್ಕಾ ಹೆಸರಿನಲ್ಲಿ ಪಾರ್ಟಿ ಮಾಡೋಣ.

915
01:17:32,458 --> 01:17:34,250
- ಮಯೋರ್ಕಾಗೆ!
- ಮಯೋರ್ಕಾ!

916
01:17:48,833 --> 01:17:49,708
ಮತೇಯೊ.

917
01:17:54,833 --> 01:17:56,083
ನಿನ್ನನ್ನು ನೋಡಿ ಸಂತೋಷವಾಯಿತು.

918
01:17:58,708 --> 01:18:00,208
ನಿನ್ನ ಮತ್ತೆ ನೋಡ್ತೇನೆ ಅಂದುಕೊಂಡಿರಲಿಲ್ಲ.

919
01:18:02,541 --> 01:18:03,500
ಬಹಳ ಸಮಯವಾಯಿತು.

920
01:18:05,250 --> 01:18:06,083
ಹೌದು.

921
01:18:10,208 --> 01:18:13,790
ಇದರಲ್ಲಿ ಏನೂ ವೈಯಕ್ತಿಕವಾಗಿರಲಿಲ್ಲ,
ತಪ್ಪು ತಿಳಿಯಬೇಡ.

922
01:18:13,791 --> 01:18:14,625
ಇಸೊಲ್ದೆ,

923
01:18:16,166 --> 01:18:17,916
ನಮ್ಮ ನಡುವಿನ ಎಲ್ಲವೂ ವೈಯಕ್ತಿಕವೇ.

924
01:18:21,958 --> 01:18:24,375
ಅಂದರೆ, ನನ್ನ ಉದ್ದೇಶ ವಿವರಿಸುತ್ತಿದ್ದೆ.

925
01:18:24,875 --> 01:18:27,333
ನೀನು ಏನನ್ನೂ ವಿವರಿಸುವ ಅಗತ್ಯವಿಲ್ಲ.
ನೀನು ಹೇಳಿದ್ದು ಸರಿ.

926
01:18:28,541 --> 01:18:31,375
ದ್ವೀಪ ಬದಲಾಗುತ್ತಿದೆ,
ನಾನೂ ಸಂಕಷ್ಟದ ಸ್ಥಿತಿಯಲ್ಲಿದ್ದೇನೆ.

927
01:18:31,958 --> 01:18:32,875
ನಾನು ಪ್ರಯತ್ನಿಸಿದೆ.

928
01:18:34,458 --> 01:18:36,541
ಸಾಧ್ಯವಾದಷ್ಟು ಕಾಲ
ನನ್ನ ವ್ಯವಹಾರ ಮುಂದುವರಿಸಿದೆ.

929
01:18:38,375 --> 01:18:39,208
ಆದರೆ ಕೊನೆಯಲ್ಲಿ…

930
01:18:43,916 --> 01:18:47,082
- ನಿನ್ನಲ್ಲಿ ನನ್ನದು ಒಂದೇ ವಿನಂತಿ.
- ಹೇಳು.

931
01:18:47,083 --> 01:18:49,916
ಹೋಟೆಲ್ ನಿರ್ಮಿಸುವಾಗ
ಮತ್ತು ಮುಂದಿನದನ್ನು ರೂಪಿಸುವಾಗ,

932
01:18:51,166 --> 01:18:52,958
ಮೊದಲು ಇಲ್ಲಿ ಏನಿತ್ತು ಅನ್ನೋದನ್ನು ಮರೆಯಬೇಡ.

933
01:18:55,083 --> 01:18:56,916
ಮೊದಲಿಲ್ಲಿದ್ದದ್ದನ್ನು
ಎಂದಿಗೂ ಮರೆಯಲು ಸಾಧ್ಯವಿಲ್ಲ.

934
01:18:59,166 --> 01:19:01,458
ಇದರಿಂದ ಒಂದು ಒಳ್ಳೆಯ ವಿಷಯ ನಡೆದಿದೆ.

935
01:19:03,833 --> 01:19:06,875
ಬಹುಶಃ ನಮಗೆ ಸಿಗದ ಭವಿಷ್ಯ ಅವರಿಗೆ ಸಿಗಬಹುದೇನೋ.

936
01:19:15,416 --> 01:19:16,250
ಹೋಗೋಣ.

937
01:19:17,333 --> 01:19:19,583
ಈ ಸೂಟ್ ತುಂಬಾ ಬಿಗಿಯಾಗಿದೆ.

938
01:19:22,791 --> 01:19:25,750
ನಿನ್ನ ಅಪ್ಪನ ಜೊತೆ ಇರು.
ನಂತರ ಹಡಗುಕಟ್ಟೆಯಲ್ಲಿ ಸಿಗುತ್ತೇನೆ.

939
01:19:28,000 --> 01:19:29,333
- ಆಮೇಲೆ ಸಿಗೋಣ.
- ಬೈ.

940
01:19:38,333 --> 01:19:41,708
ನೀನು ಇಲ್ಲಿ ಬೆಳೆದ ಬಗೆಗಿನ ಕಥೆಗಳು
ನನಗೆ ಬೇಸರ ತರಿಸುತ್ತೆ ಅಂದಿದ್ದೆ.

941
01:19:52,083 --> 01:19:53,375
ಮತೇಯೊ ಗಾರ್ಸಿಯಾ.

942
01:19:55,125 --> 01:19:56,208
ಅವನು ನನ್ನ ಮೊದಲ ಪ್ರೀತಿ.

943
01:19:57,208 --> 01:19:58,749
ನಾವು ಭೇಟಿಯಾಗಿದ್ದು ಮಕ್ಕಳಾಗಿದ್ದಾಗ,

944
01:19:58,750 --> 01:20:03,375
ಹದಿಹರೆಯದವರಾದಾಗ ಒಬ್ಬರಿಗೊಬ್ಬರು
ಅಂಟಿಕೊಂಡೇ ಇರುತ್ತಿದ್ದವು.

945
01:20:06,125 --> 01:20:10,375
ಅವನು ನಾನು ಉಸಿರಾಡುವ ಗಾಳಿ
ಮತ್ತು ನಾನು ಈಜುವ ನೀರಿನಂತಿದ್ದ.

946
01:20:12,208 --> 01:20:15,666
ನಾವು ಸದಾ ಭವಿಷ್ಯದ ಬಗ್ಗೆ ಮಾತಾಡುತ್ತಿದ್ದೆವು
ಮತ್ತು ಯೋಜನೆ ರೂಪಿಸುತ್ತಿದ್ದೆವು…

947
01:20:19,166 --> 01:20:20,666
ಆಮೇಲೆ ಎಲ್ಲವೂ ಬದಲಾಯಿತು.

948
01:20:22,625 --> 01:20:23,500
ಅಜ್ಜಿ ತೀರಿಕೊಂಡರು.

949
01:20:26,083 --> 01:20:29,125
ನಾನು ಅಂತಹ ನೋವನ್ನು ಎಂದಿಗೂ ಅನುಭವಿಸಿರಲಿಲ್ಲ.

950
01:20:32,333 --> 01:20:34,958
ದ್ವೀಪದ ಪ್ರತಿಯೊಂದು ಭಾಗವೂ
ನನಗೆ ಅವಳನ್ನು ನೆನಪಿಸುತ್ತಿತ್ತು.

951
01:20:38,750 --> 01:20:41,625
ನಾನು ಹೋಗಲೇ ಬೇಕಿತ್ತು. ಇಲ್ಲಿಂದ ದೂರ.
ಇಲ್ಲಿಂದ ಹೋಗಿ, ನಾನು…

952
01:20:43,041 --> 01:20:44,458
ಅವನನ್ನು ನನ್ನ ಜೊತೆ ಬರಲು ಕೇಳಿದೆ.

953
01:20:45,541 --> 01:20:46,375
ಅವನನ್ನು ಬೇಡಿಕೊಂಡೆ.

954
01:20:49,000 --> 01:20:52,250
ಅವನಿಗೆ ತನ್ನ ಕುಟುಂಬ
ಅಥವಾ ವ್ಯವಹಾರ ಬಿಟ್ಟು ಬರಲು ಇಷ್ಟವಿರಲಿಲ್ಲ.

955
01:20:54,791 --> 01:20:57,790
ನಾವು ವರ್ಷಗಳ ಕಾಲ ಪತ್ರ ಬರೆಯುತ್ತಿದ್ದೆವು,

956
01:20:57,791 --> 01:20:59,500
ಆಮೇಲೆ, ಒಂದು ದಿನ, ಪತ್ರಗಳು ನಿಂತುಹೋದವು.

957
01:21:06,958 --> 01:21:08,749
ಹಾಗಾಗಿ, ನಾವು ಈ ಹೋಟೆಲ್ ನಿರ್ಮಿಸುತ್ತಿದ್ದೆವು

958
01:21:08,750 --> 01:21:11,040
ಮತ್ತು ಭೂಮಿಯನ್ನು ಖರೀದಿಸುತ್ತಿದ್ದೆವು
ಎಂದು ನನಗೆ ತಿಳಿದಾಗ,

959
01:21:11,041 --> 01:21:12,708
ಅವನಿಗೆ ಸಹಾಯ ಮಾಡಲು ನನಗೆ ಖುಷಿಯಾಯಿತು.

960
01:21:15,916 --> 01:21:17,166
ನೀನಿದನ್ನು ಮೊದಲೇ ಹೇಳಬೇಕಿತ್ತು.

961
01:21:18,500 --> 01:21:19,333
ಹೌದು.

962
01:21:20,458 --> 01:21:24,290
ಆದರೆ ನಾನೀಗ ಒಂದು ಕುಟುಂಬದ ಕನಸುಗಳನ್ನು
ಛಿದ್ರ ಮಾಡಿದವಳಾಗಿದ್ದೇನೆ.

963
01:21:24,291 --> 01:21:25,875
ಇಲ್ಲ. ಇಲ್ಲ.

964
01:21:31,125 --> 01:21:32,541
ನೀನು ನಿನ್ನ ಕೈಲಾದಷ್ಟು ಮಾಡಿದೆ, ಅಮ್ಮ.

965
01:21:34,208 --> 01:21:35,041
ಅವರಿಗೆ ಅದು ಗೊತ್ತು.

966
01:21:49,125 --> 01:21:50,291
ಇವತ್ತು ರಾತ್ರಿ ಜಾಗರಣೆ ಮಾಡೋಣವಾ?

967
01:21:54,083 --> 01:21:55,500
ನಾನು ಸೂರ್ಯೋದಯವನ್ನು ನೋಡೇ ಇಲ್ಲ.

968
01:21:57,083 --> 01:21:58,208
ಸೂರ್ಯೋದಯ ನೋಡಿಲ್ಲ ಅಂದರೆ?

969
01:21:59,500 --> 01:22:00,333
ನೀರಿನಿಂದಲಾ?

970
01:22:01,916 --> 01:22:02,750
ಎಲ್ಲಿಂದಲೂ ನೋಡಿಲ್ಲ.

971
01:22:05,500 --> 01:22:06,333
ಹೂಂ,

972
01:22:08,583 --> 01:22:11,041
ಸೂರ್ಯೋದಯ ನೋಡಲು
ಒಳ್ಳೆ ಜಾಗಕ್ಕೆ ಕರೆದುಕೊಂಡು ಹೋಗುತ್ತೇನೆ.

973
01:22:43,750 --> 01:22:44,583
ನೋಡು.

974
01:22:56,500 --> 01:22:58,833
ನಿನ್ನ ಮೊದಲ ಸೂರ್ಯೋದಯವನ್ನು
ನನ್ನ ಜೊತೆ ನೋಡಿದ್ದಕ್ಕೆ ಥ್ಯಾಂಕ್ಸ್.

975
01:23:02,041 --> 01:23:04,708
ನನ್ನ ಎಲ್ಲಾ ಮೊದಲುಗಳು ಮತ್ತು ಕೊನೆಗಳು ನಿನ್ನದೇ.

976
01:23:38,208 --> 01:23:39,458
ಅಮ್ಮ, ಎಲ್ಲವೂ ಚೆನ್ನಾಗಿದೆಯಾ?

977
01:23:41,041 --> 01:23:42,791
ಮಾತ್ರೆ ತೆಗೆದುಕೊಳ್ಳೋದು ಯಾವಾಗ ನಿಲ್ಲಿಸಿದೆ?

978
01:23:50,708 --> 01:23:52,458
ನಾವು ಬಂದ ಕೆಲವು ದಿನಗಳ ನಂತರ.

979
01:23:56,708 --> 01:23:57,958
ನನ್ನನ್ನು ಮರಗಟ್ಟಿಸುತ್ತಿತ್ತು.

980
01:23:58,541 --> 01:24:01,040
ಅಮ್ಮ, ನನಗೆ ಒಂದೇ ಒಂದು
ಭಾವನಾತ್ಮಕ ಬೇಸಿಗೆ ಬೇಕಿತ್ತು.

981
01:24:01,041 --> 01:24:03,540
ನಾನು ಎಂತಹ ಮೂರ್ಖಳು.
ನಿನ್ನನ್ನು ಒಂಟಿಯಾಗಿ ಬಿಡಬಾರದಿತ್ತು.

982
01:24:03,541 --> 01:24:05,499
- ನಿಲ್ಲಿಸು!
- ನೀನು ಮಾತ್ರೆ ತೆಗೆದುಕೊಳ್ಳುತ್ತಿದ್ದೀಯೋ

983
01:24:05,500 --> 01:24:08,540
- ಇಲ್ಲವೋ ಎಂದು ಗಮನಿಸಬೇಕಿತ್ತು!
- ಇಲ್ಲ, ಇದು ನನ್ನ ನಿರ್ಧಾರ.

984
01:24:08,541 --> 01:24:10,707
ನಿನ್ನ ಪರಿಸ್ಥಿತಿ ಹಾಳು ಮಾಡಿಕೊಂಡಿದ್ದೀಯ.

985
01:24:10,708 --> 01:24:13,499
ನನಗೆ ಚಿಂತೆ ಇಲ್ಲ. ನನಗೆ ಚಿಂತೆ ಇಲ್ಲ.

986
01:24:13,500 --> 01:24:14,666
- ನನಗೆ ಚಿಂತೆ ಇದೆ.
- ನನಗೆ ಇಲ್ಲ.

987
01:24:15,666 --> 01:24:17,582
- ಸರಿ.
- ಏನು ಮಾಡುತ್ತಿದ್ದೀಯ?

988
01:24:17,583 --> 01:24:19,665
- ನಾವು ವಾಪಸ್ ಹೋಗುತ್ತಿದ್ದೇವೆ.
- ಇಲ್ಲ. ನಾವು ಹೋಗಲ್ಲ.

989
01:24:19,666 --> 01:24:20,915
- ನಾವು ಹೋಗುತ್ತಿದ್ದೇವೆ.
- ಬೇಡ.

990
01:24:20,916 --> 01:24:23,832
ದಯವಿಟ್ಟು ಬೇಡ.
ಅಮ್ಮ, ನಾನು ಮೊದಲ ಬಾರಿಗೆ ಸೂರ್ಯೋದಯ ನೋಡಿದೆ.

991
01:24:23,833 --> 01:24:24,957
ಹೌದಾ? ಅದ್ಭುತ.

992
01:24:24,958 --> 01:24:27,332
ನನ್ನ ಭಾವನೆಗಳು ಗರಿಗೆದರುತ್ತಿವೆ,
ಹೂಲಿಯನ್ ನನ್ನನ್ನು ಮುಟ್ಟಿದ್ದು,

993
01:24:27,333 --> 01:24:29,791
ಚರ್ಮದ ಮೇಲೆ ಸಮುದ್ರ ಸ್ಪರ್ಶಿಸಿದ ಅನುಭವ.

994
01:24:31,416 --> 01:24:33,666
ಕನಿಷ್ಠ ಪಕ್ಷ ನೆನಪಿನಲ್ಲಿಟ್ಟುಕೊಳ್ಳಲು
ಏನೋ ಒಂದಿದೆ.

995
01:24:36,666 --> 01:24:37,958
ನನಗೆ ಇಲ್ಲೇ ಇರಲು ಇಷ್ಟ.

996
01:24:40,458 --> 01:24:41,500
ನನಗೆ ಬದುಕಬೇಕು.

997
01:24:43,791 --> 01:24:44,750
ನಿನಗೆ ಇಲ್ಲಿ ಇರಬೇಕಾ?

998
01:24:45,958 --> 01:24:47,750
ನಿನಗೆ ಬದುಕಬೇಕಾ? ಈಗ ನಿನಗೆ ಬದುಕಬೇಕಾ?

999
01:24:48,250 --> 01:24:50,583
ರೈ, ಎಷ್ಟು ಕಾಲ? ಎಷ್ಟು ಕಾಲ ಬದುಕಬೇಕು ನಿನಗೆ?

1000
01:24:52,500 --> 01:24:55,250
ನಾವು ಹೊರಡುತ್ತಿದ್ದೇವೆ.
ಲೀನಾಗೆ ವಿಮಾನ ಬುಕ್ ಮಾಡಲು ಹೇಳಿದೆ.

1001
01:24:56,875 --> 01:24:57,874
ಇಲ್ಲ.

1002
01:24:57,875 --> 01:25:00,000
- ಸಾಮಾನು ಪ್ಯಾಕ್ ಮಾಡು, ರೈ. ಹೋಗೋಣ.
- ಇಲ್ಲ, ಅಮ್ಮ!

1003
01:25:01,708 --> 01:25:03,666
- ಇಲ್ಲ.
- ರೈ!

1004
01:25:07,458 --> 01:25:10,125
ರೈ!

1005
01:25:11,666 --> 01:25:13,458
ರೈ, ಎಲ್ಲಿಗೆ ಹೋಗುತ್ತಿದ್ದೀಯ?

1006
01:25:16,500 --> 01:25:17,333
ರೈ!

1007
01:25:18,083 --> 01:25:18,916
ರೈ!

1008
01:25:33,041 --> 01:25:34,083
ರೈ!

1009
01:26:01,958 --> 01:26:03,040
ಸರಿಯಿರಿ, ಸರಿಯಿರಿ!

1010
01:26:03,041 --> 01:26:03,875
ರೈ!

1011
01:26:05,375 --> 01:26:07,833
ಹೇ, ಹೇ. ಪರವಾಗಿಲ್ಲ. ನೀನು ಚೆನ್ನಾಗಿದ್ದೀಯ.

1012
01:26:08,333 --> 01:26:11,082
ನೀನು ಚೆನ್ನಾಗಿದ್ದೀಯ. ನಾನು ಇಲ್ಲೇ ಇದ್ದೇನೆ.
ನಾನು ಇಲ್ಲೇ ಇದ್ದೇನೆ.

1013
01:26:11,083 --> 01:26:12,500
ಎಲ್ಲವೂ ಸರಿ ಹೋಗುತ್ತೆ.

1014
01:26:15,458 --> 01:26:17,250
ಎಲ್ಲವೂ ಸರಿ ಹೋಗುತ್ತೆ.

1015
01:26:18,875 --> 01:26:20,915
ಹಾಸ್ಪಿಟಲ್ ಎಸ್‌ಜೆಡಿ ಸ್ಯಾಂಟ್ ಜೋಆನ್ ಡೆ ಡೇಯು

1016
01:26:20,916 --> 01:26:22,874
- ಹಾಯ್.
- ಹೇ.

1017
01:26:22,875 --> 01:26:25,582
ಸರಿಯಾದ ಸಮಯಕ್ಕೆ ಬಂದೆ.
ನಾನು ಕಾಫಿ ಕುಡಿದು ಬರುತ್ತೇನೆ.

1018
01:26:25,583 --> 01:26:27,458
- ಸರಿ.
- ಈಗಲೇ ಹಿಂತಿರುಗುತ್ತೇನೆ.

1019
01:26:32,583 --> 01:26:33,833
ಹೇಗಿದ್ದೀಯ?

1020
01:26:34,458 --> 01:26:37,125
ನಾನು ತುಂಬಾ ಚಿಂತಿತಳಾಗಿದ್ದೆ.

1021
01:26:37,666 --> 01:26:40,625
ನಾನು ಮೊದಲೇ ಬರುತ್ತಿದ್ದೆ, ಆದರೆ
ನನ್ನ ಬಾಸ್ ನನ್ನಿಂದ ನಿಜವಾದ ಕೆಲಸ ಮಾಡಿಸಿದ.

1022
01:26:41,958 --> 01:26:44,125
ನೀನು ಇದನ್ನು ರಹಸ್ಯವಾಗಿ ಇಟ್ಟಿದ್ದೆ.

1023
01:26:46,125 --> 01:26:48,250
ಫಿಟ್ಸ್ ಮತ್ತು ಗೆಡ್ಡೆಗಳು.

1024
01:26:48,833 --> 01:26:53,166
ಕ್ಯಾನ್ಸರ್ ಥರ ಅನಿಸುತ್ತೆ.
ಆದರೆ ಕ್ಯಾನ್ಸರ್ ಗೆಡ್ಡೆಯಲ್ಲ.

1025
01:26:55,333 --> 01:26:56,500
ರಹಸ್ಯವಾಗಿಟ್ಟಿದ್ದಕ್ಕೆ ಕ್ಷಮಿಸು.

1026
01:26:57,500 --> 01:26:58,333
ನನಗೆ ಅರ್ಥವಾಗುತ್ತೆ.

1027
01:26:59,208 --> 01:27:02,875
ನಿನಗೆ ಮೋಜು ಮಾಡಬೇಕಿತ್ತು,
ಅದಕ್ಕಾಗಿಯೇ ನನ್ನತ್ತ ಆಕರ್ಷಿತಳಾದೆ.

1028
01:27:06,875 --> 01:27:08,833
ಹೌದು, ಪ್ರಿಶಾ ಎಲ್ಲಿ? ಇಲ್ಲಿದ್ದಾಳಾ?

1029
01:27:09,625 --> 01:27:10,458
ಇಲ್ಲ.

1030
01:27:11,500 --> 01:27:13,916
ಒಳ್ಳೆಯದ್ದೆಲ್ಲಾ ಕೊನೆಯಾಗಲೇಬೇಕು.

1031
01:27:14,416 --> 01:27:15,624
ಅವಳು ಮನೆಗೆ ಹೋದಳು.

1032
01:27:15,625 --> 01:27:17,791
ಆದರೆ ನಾನು ಅದನ್ನು ಮತ್ತೆ ಮಾಡುತ್ತೇನಾ?

1033
01:27:21,250 --> 01:27:22,250
ಖಂಡಿತ, ಚಿನ್ನ.

1034
01:27:41,750 --> 01:27:46,583
ಹೂಲಿಯನ್
ನನಗೆ ಮಾತಾಡಬೇಕು. ಭೇಟಿಯಾಗುವೆಯಾ?

1035
01:28:04,083 --> 01:28:05,000
ಏನಾಯಿತು?

1036
01:28:14,791 --> 01:28:15,791
ನೋವಾಗಿದೆಯಾ?

1037
01:28:18,166 --> 01:28:19,750
ನನಗೆ ಟ್ಯೂಬರಸ್ ಸ್ಕ್ಲೆರೋಸಿಸ್ ಇದೆ.

1038
01:28:22,291 --> 01:28:23,375
ಅದರಿಂದ ಫಿಟ್ಸ್ ಬರುತ್ತೆ.

1039
01:28:24,833 --> 01:28:25,791
ಹುಟ್ಟುವಾಗಲೇ ಇತ್ತು.

1040
01:28:32,125 --> 01:28:34,333
ನಾವು ಏನು ಮಾಡಬಹುದು? ಅದಕ್ಕೆ ಚಿಕಿತ್ಸೆ ಇದೆಯಾ?

1041
01:28:35,333 --> 01:28:36,208
ಹೌದು ಮತ್ತು ಇಲ್ಲ.

1042
01:28:37,083 --> 01:28:39,541
ಔಷಧಿ ಸಹಾಯ ಮಾಡುತ್ತೆ,
ಆದರೆ ಅದು ಸ್ಥಿರವಾಗಿರಲ್ಲ.

1043
01:28:41,750 --> 01:28:44,290
ನಾನು ಇಲ್ಲಿಗೆ ಬಂದ ಮೇಲೆ,
ಮಾತ್ರೆ ತೆಗೆದುಕೊಳ್ಳೋದನ್ನು ನಿಲ್ಲಿಸಿದೆ.

1044
01:28:44,291 --> 01:28:45,416
ಏಕೆ?

1045
01:28:46,666 --> 01:28:48,583
ಏಕೆಂದರೆ ಅದು ನನ್ನನ್ನು ಮರಗಟ್ಟಿಸುತ್ತಿತ್ತು.

1046
01:28:50,625 --> 01:28:52,791
ಹೂಲಿಯನ್, ನನಗೆ ಮರಗಟ್ಟಿ ಬದುಕಲು ಇಷ್ಟವಿಲ್ಲ.

1047
01:29:00,833 --> 01:29:04,083
- ಶಸ್ತ್ರಚಿಕಿತ್ಸೆ ಮಾಡಿಸಬಹುದಾ?
- ಹೌದು, ಆದರೆ ತುಂಬಾ ಅಪಾಯವಿದೆ.

1048
01:29:05,458 --> 01:29:06,708
ನನ್ನ ಸ್ಮರಣಶಕ್ತಿ ಹೋಗಬಹುದು.

1049
01:29:14,416 --> 01:29:15,333
ಹಾಗಾಗಿ…

1050
01:29:16,333 --> 01:29:17,666
ಜೀವ ಹೋಗೋದಕ್ಕಿಂತ ಕೆಟ್ಟದ್ದಲ್ವಲ್ಲಾ?

1051
01:29:18,875 --> 01:29:19,750
ಆರೋಗ್ಯವಾಗಿರುತ್ತೀಯ.

1052
01:29:21,333 --> 01:29:23,125
ನನಗೆ ಗೊತ್ತಿರೋದೆಲ್ಲವೂ ಹೋಗಿಬಿಡುತ್ತೆ.

1053
01:29:30,291 --> 01:29:32,125
ನನಗೆ ಇದನ್ನು ಯಾಕೆ ಹೇಳಲಿಲ್ಲ?

1054
01:29:35,583 --> 01:29:37,541
ಯಾಕೆಂದರೆ ನನಗೆ ಸ್ಪಷ್ಟತೆ ಬೇಕಿತ್ತು.

1055
01:29:39,708 --> 01:29:40,750
ನನಗಾಗಿ. ಯಾಕೆ ಬದುಕ್ತಿದ್ದೇನೆ

1056
01:29:43,166 --> 01:29:44,625
ಅಂತ ತಿಳಿದುಕೊಳ್ಳಬೇಕಿತ್ತು.

1057
01:29:47,583 --> 01:29:48,916
ಅದು ಈ ಸ್ಥಳ.

1058
01:29:52,416 --> 01:29:53,250
ಅದು…

1059
01:29:55,375 --> 01:29:58,250
ಅಮ್ಮ ಇಷ್ಟಪಡೋದನ್ನು ಮಾಡೋದನ್ನು ನೋಡೋದು.

1060
01:30:00,166 --> 01:30:03,250
ಅಮಾರ ಹೊಸ ಮೇಕಪ್ ಟ್ರೆಂಡ್ ಅನ್ನು
ಪ್ರಯತ್ನಿಸೋದನ್ನು ನೋಡೋದು.

1061
01:30:05,916 --> 01:30:07,875
ನಿನ್ನ ಜೊತೆ ಕತ್ತಲೆಯ ಗುಹೆಯಲ್ಲಿ ಕಾಲ ಕಳೆಯೋದು.

1062
01:30:10,166 --> 01:30:12,666
ಏಕೆಂದರೆ ನೀನು ಕತ್ತಲೆಯನ್ನು
ಶಾಂತವಾಗಿ ಕಾಣುವಂತೆ ಮಾಡುತ್ತೀಯ.

1063
01:30:16,125 --> 01:30:17,750
ಆ ನೆನಪುಗಳನ್ನು ಕಳೆದುಕೊಳ್ಳೋದು…

1064
01:30:20,375 --> 01:30:22,291
ಅಥವಾ ಹೊಸ ನೆನಪುಗಳ ಸಾಮರ್ಥ್ಯ ಕಳೆದುಕೊಳ್ಳೋದು…

1065
01:30:27,208 --> 01:30:28,541
ಅದು ಸಾವಿಗಿಂತ ಕೆಟ್ಟದು.

1066
01:30:42,583 --> 01:30:43,791
ಐ ಲವ್ ಯು, ಒರಾಯ.

1067
01:30:50,708 --> 01:30:51,708
ಐ ಲವ್ ಯು, ಹೂಲಿಯನ್.

1068
01:31:19,583 --> 01:31:20,458
ರೈ?

1069
01:31:35,750 --> 01:31:36,583
ರೈ.

1070
01:31:40,000 --> 01:31:40,833
ರೈ.

1071
01:31:44,958 --> 01:31:45,791
ರೈ.

1072
01:31:50,708 --> 01:31:51,625
ರೈ.

1073
01:31:53,375 --> 01:31:54,208
ರೈ!

1074
01:31:54,708 --> 01:31:56,833
ಒರಾಯ! ರೈ!

1075
01:31:57,333 --> 01:31:58,166
ಛೇ.

1076
01:32:06,791 --> 01:32:08,333
ರೈ. ರೈ.

1077
01:32:09,208 --> 01:32:10,041
ರೈ, ದಯವಿಟ್ಟು.

1078
01:32:16,666 --> 01:32:17,707
ನಾಡಿದರ ಕಡಿಮೆ ಇದೆ.

1079
01:32:17,708 --> 01:32:20,791
- ಇವಳ ಉಸಿರಾಟ ನಿಂತಿತು.
- ನಿನಗೆ ಏನೂ ಆಗಲ್ಲ, ಆಯ್ತಾ?

1080
01:32:21,375 --> 01:32:22,790
ನಾನು ಇಲ್ಲೇ ಇರುತ್ತೇನೆ, ಆಯ್ತಾ?

1081
01:32:22,791 --> 01:32:24,541
ಜೀವಂತವಾಗಿದ್ದಾಳೆ,
ಆದರೆ ಪರಿಸ್ಥಿತಿ ಗಂಭೀರವಾಗಿದೆ.

1082
01:32:25,333 --> 01:32:27,250
ಸ್ಕ್ಯಾನಿಂಗ್‌ನಲ್ಲಿ
ಸ್ಥಿತಿ ಹದಗೆಟ್ಟಿದೆ ಅಂತ ಇದೆ.

1083
01:32:27,958 --> 01:32:31,125
ಇದು ನಿಮ್ಮ ನಿರ್ಧಾರ,
ಆದರೆ ಶಸ್ತ್ರಚಿಕಿತ್ಸೆ ಮಾಡಿಸಿದರೆ ಒಳ್ಳೆಯದು.

1084
01:32:34,875 --> 01:32:38,165
- ಯೋಚಿಸಲು ಏನಿದೆ?
- ರೈಗೆ ಶಸ್ತ್ರಚಿಕಿತ್ಸೆ ಇಷ್ಟವಿರಲಿಲ್ಲ.

1085
01:32:38,166 --> 01:32:41,250
ವರ್ಷಗಳಿಂದ ಅವಳನ್ನು ಒಪ್ಪಿಸಲು ಪ್ರಯತ್ನಿಸಿದೆ,
ಆದರೆ ಅವಳು ಒಪ್ಪಲೇ ಇಲ್ಲ.

1086
01:32:41,791 --> 01:32:44,666
ನಾವು ಅವಳನ್ನು ಸ್ಥಿರಗೊಳಿಸಬಹುದು,
ಆರಾಮವಾಗಿ ಇಡಬಹುದು,

1087
01:32:45,708 --> 01:32:48,540
ಆದರೆ ಶಸ್ತ್ರಚಿಕಿತ್ಸೆ ಇಲ್ಲದೆ,
ಅವಳ ಸ್ಥಿತಿ ಹದಗೆಡುತ್ತೆ,

1088
01:32:48,541 --> 01:32:50,166
ಯಾವಾಗ ಏನಾಗುತ್ತೋ ಹೇಳಕ್ಕಾಗಲ್ಲ.

1089
01:32:51,625 --> 01:32:52,625
ಇಸೊಲ್ದೆ.

1090
01:32:55,000 --> 01:32:56,750
ನನಗೆ ಅಪಾಯ ಅರ್ಥವಾಗುತ್ತೆ,

1091
01:32:57,916 --> 01:33:00,041
ಒರಾಯ ತನ್ನ ಇಚ್ಛೆಯ ಬಗ್ಗೆ
ನನ್ನ ಜೊತೆ ಮಾತಾಡಿದ್ದಳು.

1092
01:33:02,125 --> 01:33:05,874
ಆದರೆ ನಾವು ಅವಳನ್ನು ಉಳಿಸಲು ಅವಕಾಶವಿದ್ದರೆ,

1093
01:33:05,875 --> 01:33:08,000
ಅವಳು ಸಾಮಾನ್ಯ ಜೀವನ ನಡೆಸುವ ಅವಕಾಶವಿದ್ದರೆ,

1094
01:33:10,291 --> 01:33:12,875
ಹಾಗೇ ಮಾಡಿ ಅಂತ ಬೇಡಿಕೊಳ್ಳುತ್ತೇನೆ.

1095
01:33:14,958 --> 01:33:18,791
ತನ್ನ ಜೀವನದ ಅತ್ಯುತ್ತಮ ಕ್ಷಣಗಳನ್ನು
ಮರೆಯುವ ಬಗ್ಗೆ ಚಿಂತಿತಳಾಗಿದ್ದಳು.

1096
01:33:20,083 --> 01:33:21,333
ಆದರೆ ಇದು ಕೆಲಸ ಮಾಡಿದರೆ,

1097
01:33:22,458 --> 01:33:25,041
ಅವಳ ನೆಚ್ಚಿನ ನೆನಪುಗಳು
ಅವಳ ಭವಿಷ್ಯದಲ್ಲಿರುತ್ತೆ.

1098
01:34:15,625 --> 01:34:17,500
ಅಮ್ಮನಿಗಿದ್ದ ಅದೇ ಸ್ಥಿತಿ ಇವಳಿಗೂ ಇದೆ.

1099
01:34:18,750 --> 01:34:19,791
ಸಮಾಧಾನ ಮಾಡಿಕೋ, ಇಜ಼ಿ.

1100
01:34:24,875 --> 01:34:25,708
ಇವಳಿಗೆ ಗೊತ್ತಾ?

1101
01:34:28,416 --> 01:34:32,165
ಅವಳಿಗೆ ಈ ಭಯಾನಕ ಫಿಟ್ಸ್
ನಾನು ಕೊಟ್ಟಿದ್ದು ಅಂತಾನಾ?

1102
01:34:32,166 --> 01:34:33,208
ಇಲ್ಲ, ಅವಳಿಗೆ ಗೊತ್ತಿಲ್ಲ.

1103
01:34:34,791 --> 01:34:35,958
ಅವಳು ನಿನ್ನನ್ನು ದೂಷಿಸಲ್ಲ.

1104
01:34:38,791 --> 01:34:40,583
ನಾನು ಮಗು ಮಾಡಿಕೊಳ್ಳಲು ಎಂದಿಗೂ ಯೋಜಿಸಿರಲಿಲ್ಲ.

1105
01:34:42,666 --> 01:34:43,875
ಅದು ನನ್ನ ಪಟ್ಟಿಯಲ್ಲೇ ಇರಲಿಲ್ಲ.

1106
01:34:44,875 --> 01:34:45,708
ಇರಲಿಲ್ಲ.

1107
01:34:46,500 --> 01:34:50,750
ನನಗೆ ನೆನಪಿದ್ದರೆ, ನಿನಗೆ ಒಂದು ಮಹಲು,
ಮೂರು ಕಾರುಗಳು ಮತ್ತು ಒಂದು ಕುದುರೆ ಬೇಕಿತ್ತು.

1108
01:34:52,916 --> 01:34:53,833
ಕುದುರೆ ಸಿಗಲೇ ಇಲ್ಲ.

1109
01:34:55,500 --> 01:34:59,916
ನಾನು ಗರ್ಭಿಣಿ ಅಂತ ಗೊತ್ತಾದಾಗ,
ನನ್ನ ಜೀವನಕ್ಕೆ ಒಂದು ಉದ್ದೇಶ ಇದೆ ಅಂತ ಅನಿಸಿತು.

1110
01:35:02,375 --> 01:35:03,708
ಯಾವಾಗ ಬರುತ್ತಾಳೆ ಅಂತ ಕಾಯುತ್ತಿದ್ದೆ.

1111
01:35:05,958 --> 01:35:07,833
ಅಪಾಯದ ಅರಿವಿದ್ದರೂ ನಾನು ಮುಂದುವರೆದೆ.

1112
01:35:09,083 --> 01:35:13,541
ನೀನು ಅವಳನ್ನು ಚೆನ್ನಾಗಿ ಬೆಳೆಸಿ,
ಅವಳಿಗೆ ಒಳ್ಳೆಯ ಜೀವನ ಕೊಟ್ಟಿದ್ದೀಯ.

1113
01:35:16,875 --> 01:35:20,125
ಹಾಗಾಗಿ, ಏನೇ ಆಗಲಿ, ಇಜ಼ಿ,
ನೀನು ನಾಚಿಕೆ ಪಡುವಂಥದ್ದೇನೂ ಇಲ್ಲ.

1114
01:35:22,958 --> 01:35:23,791
ಏನೂ ಇಲ್ಲ.

1115
01:36:02,916 --> 01:36:04,957
- ಹೇ, ಬಂದಿದ್ದಕ್ಕೆ ಥ್ಯಾಂಕ್ಸ್.
- ಪರವಾಗಿಲ್ಲ.

1116
01:36:04,958 --> 01:36:06,500
ನಮಗೆ ಮಾಡಲು ತುಂಬಾ ಕೆಲಸ ಇದೆ.

1117
01:36:07,291 --> 01:36:10,375
ನಮ್ಮ ಬಳಿ ಒಂದೆರಡು ಪರಿಹಾರ ಇದೆ,
ಆದರೆ ತುಂಬಾ ಜಟಿಲವಾದವು.

1118
01:36:14,791 --> 01:36:15,833
ನನಗೆ ಅದು ಕೊಡಿ.

1119
01:36:29,208 --> 01:36:31,458
ಅದು ಒಳ್ಳೆಯ ಸುದ್ದಿ, ಥ್ಯಾಂಕ್ಸ್.

1120
01:36:38,750 --> 01:36:40,083
- ಹೂಲಿಯನ್.
- ಇಸೊಲ್ದೆ.

1121
01:36:40,791 --> 01:36:42,208
ಹಾಯ್. ಕುಳಿತುಕೋ.

1122
01:36:45,708 --> 01:36:46,708
ನಾನು…

1123
01:36:50,041 --> 01:36:52,541
ನನ್ನ ಬಳಿ ನಿಮಗೆ ಸೇರಿದ ಒಂದು ವಸ್ತು ಇದೆ.

1124
01:36:58,875 --> 01:37:00,208
ನಾನು ಎಂಟು ವರ್ಷದವನಿದ್ದಾಗ,

1125
01:37:01,416 --> 01:37:04,250
ಅಪ್ಪ ತನ್ನ ಮೊದಲ ಪ್ರೇಮಕ್ಕೆ
ಬರೆದ ಪತ್ರಗಳು ನನಗೆ ಸಿಕ್ಕವು.

1126
01:37:05,916 --> 01:37:07,916
ಅವು ಯಾರಿಗಾಗಿ ಎಂದು
ನಾನು ಯಾವಾಗಲೂ ಯೋಚಿಸುತ್ತಿದ್ದೆ.

1127
01:37:10,250 --> 01:37:13,166
ಆದರೆ ಈಗ ಇಜ಼ಿ ಯಾರೆಂದು ನನಗೆ ಗೊತ್ತು.

1128
01:37:24,458 --> 01:37:25,291
ಹಾಯ್.

1129
01:37:27,875 --> 01:37:29,375
- ಹೇ.
- ವೈದ್ಯರ ಜೊತೆ ಮಾತಾಡಿದೆಯಾ?

1130
01:37:30,125 --> 01:37:32,500
ನಾನು… ಇಲ್ಲ. ಇಲ್ಲ, ನಾನು…

1131
01:37:33,708 --> 01:37:36,125
ಇನ್ನೂ ಮಾತಾಡಿಲ್ಲ.
ಅದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಆದರೆ…

1132
01:37:38,208 --> 01:37:41,416
ಒಂದು ಹೊಸ ಸುದ್ದಿ ಇದೆ.

1133
01:37:48,541 --> 01:37:51,958
ಹೋಟೆಲ್ ನಿರ್ಮಿಸಲು ನಿನಗೆ ಹೊಸ ಭೂಮಿ ಸಿಕ್ಕಿದೆ.

1134
01:37:54,916 --> 01:37:56,750
ನಿನಗೆ ನಿನ್ನ ವ್ಯವಹಾರ ಎಷ್ಟು ಇಷ್ಟ ಅಂತ ಗೊತ್ತು.

1135
01:37:57,791 --> 01:37:59,875
ಈಗಾಗಲೇ ತುಂಬಾ ತಡವಾಗಿದೆ ಅಂದುಕೊಂಡಿದ್ದೆ, ಆದರೆ…

1136
01:38:00,583 --> 01:38:01,583
ಇನ್ನು ತಡವಾಗಿಲ್ಲ.

1137
01:38:04,666 --> 01:38:06,750
ನೀನು ಹೇಳಿದ್ದು ಸರಿ. ಇದು ನನ್ನ ಮನೆ.

1138
01:38:08,333 --> 01:38:09,666
ಮತ್ತು ನಾನು ಇದನ್ನು ರಕ್ಷಿಸಬೇಕು.

1139
01:38:10,791 --> 01:38:11,666
ಆದ್ದರಿಂದ…

1140
01:38:13,000 --> 01:38:15,000
ನಾವು ನಿನ್ನ ವ್ಯವಹಾರದಲ್ಲಿ
ಹೂಡಿಕೆ ಮಾಡುತ್ತಿದ್ದೇವೆ.

1141
01:38:17,625 --> 01:38:18,708
ರೈಗೆ ಇದು ಇಷ್ಟವಾಗುತ್ತೆ.

1142
01:38:19,958 --> 01:38:20,833
ನನಗೂ ಇದೇ ಇಷ್ಟ.

1143
01:38:23,625 --> 01:38:27,125
ನಾವು ನಿಮಗೂ ಇಂತಹ ಒಂದು ಶರ್ಟ್‌ ತಂದುಕೊಡಬೇಕು.

1144
01:38:32,708 --> 01:38:34,332
ಥ್ಯಾಂಕ್ಸ್, ಇಜ಼ಿ.

1145
01:38:34,333 --> 01:38:36,166
ಒಟ್ಟಿಗೆ ಕೆಲಸ ಮಾಡೋದು ಖುಷಿ.

1146
01:38:46,333 --> 01:38:47,333
ನನಗೆ ದೋಣಿ ಇಷ್ಟವಾಯಿತು.

1147
01:38:48,083 --> 01:38:48,916
ಚೆನ್ನಾಗಿದೆ.

1148
01:38:50,250 --> 01:38:51,083
ಒಂದು ಸೆಕೆಂಡ್.

1149
01:38:53,625 --> 01:38:54,458
ಹೇಳಿ.

1150
01:38:56,041 --> 01:38:57,207
ಈಗಲೇ ಬರುತ್ತೇನೆ.

1151
01:38:57,208 --> 01:38:58,041
ಅವಳಿಗೆ ಎಚ್ಚರವಾಗಿದೆ!

1152
01:39:01,916 --> 01:39:03,166
ಮರಳಿ ಸ್ವಾಗತ, ಚಿನ್ನ.

1153
01:39:05,458 --> 01:39:06,291
ರೈ.

1154
01:39:13,291 --> 01:39:17,125
ನನ್ನ ನೆನಪುಗಳು ಒಂದೊಂದಾಗಿ ವಾಪಸ್ ಬರುತ್ತಿವೆ.

1155
01:39:21,083 --> 01:39:22,833
ನಾನು ಅವನನ್ನು ಮುಟ್ಟಬಹುದು ಅನಿಸುತ್ತದೆ.

1156
01:39:24,541 --> 01:39:25,875
ನನಗೆ ಪರಿಚಿತನಾಗಿದ್ದ ವ್ಯಕ್ತಿ.

1157
01:39:30,708 --> 01:39:31,541
ನಾನು ಯೋಚಿಸುತ್ತೇನೆ…

1158
01:39:34,666 --> 01:39:36,500
ವಿಧಿ ನನ್ನನ್ನು ಇಲ್ಲಿಯೂ ಹಿಂಬಾಲಿಸುತ್ತದೆಯೇ?

1159
01:39:42,333 --> 01:39:44,583
ನಾನು ಒಮ್ಮೆ ಯೋಚಿಸಿದ್ದ ನನ್ನ ಕೊನೆಯ ಬೇಸಿಗೆ,

1160
01:39:45,916 --> 01:39:47,916
ನನ್ನ ಮೊದಲ ಮತ್ತು ಕೊನೆಯ ಸೂರ್ಯೋದಯ,

1161
01:39:51,416 --> 01:39:54,375
ನನ್ನ ಜೀವನದ ಆರಂಭಕ್ಕೆ ಬುನಾದಿಯಾಯಿತು.

1162
01:40:03,208 --> 01:40:04,083
ನಾನು ಹೂಲಿಯನ್.

1163
01:40:06,083 --> 01:40:08,708
ದ ಲಾಸ್ಟ್ ಸನ್‌ರೈಸ್

1164
01:44:50,208 --> 01:44:52,290
ಉಪ ಶೀರ್ಷಿಕೆ ಅನುವಾದ: ನಾಗರತ್ನ ಹೆಚ್ ಎಂ

1165
01:44:52,291 --> 01:44:54,291
ಸೃಜನಾತ್ಮಕ ಮೇಲ್ವಿಚಾರಕರು ಅಭಿಜಿತ್ ರ



